Year Ender 2024: ಭಾರತ ಕ್ರೀಡಾ ಕ್ಷೇತ್ರದಲ್ಲಿ ಈ ವರ್ಷ ಕಾಣಿಸಿಕೊಂಡ ವಿವಾದಗಳು
2024ರಲ್ಲಿ ಭಾರತದ ಕ್ರೀಡಾ ಪಟುಗಳು ಮೈದಾನದಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಹಲವು ಕ್ರೀಡಾ ವಿಭಾಗದಲ್ಲಿ ಕ್ರೀಡಾಪಟುಗಳು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಅಥ್ಲೀಟ್‌ಗಳು ಪದಕದ ಬೇಟೆ ನಡೆಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಇನ್ನು ಇತ್ತೀಚಿಗೆ ನಡೆದ ವಿಶ್ವ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಭಾರತದ ಡಿ.ಗುಕೇಶ್ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. ಇನ್ನು ಭಾರತ ಕ್ರೀಡಾ ಕ್ಷೇತ್ರದಲ್ಲಿ ಈ ವರ್ಷವೂ ವಿವಾದಗಳಿಂದ ಕೂಡಿದೆ. ಭಾರತೀಯ ಕ್ರೀಡಾ ಜಗತ್ತಿನಲ್ಲಿ 3 ದೊಡ್ಡ ವಿವಾದಗಳ ಬಗ್ಗೆ ವರದಿ ಇಲ್ಲಿದೆ.
ಭಾರತದ ಅಥ್ಲೀಟ್‌ಗಳು ಎಲ್ಲರ ಗಮನ ಸೆಳೆದ ಕುಸ್ತಿ ಪಟು ವಿನೇಶ್ ಪೋಗಟ್ ವಿವಾದಕ್ಕೆ ಆಹಾರವಾದರು. ಅಸಲಿಗೆ ಭಾರತದ ಕುಸ್ತಿ ಪಟು ವಿನೇಶ್ ಪೋಗಟ್ ಅವರು ಮಹಿಳೆಯರ 50 ಕೆಜಿ ಫ್ರೀ ಸ್ಟೈಲ್ ಕುಸ್ತಿ ವಿಭಾಗದಲ್ಲಿ ಸೆಮಿಫೈನಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿ, ಫೈನಲ್‌ಗೆ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದರು. ಆದರೆ ಫೈನಲ್‌ಗೂ ಮುನ್ನ ಇವರ ತೂಕ ಏರಿಕೆ ಆಗಿತ್ತು. ನಿಗದಿತ ತೂಕಕ್ಕಿಂತ ನೂರು ಗ್ರಾಮ್ ತೂಕ ಹೆಚ್ಚಾಗಿದ್ದರಿಂದ ಇವರನ್ನು ಅನರ್ಹ ಗೊಳಿಸಲಾಯಿತು. ಈ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಯಿತು.

ಇಶಾನ್, ಶ್ರೇಯಸ್‌ಗೆ ಪೆಟ್ಟು
ಭಾರತದ ಭರವಸೆಯ ಆಟಗಾರರಾದ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಅವರಿಗೆ ಈ ಬಾರಿ ಬಿಸಿಸಿಐ ಶಾಕ್ ನೀಡಿದೆ. ಬಿಸಿಸಿಐ ನಿಯಮಗಳನ್ನು ಗಾಳಿಗೆ ತೂರಿದ ಕಾರಣ ಈ ಇಬ್ಬರು ಸ್ಟಾರ್ ಆಟಗಾರರನ್ನು ಬಿಸಿಸಿಐ ಕೇಂದ್ರ ಒಪ್ಪಂದದಿಂದ ಹೊರಗಿಡಲಾಗಿತ್ತು. ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಇಶಾನ್ ಕಿಶನ್ ವೈಯಕ್ತಿಕ ಕಾರಣಗಳಿಂದ ವಿರಾಮ ತೆಗೆದುಕೊಂಡಿದ್ದರು. ಈ ವೇಳೆ ಇವರಿಗೆ ದೇಶೀಯ ಟೂರ್ನಿಯಲ್ಲಿ ಆಡುವಂತೆ ಸೂಚಿಸಲಾಗಿತ್ತು. ಆದರೆ ಇದಕ್ಕೆ ಸೊಪ್ಪು ಹಾಕದ ಇಶಾನ್ ಕಿಶನ್, ಅಹಮದಾಬಾದ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರೊಂದಿಗೆ ತರಬೇತಿ ನಡೆಸಿದ ಫೋಟೋ ವೈರಲ್ ಆಗಿತ್ತು.
ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಸಮಯದಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಭಾರತ ತಂಡದಿಂದ ಕೈ ಬಿಡಲಾಗಿತ್ತು. ಅಲ್ಲದೆ ಇವರಿಗೆ ರಣಜಿ ಟ್ರೋಫಿ ಆಡುವಂತೆ ಸೂಚಿಸಲಾಗಿತ್ತು. ಗಾಯದ ಸಮಸ್ಯೆಯಿಂದ ರಣಜಿ ಟೂರ್ನಿಯಿಂದ ಹೊರ ಬೀಳಬೇಕಾಯಿತು. ಅಲ್ಲದೆ ಇವರಿಬ್ಬರನ್ನು ಬಿಸಿಸಿಐ ಕೇಂದ್ರ ಒಪ್ಪಂದದಿಂದ ಹೊರಗುಳಿಯಬೇಕಾಯಿತು.

ರಾಹುಲ್, ಗೋಯೆಂಕಾ ಮಾತಿನ ಚಕಮಕಿ
ಐಪಿಎಲ್ 2024ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಂದ್ಯದ ಸೋತಿತು. ಎಲ್‌ಎಸ್‌ಜಿ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋತಾಗ ನಾಯಕ ಕೆಎಲ್ ರಾಹುಲ್ ಹಾಗೂ ಮಾಲೀಕ ಸಂಜೀವ್ ಗೋಯೆಂಕಾ ನಡುವೆ ವಾಗ್ವಾದ ನಡೆಯಿತು. ನಾಯಕ ಹಾಗೂ ಮಾಲೀಕರ ನಡುವಿನ ಚಕಮಕಿ ಭಾರೀ ವಿವಾದ ಸೃಷ್ಟಿಸಿತ್ತು. ಅನೇಕ ಅಭಿಮಾನಿಗಳು ಭಾರತೀಯ ಕ್ರಿಕೆಟಿಗನನ್ನು ಸಾರ್ವಜನಿಕವಾಗಿ ಅವಮಾನಿಸಿದ ಸಂಜೀವ್ ಗೋಯೆಂಕಾ ಅವರನ್ನು ತೀವ್ರವಾಗಿ ಟೀಕಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications