WPL ಹರಾಜಿನಲ್ಲಿ ಕೋಟಿ ಕೋಟಿ ಬಾಚಿಕೊಂಡ ನಾಲ್ವರು ಆಟಗರ್ತಿಯರು
ಮಹಿಳಾ ಪ್ರೀಮಿಯರ್ ಲೀಗ್ ದಿನ ದಿಂದ ದಿನಕ್ಕೆ ಹೆಚ್ಚಿನ ಖ್ಯಾತಿ ಪಡೆಯುತ್ತಿದೆ. ಈ ಲೀಗ್ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿದ್ದು, ಇದಕ್ಕಾಗಿ ಆಟಗಾರ್ತಿಯರ ಹರಾಜು ಭಾನುವಾರ ಬೆಂಗಳೂರಿನಲ್ಲಿ ನಡೆಯಿತು. ಒಟ್ಟು 120 ಆಟಗಾರ್ತಿಯರು ಹರಾಜು ಅಂಗಳ ಪ್ರವೇಶಿಸಿದರು. ಆದರೆ ಮಾಲೀಕರು ತಮಗೆ ಅಗತ್ಯವಿದ್ದ ಆಟಗಾರರಿಗೆ ಹಣದ ಹೊಳೆಯನ್ನು ಹರಿಸಿದರು. ಆದರೆ ಈ ಬಾರಿಯ ಹರಾಜಿನಲ್ಲಿ ಮಾಲೀಕರು ಯುವ ಹಾಗೂ ದೇಶೀಯ ಆಟಗಾರ್ತಿಯರಿಗೆ ಮಣೆ ಹಾಕಿದರು. ಹಾಗಿದ್ದರೆ ಈ ಬಾರಿಯ ಹರಾಜಿನಲ್ಲಿ ಕೋಟಿ ಕೋಟಿ ಬಾಚಿಕೊಂಡ ಆಟಗಾರ್ತಿಯರ ಪಟ್ಟಿ ಇಲ್ಲಿದೆ.
ಈ ಬಾರಿಯ ಡಬ್ಲ್ಯುಪಿಎಲ್ ಹರಾಜಿನಲ್ಲಿ ಸ್ಟಾರ್ ಆಟಗಾರ್ತಿಯರು ಕೋಟಿ ಕೋಟಿ ರೂಪಾಯಿ ಬಾಚಿಕೊಂಡರು. ಅಲ್ಲದೆ ಯುವ ಆಟಗಾರರು ಸಹ ತಮ್ಮ ಖಾತೆಗೆ ಕೋಟಿ ಕೋಟಿ ಹಣವನ್ನು ಜಮಾ ಮಾಡಿಕೊಂಡರು. ಈ ಬಾರಿಯ ಹರಾಜಿನ ವಿಶೇಷತೆ ಎಂದರೆ ನಾಲ್ಕು ಆಟಗಾರ್ತಿಯರು ಈ ಬಾರಿ ಕೋಟಿ ರೂಪಾಯಿ ಮಾರ್ಕ್ ಮುಟ್ಟಿದರು. ಇದರಲ್ಲಿ ಮೂವರು ಆಟಗಾರ್ತಿಯರು ಭಾರತೀಯರು ಎಂಬುದೇ ವಿಶೇಷ.

ಸಿಮ್ರಾನ್ ಶೇಖ್ ದುಬಾರಿ ಆಟಗಾರ್ತಿ
ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಸಿಮ್ರಾನ್ ಶೇಖ್ ದುಬಾರಿ ಆಟಗಾರ್ತಿ ಎಂಬ ಹಣೆ ಪಟ್ಟಿಯನ್ನು ತಮ್ಮದಾಗಿಸಿಕೊಂಡರು. ಇವರ ಮೂಲ ಬೆಲೆ 10 ಲಕ್ಷ ಆಗಿತ್ತು. ಇವರನ್ನು ಕೊಳ್ಳಲು ಡೆಲ್ಲಿ ಮೊದಲು ಬಾಜಿ ಕಟ್ಟಲು ಶುರು ಮಾಡಿತು. ನಂತರ ಗುಜರಾತ್ ಜೈಂಟ್ಸ್ ಅಂಗಳವನ್ನು ಪ್ರವೇಶಿಸಿತು. 1.60 ಕೋಟಿ ಆಗಿದ್ದಾಗ ಇವರು ಡೆಲ್ಲಿ ಸೇರಿ ಬಿಡುತ್ತಾರೆ ಎಂದು ಎಲ್ಲರೂ ಅಂದು ಕೊಂಡಿದ್ದರು. ಆದರೆ ಕೊಂಚ ಸಮಯ ತೆಗೆದುಕೊಂಡ ಗುಜರಾತ್ ಲೆಕ್ಕಾಚಾರ ನಡೆಸಿ ಮತ್ತೆ ಬಾಜಿ ಕಟ್ಟಿತು. ಆದರೆ ಕೊನೆಯಲ್ಲಿ ಇವರಿಗೆ 1.90 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತು.
ಡಿಯಾಂಡ್ರಾ ಡಾಟಿನ್
ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಲ್‌ರೌಂಡರ್ ಡಿಯಾಂಡ್ರಾ ಡಾಟಿನ್ ಅವರನ್ನು ಕೊಳ್ಳಲು ಹಲವು ತಂಡಗಳು ಮುಗಿ ಬಿದ್ದವು. ಇವರ ಮೂಲ ಬೆಲೆ 50 ಲಕ್ಷ ರೂ. ಆಗಿತ್ತು. ಆಗ ಮೊದಲು ಯುಪಿ ವಾರಿಯರ್ಸ್ ಅಂಗಳ ಪ್ರವೇಶಿಸಿತು. ಆಗಲೇ ಗುಜರಾತ್ ಸಹ ಬಾಜಿ ಕಟ್ಟಲು ಆರಂಭಿಸಿತು. ಇವರಲ್ಲಿರುವ ಬ್ಯಾಟಿಂಗ್ ಹಾಗೂ ಬೌಲಿಂಗ್ ಕ್ಷಮತೆಯನ್ನು ಗುರುತಿಸಿದ್ದ ಮಾಲೀಕರು ಹಣವನ್ನು ಹೂಡಲು ಮುದಾದರು. ಇವರ ಅವಶ್ಯಕತೆಯನ್ನು ಅರಿತ ಗುಜರಾತ್ 1.70 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತು.
16 ವರ್ಷದ ಯುವ ಆಟಗಾರ್ತಿ ಕಮಲಿನಿ ಕೋಟ್ಯಾಧಿಶೆ
ಭಾರತದ ಯುವ ಆಟಗಾರ್ತಿ ಜಿ ಕಮಲಿನಿ ಅವರನ್ನು ಕೊಳ್ಳುವಲ್ಲಿ ಮುಂಬೈ ಇಂಡಿಯನ್ಸ್ ಸಫಲವಾಗಿದೆ. ಇವರ ಮೂಲ ಬೆಲೆ 10 ಲಕ್ಷ ಆಗಿತ್ತು. ಇವರ ಮೂಲ ಬೆಲೆಗಿಂತಲೂ 16 ಪಟ್ಟು ಹೆಚ್ಚಿನ ಹಣವನ್ನು ನೀಡಿ ಮುಂಬೈ ಇವರಿಗೆ ತಮ್ಮ ತಂಡಕ್ಕೆ ಸೇರಿಸಿಕೊಂಡಿತು.
ಪ್ರೇಮಾ ರಾವತ್
ಹರಾಜಿನಲ್ಲಿ ಈ ಬಾರಿ ಆರ್‌ಸಿಬಿ ಯುವ ಆಟಗಾರ್ತಿ ಪ್ರೇಮಾ ರಾವತ್ ಅವರಿಗೆ ಮಣೆ ಹಾಕಿದೆ. ಆರ್‌ಸಿಬಿ ಇವರನ್ನು 10 ಲಕ್ಷ ರೂಪಾಯಿಗೆ ಖರೀದಿಸೇ ಬಿಟ್ಟಿತು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆಗಲೇ ಡಲ್ಲಿ ಅಂಗಳ ಪ್ರವೇಶಿಸಿ ಇವರ ಮೊತ್ತವನ್ನು ಹೆಚ್ಚಿಸಿತು. ಪರಿಣಾಮ ಆರ್‌ಸಿಬಿ ಈ ಸ್ಟಾರ್ ಆಟಗಾರ್ತಿಗೆ 1.20 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications