IPL 2025 auction: ಈ ಮೂವರು ಮಿಡ್ಲ್ ಆರ್ಡರ್ ಬ್ಯಾಟರ್‌ಗಳೇ RCB ಟಾರ್ಗೆಟ್
ಐಪಿಎಲ್ 2025ರ ತಯಾರಿಗಳು ಭರದಿಂದ ಸಾಗಿವೆ. ಇನ್ನು ಈ ಮಹಾನ್ ಟೂರ್ನಿಗೆ ಬಹುದಿನಗಳೇ ಬಾಕಿ ಇದ್ದರೂ, ರೋಚಕತೆ ಹುಟ್ಟಿಸಿದೆ. ಇದಕ್ಕೆ ಕಾರಣ ಈ ಬಾರಿ ಐಪಿಎಲ್‌ನಲ್ಲಿ ಮೆಗಾ ಹರಾಜು ನಡೆಯಲಿದೆ. ಹೀಗಾಗಿ ಯಾವ ತಂಡ ಯಾರಿಗೆ ಮಣೆ ಹಾಕಬಹುದು ಎಂಬ ಲೆಕ್ಕಾಚಾರಗಳು ಆರಂಭವಾಗಿವೆ. ಆರ್‌ಸಿಬಿ ಸಹ ಈ ನಿಟ್ಟಿನಲ್ಲಿ ಭರ್ಜರಿ ತಯಾರಿ ನಡೆಸಿದೆ.
ಐಪಿಎಲ್ ಮಾಲೀಕರ ಮುಂದೆ ಈಗ ಹಲವು ಪ್ರಶ್ನೆಗಳು ಇವೆ. ಅದರಲ್ಲಿ ಪ್ರಮುಖವಾದವು ಎಂದರೆ ರಿಟೇನ್ ಆಟಗಾರರ ಲೀಸ್ಟ್. ಇದಾದ ಬಳಿಕ ಹಾರಜು. ಈ ಸವಾಲುಗಳನ್ನು ಮೆಟ್ಟಿನಿಲ್ಲುವುದು ಹೇಗೆ ಎಂಬ ಪ್ಲ್ಯಾನ್‌ಗಳು ನಡೆಯುತ್ತಿವೆ. ಆರ್‌ಸಿಬಿ ಸಹ ಮುಂಬರುವ ಹರಾಜಿನಲ್ಲಿ ಯಾವೆಲ್ಲಾ ಆಟಗಾರರನ್ನು ಖರೀದಿಸಬೇಕು ಎಂಬ ಲೆಕ್ಕಾಚಾರಗಳನ್ನು ಆರಂಭಿಸಿದೆ.

ಆರ್‌ಸಿಬಿ ಎಡವುದು ಎಲ್ಲಿ?
ಆರ್‌ಸಿಬಿ ತಂಡದಲ್ಲಿ ಸ್ಟಾರ್ ಆಟಗಾರರೇ ದಂಡೇ ಇದೆ. ಆದರೂ ಸಹ ಆರ್‌ಸಿಬಿ ಒಮ್ಮೆಯೂ ಐಪಿಎಲ್ ಪ್ರಶಸ್ತಿಗೆ ಮುತ್ತಿಟ್ಟಿಲ್ಲ. ಈ ಪ್ರಶಸ್ತಿ ಬರವನ್ನು ಕೊನೆಗೊಳಿಸಲು ಆರ್‌ಸಿಬಿ ಮ್ಯಾನೇಜ್ಮೆಂಟ್ ಈ ಬಾರಿ ಸರಿಯಾದ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಅಂದಹಾಗೆ ಆರ್‌ಸಿಬಿಗೆ ಮೊದಲಿನಿಂದಲೂ ಇದ್ದ ಚಿಂತೆ ಅಂದರೆ, ಡೆತ್ ಓವರ್ ಬೌಲಿಂಗ್ ಹಾಗೂ ಮಿಡ್ಲ್ ಆರ್ಡರ್ ಬ್ಯಾಟಿಂಗ್ ನದ್ದಾಗಿದೆ. ಈ ನಿಟ್ಟಿನಲ್ಲಿ ಈ ವಿಭಾಗವನ್ನು ಸರಿದೂಗಿಸಿಕೊಳ್ಳಲು ಆರ್‌ಸಿಬಿ ಈ ಹರಾಜಿನಲ್ಲಿ ಶ್ರಮಿಸಲಿದೆ.
ಮಿಡ್ಲ್ ಆರ್ಡರ್ ಬ್ಯಾಟರ್ ಟಾರ್ಗೆಟ್
ಆರ್‌ಸಿಬಿ ತಂಡದಲ್ಲಿ ಟಾಪ್ ಆರ್ಡರ್ ಬ್ಯಾಟರ್‌ಗಳು ಇದ್ದಾರೆ. ವಿರಾಟ್ ಕೊಹ್ಲಿ, ಫಾಫ್ ಡುಪ್ಲೇಸಿಸ್, ರಜತ್ ಪಟೀದಾರ್, ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡುವ ಕ್ಷಮತೆಯನ್ನು ಹೊಂದಿದ್ದಾರೆ. ಆದರೆ ಮಿಡ್ಲ್ ಆರ್ಡರ್ ಬ್ಯಾಟರ್ ಸಮಸ್ಯೆ ತಂಡಕ್ಕೆ ಬಹುವಾಗಿ ಕಾಡುತ್ತಿದೆ. ಈ ನಿಟ್ಟಿನಲ್ಲಿ ಆರ್‌ಸಿಬಿ ಈ ಹರಾಜಿನಲ್ಲಿ ಮಿಡ್ಲ್ ಆರ್ಡರ್ ಬ್ಯಾಟರ್‌ಗಳನ್ನೇ ಟಾರ್ಗೆಟ್ ಮಾಡಲಿದೆ.
ಶಿವಂ ದುಬೆ
ಆರ್‌ಸಿಬಿ ತಂಡದಲ್ಲಿದ್ದ ಅನುಭವಿ ಆಟಗಾರ ಶಿವಂ ದುಬೆ ಅವರಿಗೆ ಹರಾಜಿನಲ್ಲಿ ಹಣವನ್ನು ಸುರಿಯುವ ಸಾಧ್ಯತೆ ಇದೆ. ಕಳೆದ ಆವೃತ್ತಿಯ ಆರಂಭಿಕ ಪಂದ್ಯಗಳಲ್ಲಿ ಶಿವಂ ದುಬೆ ಅಮೋಘ ಪ್ರದರ್ಶನ ನೀಡಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನೆರವಾಗಿದ್ದರು. ಡೆತ್ ಓವರ್‌ಗಳಲ್ಲಿ ಬಿಗ್ ಹಿಟ್ ಬಾರಿಸುವ ಇವರನ್ನು ತಂಡಕ್ಕೆ ಸೇರಿಸಿಕೊಂಡಲ್ಲಿ, ಬ್ಯಾಟಿಂಗ್ ಬಲ ಹೆಚ್ಚುತ್ತದೆ ಎಂಬ ಲೆಕ್ಕಾಚಾರ ಆರ್‌ಸಿಬಿ ತಂಡದ್ದಾಗಿದೆ. ಅಲ್ಲದೆ ಬಿಗ್ ಮ್ಯಾಚ್‌ಗಳನ್ನು ಆಡುವ ಅನುಭವ ಇವರಿಗಿದ್ದು, ಇವರಿಗೆ ಬಾಜಿ ಕಟ್ಟಬಹುದು.

ರಾಹುಲ್ ತ್ರಿಪಾಠಿ
ಮಿಡ್ಲ್ ಆರ್ಡರ್ ಸ್ಥಾನಕ್ಕೆ ಸೂಕ್ತ ಆಟಗಾರ ಎಂದರೆ ರಾಹುಲ್ ತ್ರಿಪಾಠಿ. ಇವರು ಬಿಗ್ ಇನಿಂಗ್ಸ್‌ಗಳನ್ನು ಆಡಿ ಪ್ರಭಾವ ಬೀರದೆ ಇರಬಹುದು. ಆದರೆ ಮಹತ್ವದ ಸಮಯದಲ್ಲಿ ಕ್ರೀಸ್‌ನಲ್ಲಿ ನಿಂತು ಆಂಕರ್ ರೋಲ್ ಪ್ಲೇ ಮಾಡುತ್ತಾರೆ. ಸ್ಪಿನ್ ಬೌಲಿಂಗ್ ಇವರು ಆಡುವ ಧಾಟಿ ಮಾಲೀಕರು ಇವರನ್ನು ನೋಡುವಂತೆ ಮಾಡುತ್ತದೆ. ಅಲ್ಲದೆ ಮಿಡ್ಲ್ ಓವರ್‌ಗಳಲ್ಲಿ ಸ್ಟ್ರೈಕ್ ರೋಟೇಟ್ ಮಾಡುವುದು ತುಂಬ ಚೆನ್ನಾಗಿದೆ. ಹೀಗಾಗಿ ಆರ್‌ಸಿಬಿ ಈ ಪ್ಲೇಯರ್ ಮೇಲು ಕಣ್ಣು ನೆಟ್ಟಿದೆ.
ಹ್ಯಾರಿ ಬ್ರೂಕ್
ಇಂಗ್ಲೆಂಡ್ ತಂಡದ ಹ್ಯಾರಿ ಬ್ರೂಕ್ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಬಿರುಸಿನ ಬ್ಯಾಟಿಂಗ್‌ನಿಂದಲೇ ಸದ್ದು ಮಾಡಿರುವ ಆಟಗಾರ. ಇವರು ಟಾಪ್ ಆರ್ಡರ್‌ನಲ್ಲಿ ಬ್ಯಾಟ್ ಮಾಡುವ ಬ್ಯಾಟರ್. ಆದರೆ ಇವರು ಮಿಡ್ಲ್ ಆರ್ಡರ್‌ನಲ್ಲೂ ಆಡುವ ಕ್ಷಮತೆ ಹೊಂದಿದ್ದಾರೆ. ವೇಗದ ಬೌಲರ್‌ಗಳ ವಿರುದ್ಧ ದೊಡ್ಡ ಹೊಡೆತಗಳನ್ನು ಬಾರಿಸುವ ಕ್ಷಮತೆ ಇವರಿಗಿದ್ದು, ಮಾಲೀಕರು ಬಾಜಿ ಕಟ್ಟುವಂತೆ ಮಾಡುತ್ತದೆ. ಇವರನ್ನು ತಂಡ ಖರೀದಿಸಿದರೆ ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಮಿಂಚು ಹರಿಸಬಲ್ಲರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications