ಭಾರತದಲ್ಲಿ ಕ್ರಿಕೆಟ್ ಆಟಕ್ಕೆ ವಿಶೇಷ ಸ್ಥಾನಮಾನವನ್ನು ಹೊಂದಿದೆ. ಟೀಮ್ ಇಂಡಿಯಾ ಆಟಗಾರರ ಸಾಧನೆಗಳು ರಾಷ್ಟ್ರಕ್ಕೆ ಹೆಮ್ಮೆ ತಂದಿದೆ. ಹೀಗಾಗಿ ಟೀಮ್ ಇಂಡಿಯಾ ಆಟಗಾರರು ಮತ್ತು ಕ್ರಿಕೆಟ್ ಅಭಿಮಾನಿಗಳ ನಡುವೆ ಉತ್ತಮ ಸಂಬಂಧವಿದೆ. ಕ್ರಿಕೆಟ್ ಬೆಳೆದಂತೆ, ಆಟಗಾರರ ಫಿಟ್ನೆಸ್, ದಾಖಲೆಗಳು ಮತ್ತು ಪ್ರದರ್ಶನಗಳು ನಿರಂತರವಾಗಿ ಉತ್ತಮವಾಗಿರಬೇಕು. ಆಗ ಮಾತ್ರ ಆಟಗಾರನ ಜನಪ್ರಿಯತೆ ಜೊತೆಗೆ ಜೀವನ ಶೈಲಿಯಲ್ಲಿ ಬದಲಾವಣೆಯಾಗಲಿವೆ. ಭಾರತದಲ್ಲಿ ಇದಕ್ಕೆ ಹಲವು ಅವಕಾಶಗಳಿದ್ದು, ಪೈಪೋಟಿ ಆಟಗಾರರ ಇದೆ.
ಇನ್ನು ಹಲವು ಆಟಗಾರರು ಸಿಕ್ಕ ಅವಕಾಶವನ್ನು ಬಳಸಿಕೊಂಡು ಸ್ಟಾರ್ ಗೀರಿ ಪಡೆದುಕೊಳ್ಳುತ್ತಾರೆ. ಈ ಆಟಗಾರರು ತಮ್ಮ ಜೀವನ ಶೈಲಿಯನ್ನು ಸಹ ಅಪ್‌ಗ್ರೇಡ್ ಮಾಡಿಕೊಳ್ಳುತ್ತಾರೆ. ಆಟಗಾರರು ಐಶಾರಾಮಿ ವಸ್ತುಗಳ ಮೇಲೆ ಹೆಚ್ಚಿನ ಪ್ರೀತಿ ಹೊದಿರುತ್ತಾರೆ. ಅಂತೆಯೇ ಕಾರ್‌ಗಳ ಮೇಲೂ ವಿಶೇಷ ಪ್ರೀತಿ ಹೊಂದಿರುತ್ತಾರೆ. ಟೀಮ್ ಇಂಡಿಯಾ ಆಟಗಾರರ ಬಳಿ ಇರುವು ದುಬಾರಿ ಕಾರ್‌ಗಳ ಬಗ್ಗೆ ವರದಿ ಇಲ್ಲಿದೆ.
ಟೀಮ್ ಇಂಡಿಯಾ ಮಾಜಿ ಆರಂಭಿಕ ಬ್ಯಾಟರ್ ಶಿಖರ್ ಧವನ್ ಐಷಾರಾಮಿ ಕಾರುಗಳಿಗೆ ಮಾಲೀಕರಾಗಿದ್ದಾರೆ. ಧವನ್ ಸೆಪ್ಟೆಂಬರ್ 2021 ರಲ್ಲಿ BMW M8 ಕೂಪೆಯನ್ನು ಖರೀದಿಸಿದರು. ಈ ಕಾರಿನ ಬೆಲೆ 2 ಕೋಟಿ ರೂ.ಗಳು. ಅಂದು ಭಾರತದಲ್ಲಿ ದುಬಾರಿ ಬಿಎಂಡ್ಲ್ಯೂ ಕಾರು ಎನಿಸಿಕೊಂಡಿದ ಈ ಮಾದರಿಯು 4.4-ಲೀಟರ್ ಟ್ವಿನ್-ಟರ್ಬೊ V8 ಎಂಜಿನ್ ಅನ್ನು ಹೊಂದಿದೆ. 592 Bhp ಮತ್ತು 750 Nm ಟಾರ್ಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಸ್ಪೋಟಕ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರು ಐಷಾರಾಮಿ Mercedes-Benz SUV ಅನ್ನು ಹೊಂದಿದ್ದು, ಇದರ ಬೆಲೆ ಸುಮಾರು 2.45 ಕೋಟಿ ರೂ. ಸೆಲೆನೈಟ್ ಮೆಟಾಲಿಕ್ ಗ್ರೇ ಬಣ್ಣದ ಈ G63 AMG ಮಾದರಿಯು 4-ಲೀಟರ್ V8 ಬಿಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 576 bhp ಮತ್ತು 850 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಟೀಮ್ ಇಂಡಿಯಾ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಲೋಕದಲ್ಲಿ ಹಲವು ಅಳಿಸಲಾಗದ ದಾಖಲೆಗಳನ್ನು ಮಾಡಿದ್ದಾರೆ. ಸಚಿನ್ ಮೈದಾನದಲ್ಲಿ ಮಾತ್ರವಲ್ಲದೆ, ದುಬಾರಿ ಕಾರು ಖರೀದಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸಚಿನ್ ಭಾರತದಲ್ಲಿ BMW ಗೆ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಅವರು BMW i8 ಕಾರನ್ನು ಹೊಂದಿದ್ದಾರೆ.

ರನ್ ಮಷಿನ್ ಎಂದು ಕರೆಸಿಕೊಳ್ಳುವ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಪಾರ ಯಶಸ್ಸನ್ನು ಕಂಡಿದ್ದಾರೆ. ಅವರ ಬ್ರ್ಯಾಂಡ್ ಮೌಲ್ಯವು 1600 ಕೋಟಿ ರೂ. ಗಳನ್ನು ಮೀರಿದೆ. ಈ ಮೂಲಕ ಅವರು ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ. ಕೊಹ್ಲಿ ಆಡಿ R8 V10 ಅನ್ನು ಹೊಂದಿದ್ದಾರೆ. ಈ ಕಾರಿನ ಬೆಲೆ 3 ಕೋಟಿ ರೂ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಕಳೆದ ವರ್ಷ, ಅವರು ರಾಸ್ ಅಲಾಲಾ (ಚೆರ್ರಿ ರೆಡ್) ಮತ್ತು ನೀರೋ (ಕಪ್ಪು) ಡ್ಯುಯಲ್-ಟೋನ್ ಸಂಯೋಜನೆಯೊಂದಿಗೆ ಕಸ್ಟಮೈಸ್ ಮಾಡಿದ ಲಂಬೋರ್ಗಿನಿ ಉರಸ್ ಅನ್ನು ಖರೀದಿಸಿದ್ದಾರೆ. ಈ ಕಾರಿನ ಬೆಲೆ ಸುಮಾರು 3.5 ಕೋಟಿ ರೂಪಾಯಿ ಆಗಿದೆ.
ತಮ್ಮ ಆಟದ ಜೊತೆಗೆ ತಮ್ಮಐಶಾರಾಮಿ ಜೀವನದ ಶೈಲಿಯಿಂದ ಗುರುತಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ, ಅವರಿಗೆ ಐಷಾರಾಮಿ ಕಾರುಗಳ ಬಗ್ಗೆ ಒಲವಿದೆ. ಅವರು ಲಂಬೋರ್ಗಿನಿ ಹುರಾಕನ್ ಇವೊವನ್ನು ಹೊಂದಿದ್ದಾರೆ.
ಮಾಜಿ ವಿಶ್ವ ಚಾಂಪಿಯನ್ ಆಟಗಾರ ಯುವರಾಜ್ ಸಿಂಗ್ ಅವರು ಲಂಬೋರ್ಗಿನಿ ಮುರ್ಸಿಲಾಗೊವನ್ನು ಹೊಂದಿದ್ದಾರೆ. ಇನ್ನು ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಸುರೇಶ್ ರೈನಾ ಅವರು ಬೆಂಟ್ಲಿ ಕಾಂಟಿನೆಂಟಲ್ ಜಿಟಿ, ಭಾರತ ತಂಡದ ಸ್ಟಾರ್ ವಿಕೆಟ್‌ಕೀಪರ್ ಮತ್ತು ಬ್ಯಾಟರ್ ಕೆಎಲ್ ರಾಹುಲ್ ಅವರ ಬಳಿಯೂ ದುಬಾರಿ ಕಾರಿದೆ. ರಾಹುಲ್ Mercedes-AMG GLE 53 ಕೂಪೆಯನ್ನು ಹೊಂದಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಆಡಿ ಕ್ಯೂ7 ಅನ್ನು ಹೊಂದಿದ್ದಾರೆ. ಈ ಕಾರಿನ ಬೆಲೆ ಸುಮಾರು 1 ಕೋಟಿ ರೂ.ಗಳಾಗಿದೆ.