For Quick Alerts
ALLOW NOTIFICATIONS  
For Daily Alerts
 

T20 World Cup 2024: ಅತಿಹೆಚ್ಚು ಅರ್ಧಶತಕ ಬಾರಿಸಿ ದಾಖಲೆ ಸೃಷ್ಟಿಸಿರುವ ಸ್ಪೋಟಕ ಬ್ಯಾಟರ್‌ಗಳು; ಯಾರ ಹೆಸರಿನಲ್ಲಿ ಎಷ್ಟು 50+?

ಮೇ 28 ಬುಧವಾರ, ಕ್ರಿಕೆಟ್‌ ಪ್ರೇಮಿಗಳು ಭಾರೀ ಕುತೂಹಲದಿಂದ ಕಾಯುತ್ತಿರುವ 2024ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ ಜೂನ್‌ 2 ರಿಂದ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಟೀಮ್‌ ಇಂಡಿಯಾ ಅಬ್ಬರಿಸಲು ಸಜ್ಜಾಗಿದೆ.

ಅದಕ್ಕೂ ಮುನ್ನ ಈವರೆಗೆ ನಡೆದಿರುವ ಎಂಟು ಟಿ20 ವಿಶ್ವಕಪ್ ಆವೃತ್ತಿಗಳಲ್ಲಿ ಅತಿಹೆಚ್ಚು ಅರ್ಧಶತಕ ಬಾರಿಸಿರುವ ಬ್ಯಾಟರ್‌ಗಳು ಯಾರೆಂದು ತಿಳಿದುಕೊಳ್ಳುವ ಆತುರ ಅಭಿಮಾನಿಗಳಲ್ಲಿದೆ. ಆದರಿಂದ ಟಿ20 ವಿಶ್ವಕಪ್‌ ಇತಿಹಾಸದಲ್ಲಿ ಅತಿಹೆಚ್ಚು ಅರ್ಧಶತಕ ಹೊಡೆದು ದಾಖಲೆ ಸೃಷ್ಟಿಸಿರುವ ಟಾಪ್‌ 5 ಬ್ಯಾಟರ್‌ಗಳ ಮಾಹಿತಿ ಇಲ್ಲಿದೆ.

Top 5 batsmen who hit the most Half centuries in T20 World Cup history

1) ವಿರಾಟ್ ಕೊಹ್ಲಿ: ಭಾರತದ ಸ್ಟಾರ್ ಬ್ಯಾಟರ್‌ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ವಿರಾಟ್ 25 ಪಂದ್ಯಗಳಲ್ಲಿ ಒಟ್ಟು 14 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಈ ಬಾರಿಯ 2024ರ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ತಮ್ಮ ಅರ್ಧಶತಕಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

Top 5 batsmen who hit the most Half centuries in T20 World Cup history

2) ಕ್ರಿಸ್ ಗೇಲ್ : ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟರ್‌ ಕ್ರಿಸ್ ಗೇಲ್ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಗೇಲ್ 33 ಪಂದ್ಯಗಳಲ್ಲಿ 7 ಅರ್ಧಶತಕಗಳನ್ನು ಗಳಿಸಿದ್ದಾರೆ. 50ಕ್ಕೂ ಹೆಚ್ಚು ರನ್‌ಗಳನ್ನು 9 ಬಾರಿ ಹೊಡೆದಿದ್ದಾರೆ. ವಿಶ್ವಕಪ್‌ನಲ್ಲಿ ಗೇಲ್‌ ಹೆಸರಿನಲ್ಲಿ 2 ಶತಕಗಳು ದಾಖಲಾಗಿವೆ.

Top 5 batsmen who hit the most Half centuries in T20 World Cup history

3) ರೋಹಿತ್ ಶರ್ಮಾ: ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ. 39 ಪಂದ್ಯಗಳಲ್ಲಿ 9 ಅರ್ಧಶತಕಗಳನ್ನು ಗಳಿಸಿದ್ದಾರೆ. 50ಕ್ಕೂ ಹೆಚ್ಚು ರನ್‌ಗಳನ್ನು 9 ಬಾರಿ ಕಲೆ ಹಾಕಿದ್ದಾರೆ. ರೋಹಿತ್ ಶರ್ಮಾ ಅವರು ಕೂಡ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಆಡಲಿದ್ದಾರೆ.

Top 5 batsmen who hit the most Half centuries in T20 World Cup history

4) ಮಹೇಲ ಜಯವರ್ಧನೆ : ಶ್ರೀಲಂಕಾದ ದಿಗ್ಗಜ ಬ್ಯಾಟರ್‌ ಮಹೇಲ ಜಯವರ್ಧನೆ ಅತಿ ಹೆಚ್ಚು ಅರ್ಧಶತಕಗಳನ್ನು ಗಳಿಸಿದವರ ರೇಸ್‌ನಲ್ಲಿ 4ನೇ ಸ್ಥಾನದಲ್ಲಿದ್ದಾರೆ. 31 ಪಂದ್ಯಗಳಲ್ಲಿ 6 ಅರ್ಧ ಶತಕ ಹೊಡೆದಿದ್ದು, 7 ಬಾರಿ 50ಕ್ಕೂ ಹೆಚ್ಚು ರನ್‌ಗಳನ್ನು‌ ಗಳಿಸಿದ್ದಾರೆ.

Top 5 batsmen who hit the most Half centuries in T20 World Cup history

5) ಡೇವಿಡ್ ವಾರ್ನರ್: ಆಸ್ಟ್ರೇಲಿಯಾದ ಆರಂಭಿಕ ಎಡಗೈ ಬ್ಯಾಟರ್‌ ಡೇವಿಡ್ ವಾರ್ನರ್ ಕೂಡ ಅತಿ ಹೆಚ್ಚು ಅರ್ಧಶತಕಗಳನ್ನು ಗಳಿಸಿದವರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ವಾರ್ನರ್ 34 ಪಂದ್ಯಗಳಲ್ಲಿ 6 ಬಾರಿ ಅರ್ಧಶತಕ ಬಾರಿಸಿದ್ದಾರೆ. 50 ಪ್ಲಸ್ 6 ಬಾರಿ ಮಾತ್ರ ಗಳಿಸಿದ್ದಾರೆ.

Story first published: Wednesday, May 29, 2024, 18:08 [IST]
Other articles published on May 29, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+