Unsold IPL Players: ಬದಲಿ ಓಪನರ್ಸ್ ಆಗಿ ಮಿಂಚಲು ಸಿದ್ಧರಾಗಿರುವ ಮೂವರು ಆಟಗಾರರು
ಐಪಿಎಲ್ ಆರಂಭಕ್ಕೆ ಇನ್ನು ದಿನಗಳು ಬಾಕಿ ಇವೆ. ಈ ಶ್ರೀಮಂತ ಲೀಗ್ ಬಗ್ಗೆ ಈಗಾಗಲೇ ಮಾಲೀಕರು ಸಹ ತೆರೆ ಮರೆಯ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಈಗಾಗಲೇ ಟೂರ್ನಿ ನಡೆಯುವ ದಿನಾಂಕ ಪ್ರಕಟವಾಗಿದೆ. ಇನ್ನೇನಿದ್ದರೂ ವೇಳಾ ಪಟ್ಟಿ ಬಿಡುಗಡೆ ಆಗಬೇಕಿದೆ. ಈ ನಡುವೆ ಎಲ್ಲ ಆಟಗಾರರು ತಮ್ಮ ತಮ್ಮ ತಂಡದ ಸಂಯೋಜನೆಯತ್ತ ಗಮನವನ್ನು ಹರಿಸುತ್ತಿದ್ದಾರೆ. ಈಗಾಗಲೇ ಸೌದಿಯಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳು ತಮ್ಮ ಆಯ್ಕೆಯ ಆಟಗಾರರನ್ನು ತಂಡಕ್ಕೆ ಬರಮಾಡಿಕೊಂಡಿದ್ದಾರೆ.
ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್ ಆದವರ ಲೀಸ್ಟ್ ಸಹ ದೊಡ್ಡದಿದೆ. ಸ್ಟಾರ್ ಆಟಗಾರರು ಸಹ ಈ ಬಾರಿ ಮಾಲೀಕರ ಚಿತ್ತ ಕದಿಯುವಲ್ಲಿ ವಿಫಲರಾಗಿದ್ದಾರೆ. ಆ ಸ್ಟಾರ್ ಆಟಗಾರರು ಈಗ ಮತ್ತೊಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಈ ಪಟ್ಟಿಯಲ್ಲಿ ಪೃಥ್ವಿ ಶಾ, ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಶಾರ್ದೂಲ್ ಠಾಕೂರ್, ಜಾನಿ ಬೇರ್‌ಸ್ಟೋ, ಡೇರಲ್ ಮಿಚೆಲ್, ಮಯಾಂಕ್ ಅಗರ್‌ವಾಲ್ ಸಹ ಸೇರಿದ್ದಾರೆ. ಈ ಆಟಗಾರರು ಸಹ ಮತ್ತೊಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ಅನ್ ಸೋಲ್ಡ್ ಆಟಗಾರರಿಗೆ ಅವಕಾಶ ಹೇಗೆ ಸಿಗುತ್ತದೆ ಎಂಬ ಪ್ರಶ್ನೆ ನಿಮ್ಮಗೆ ಬರಬಹುದು. ಯಾವುದೇ ತಂಡದ ಆಟಗಾರರು ಗಾಯದಿಂದ ಟೂರ್ನಿಗೆ ಅಲಭ್ಯಾರಾದಲ್ಲಿ ಅವರ ಬದಲಿಗೆ ಮಾಲೀಕರು ಬೇರೆ ಆಟಗಾರರ ಹುಡುಕಾಟ ನಡೆಸುತ್ತಾರೆ. ಈ ಆಟಗಾರರ ಪಟ್ಟಿಯಲ್ಲಿ ಆರಂಭಿಕರ ಸ್ಥಾನ ತುಂಬ ಬಲ್ಲ ಮೂರು ಆಟಗಾರರ ಬಗ್ಗೆ ವರದಿ ಇಲ್ಲಿದೆ.
ಮಯಾಂಕ್ ಅಗರ್‌ವಾಲ್
ಕಳೆದ ಬಾರಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ, ಮಯಾಂಕ್ ಅವರನ್ನು ಕೊಂಡಕೊಳ್ಳಲು ಫ್ರಾಂಚೈಸಿಗಳು ಮುಂದಾಗಲಿಲ್ಲ. ಆದರೆ ಇವರ ಬಳಿ ಐಪಿಎಲ್‌ನಲ್ಲಿ ಆಡಿದ ಅಪಾರ ಅನುಭವ ಇದೆ. ಇವರು ಇತ್ತೀಚಿಗೆ ಮುಕ್ತಾಯಗೊಂಡ ವಿಜಯ್ ಹಜಾರೆ ಏಕದಿನ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ರನ್ ಕಲೆ ಹಾಕಿದ್ದಾರೆ. ಅಲ್ಲದೆ ಟೂರ್ನಿಯಲ್ಲಿ ಗರಿಷ್ಠ ರನ್ ಸಾಧಕರ ಪಟ್ಟಿಯಲ್ಲಿ ಇವರಿಗೆ ಎರಡನೇ ಸ್ಥಾನ. ಇವರು ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸಿದ ಅನುಭವ ಸಹ ಇದ್ದು, ಇವರು ಮಾಲೀಕರ ಮೊದಲ ಆಯ್ಕೆಯ ಆಟಗಾರ ಆಗುತ್ತಾರೆ.
ಡೇವಿಡ್ ವಾರ್ನರ್
ಐಪಿಎಲ್ ಕಂಡ ಗ್ರೇಟ್ ಬ್ಯಾಟರ್‌ಗಳಲ್ಲಿ ಡೇವಿಡ್ ವಾರ್ನರ್ ಅವರಿಗೂ ಸ್ಥಾನ. ಇವರು ಸನ್‌ರೈಸರ್ಸ್ ತಂಡವನ್ನು ಕಟ್ಟಿದರು. ಅಲ್ಲದೆ 2016 ರಲ್ಲಿ ಸನ್ ತಂಡ ಚಾಂಪಿಯನ್ ಪಟ್ಟ ಪಡೆಯುವಲ್ಲಿ ಇವರ ಕಾಣಿಕೆ ಅಪಾರ. ವಾರ್ನರ್ ಕಳೆದ ಆವೃತ್ತಿಯಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಮಾಲೀಕರು ಇವರತ್ತ ಮುಖ ಮಾಡಲಿಲ್ಲ. ಅಲ್ಲದೆ ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೂ ವಿದಾಯ ಹೇಳಿದ್ದಾರೆ. ಇನ್ನು ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸ್ಥಿರ ಪ್ರದರ್ಶನವನ್ನು ನೀಡುತ್ತಿದ್ದ, ಮಾಲೀಕರ ಚಿತ್ತ ಕದ್ದಿದೆ.

ಬೆನ್ ಡಕೆಟ್
ಇಂಗ್ಲೆಂಡ್ ಪರ 2024ರಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಆಟಗಾರರ ಪಟ್ಟಿಯಲ್ಲಿ ಬೆನ್ ಡಕೆಟ್‌ಗೂ ಸ್ಥಾನ. ಇವರು ಕಳೆದ ವರ್ಷ ಆಡಿದ ಮೂರು ಫಾರ್ಮೆಟ್‌ಗಳಲ್ಲಿ 1500ಕ್ಕೂ ಹೆಚ್ಚು ರನ್ ಕಲೆ ಹಾಕಿ ಭರವಸೆ ಮೂಡಿಸಿದ್ದಾರೆ. ಬಿಗ್ ಬ್ಯಾಷ್ ಲೀಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಡಕೆಟ್ ಸಹ ಐಪಿಎಲ್‌ನಲ್ಲಿ ಆಡಲು ಕಾತುರದಿಂದ ಕಾಯುತ್ತಿದ್ದಾರೆ. ಇವರು ಬಿಬಿಎಲ್‌ನಲ್ಲಿ ಆಡಿದ 7 ಪಂದ್ಯಗಳಲ್ಲಿ 154ರ ಸ್ಟ್ರೈಕ್‌ರೇಟ್‌ನಲ್ಲಿ 243 ರನ್ ಕಲೆ ಹಾಕಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications