For Quick Alerts
ALLOW NOTIFICATIONS  
For Daily Alerts
 

T20 World Cup 2024: ಸೆಮಿಫೈನಲ್‌ ತಲುಪುವ ಆಗ್ರ-4 ತಂಡಗಳನ್ನು ಭವಿಷ್ಯ ನುಡಿದ ದಿಗ್ಗಜ ಕ್ರಿಕೆಟಿಗರು!

ಮೇ 28 ಮಂಗಳವಾರ, 2024ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕಾ ಜಂಟಿ ಆತಿಥೇಯ ವಹಿಸಿರುವ ಈ ಮೆಗಾ ಟೂರ್ನಿ ಜೂನ್ 2 ರಿಂದ 29 ವರೆಗೆ ನಡೆಯಲಿದೆ.

ಇದು 9ನೇ ಆವೃತ್ತಿಯ ಟಿ20 ವಿಶ್ವಕಪ್ ಆಗಿದ್ದು, ಇಲ್ಲಿಯವರೆಗಿನ ಅತಿ ದೊಡ್ಡ ಟೂರ್ನಿ ಎನಿಸಿಕೊಳ್ಳಲಿದೆ. ಏಕೆಂದರೆ ಮೊದಲ ಬಾರಿಗೆ 20 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು, ಟ್ರೋಫಿಗಾಗಿ ಪರಸ್ಪರ ಪ್ರಬಲ ಪೈಪೋಟಿ ನಡೆಸಲಿವೆ.

Top 4 Teams in T20 World Cup 2024 Predicted by Legendary Cricketers

ಇದೀಗ 20 ತಂಡಗಳಲ್ಲಿ ಯಾವ 4 ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸುತ್ತವೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ದಿಗ್ಗಜ ಕ್ರಿಕೆಟಿಗರು ಉತ್ತರ ನೀಡಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ವಿಶೇಷ ಸಂವಾದದಲ್ಲಿ, ಸುನಿಲ್ ಗವಾಸ್ಕರ್, ಮ್ಯಾಥ್ಯೂ ಹೇಡನ್, ಟಾಮ್ ಮೂಡಿ ಮತ್ತು ಬ್ರಿಯಾನ್ ಲಾರಾ ಸೇರಿದಂತೆ ವಿಶ್ವದಾದ್ಯಂತದ ಟಾಪ್‌ 10 ಕ್ರಿಕೆಟ್ ತಜ್ಞರು ಟಿ20 ವಿಶ್ವಕಪ್ 2024ರ ಸೆಮಿಫೈನಲ್ ತಲುಪುವ ಅಗ್ರ-4 ತಂಡಗಳನ್ನು ಭವಿಷ್ಯ ನುಡಿದಿದ್ದಾರೆ.

Top 4 Teams in T20 World Cup 2024 Predicted by Legendary Cricketers

ದಿಗ್ಗಜರ ಪಟ್ಟಿಯಲ್ಲಿ ಭಾರತವೇ ನಂಬರ್ 1

ಟಿ20 ವಿಶ್ವಕಪ್‌ ಗೆಲ್ಲಲು ಭಾರತ ಬಲಿಷ್ಠ ತಂಡ ಎಂದು ಎಲ್ಲಾ ಕ್ರಿಕೆಟ್‌ ತಜ್ಞರು ನಿರೀಕ್ಷಿಸಿದ್ದಾರೆ. ಎಲ್ಲಾ 10 ದಿಗ್ಗಜರು ಸೆಮಿಫೈನಲ್ ತಲುಪುವ ತಮ್ಮ 4 ತಂಡಗಳಲ್ಲಿ ಭಾರತಕ್ಕೆ ಸ್ಥಾನ ನೀಡಿದ್ದಾರೆ.

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ 8 ತಜ್ಞರ ಟಾಪ್-4 ತಂಡಗಳಲ್ಲಿ ಸ್ಥಾನ ಪಡೆದಿವೆ. ಇವುಗಳಲ್ಲದೆ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಕೂಡ ಅಗ್ರ-4 ತಂಡಗಳಲ್ಲಿ ಸೇರ್ಪಡೆಗೊಂಡಿವೆ. ಆದರೆ, ಓರ್ವ ಅನುಭವಿ ಅಫ್ಘಾನಿಸ್ತಾನವನ್ನು ತನ್ನ ಟಾಪ್-4 ತಂಡಗಳಲ್ಲಿ ಸೇರಿಸಿಕೊಂಡಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

Top 4 Teams in T20 World Cup 2024 Predicted by Legendary Cricketers

1) ಸುನಿಲ್ ಗವಾಸ್ಕರ್: ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್

2) ಮ್ಯಾಥ್ಯೂ ಹೇಡನ್: ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ

3) ಟಾಮ್ ಮೂಡಿ: ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ

4) ಬ್ರಿಯಾನ್ ಲಾರಾ: ಭಾರತ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ

5) ಪಾಲ್ ಕಾಲಿಂಗ್ವುಡ್: ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್

6) ಅಂಬಾಟಿ ರಾಯುಡು: ಭಾರತ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ

7) ಮೊಹಮ್ಮದ್ ಕೈಫ್: ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ, ಪಾಕಿಸ್ತಾನ

8) ಕ್ರಿಸ್ ಮೋರಿಸ್: ಭಾರತ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಆಸ್ಟ್ರೇಲಿಯಾ

9) ಆರನ್ ಫಿಂಚ್: ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್

10) ಎಸ್ ಶ್ರೀಶಾಂತ್: ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ, ಪಾಕಿಸ್ತಾನ

Story first published: Tuesday, May 28, 2024, 23:15 [IST]
Other articles published on May 28, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+