WPL Auction 2026: ದುಬಾರಿ ಬೆಲೆಗೆ ಹರಾಜಾದ ಟಾಪ್ 10 ಆಟಗಾರ್ತಿಯರು
ಮಹಿಳಾ ಪ್ರೀಮಿಯರ್ ಲಿಗ್‌ನ ಹರಾಜು ನವದೆಹಲಿಯಲ್ಲಿ ಗುರುವಾರ ನಡೆದಿದೆ. ನಿರೀಕ್ಷೆಯಂತೆ ಸ್ಟಾರ್ ಪ್ಲೇಯರ್‌ಗಳು ದೊಡ್ಡ ಮೊತ್ತವನ್ನು ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ. ಈ ವೇಳೆ ಮಾಲೀಕರು ತಮ್ಮ ತಂಡದ ಸಂಯೋಜನೆಗೆ ತಕ್ಕಂತೆ ಆಟಗಾರ್ತಿಯರನ್ನು ಆಯ್ಕೆ ಮಾಡಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ದೀಪ್ತಿ ಶರ್ಮಾ ಅವರಿಗೆ ಯುಪಿ ವಾರಿಯರ್ಜ್ ದೊಡ್ಡ ಮೊತ್ತವನ್ನು ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.
ಭಾರತದಲ್ಲಿ ನಡೆದಿದ್ದ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಿಂಚಿದ್ದ ಸ್ಟಾರ್ ಆಟಗಾರ್ತಿ ದೀಪ್ತಿ ಶರ್ಮಾ ಅವರನ್ನು ಯುಪಿ ವಾರಿಯರ್ಜ್ ತಂಡದಲ್ಲಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಆದರೆ ಹರಾಜಿನಲ್ಲಿ ಆರ್‌ಟಿಎಂ ಕಾರ್ಡ್ ಬಳಸಿ ತಂಡ ದೀಪ್ತಿ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಇವರು ಪ್ರಸಕ್ತ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನ ದುಬಾರಿ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕಳೆದ ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದ ಅಮೆಲಿಯಾ ಕೆರ್, ಈ ಬಾರಿಯೂ ಮುಂಬೈ ತಂಡದ ಜೆರ್ಸಿಯಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲೇ ಬೇಕು ಎಂಬ ಹಠಕ್ಕೆ ಬಿದ್ದಿದ್ದ ಮುಂಬೈ ಬರೋಬ್ಬರಿ 3 ಕೋಟಿ ರೂ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.
ದುಬಾರಿ ಮೊತ್ತಕ್ಕೆ ಹರಾಜಾದ ಆಟಗಾರ್ತಿಯರು.
ದೀಪ್ತಿ ಶರ್ಮಾ, ಯುಪಿ ವಾರಿಯರ್ಜ್, 3.2 ಕೋಟಿ ರೂ.
ಅಮೆಲಿಯಾ ಕೆರ್, ಮುಂಬೈ ಇಂಡಿಯನ್ಸ್, 3 ಕೋಟಿ ರೂ.
ಶಿಖಾ ಪಾಂಡೆ, ಯುಪಿ ವಾರಿಯರ್ಜ್, 2.4 ಕೋಟಿ ರೂ.
ಸೋಫಿ ಡಿವೈನ್, ಗುಜರಾತ್ ಜೈಂಟ್ಸ್, 2 ಕೋಟಿ ರೂ.
ಮೆಗ್ ಲ್ಯಾನಿಂಗ್, ಯುಪಿ ವಾರಿಯರ್ಜ್, 1.9 ಕೋಟಿ ರೂ.
ಚಿನೆಲ್ಲೆ ಹೆನ್ರಿ, ಡೆಲ್ಲಿ ಕ್ಯಾಪಿಟಲ್ಸ್, 1.3 ಕೋಟಿ ರೂ.
ಶ್ರೀ ಚರಣಿ, ಡೆಲ್ಲಿ ಕ್ಯಾಪಿಟಲ್ಸ್, 1.3 ಕೋಟಿ ರೂ.
ಫೋಬೆ ಲಿಚ್ಫೀಲ್ಡ್, ಯುಪಿ ವಾರಿಯರ್ಜ್, 1.2 ಕೋಟಿ ರೂ.
ಲಾರಾ ವೊಲ್ವಾರ್ಡ್ಟ್, ಡೆಲ್ಲಿ ಕ್ಯಾಪಿಟಲ್ಸ್, 1.1 ಕೋಟಿ ರೂ.
ಆಶಾ ಸೋಭಾನ ಜಾಯ್, ಯುಪಿ ವಾರಿಯರ್ಜ್, 1.1 ಕೋಟಿ ರೂ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications