ಮೇ 28 ಬುಧವಾರ, ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ದೇಶಗಳಲ್ಲಿ ಜೂನ್ 1 ರಿಂದ 29 ರವರೆಗೆ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ.
ತಮ್ಮ ನೆಚ್ಚಿನ ತಂಡ ಮೈದಾನದಲ್ಲಿ ಸದ್ದು ಮಾಡುವುದನ್ನು ನೋಡಲು ಅಭಿಮಾನಿಗಳು ಕಾತುರ ದಿಂದ ಕಾಯುತ್ತಿದ್ದಾರೆ.ಈ ಮೆಗಾ ಟೂರ್ನಿಯಲ್ಲಿ 20 ತಂಡಗಳು ಭಾಗವಹಿಸುತ್ತಿವೆ. ಆದರೆ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಎಷ್ಟು ರನ್ ಗಳಿಸುತ್ತಾರೆ ಎಂದು ಭಾರತೀಯ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.
ಆದರೆ ಅದಕ್ಕೂ ಮುನ್ನ ಇಂದು ನಾವು ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟರ್‌ಗಳ ಬಗ್ಗೆ ತಿಳಿದುಕೊಳ್ಳೋಣ. ಈ ಪಟ್ಟಿಯಲ್ಲಿ ಭಾರತದ ಇಬ್ಬರು ಬ್ಯಾಟರ್‌ಗಳು ತಮ್ಮ ಹೆಸರನ್ನು ಹೊಂದಿದ್ದಾರೆ.

1) ವಿರಾಟ್ ಕೊಹ್ಲಿ: ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟರ್ ಆಗಿದ್ದಾರೆ. ವಿರಾಟ್ 25 ಪಂದ್ಯಗಳಲ್ಲಿ 14 ಅರ್ಧ ಶತಕಗಳ ನೆರವಿನಿಂದ 1141 ರನ್ ಗಳಿಸಿದ್ದಾರೆ.
ವಿರಾಟ್ ಕೊಹ್ಲಿ 103 ಬೌಂಡರಿಗಳು ಮತ್ತು 28 ಸಿಕ್ಸರ್‌ಗಳನ್ನು ಸಹ ಹೊಡೆದಿದ್ದಾರೆ. ಐಪಿಎಲ್ 2024ರಲ್ಲಿ ಉತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಕೂಡ ಗೆದ್ದಿದ್ದಾರೆ. ಹೀಗಾಗಿ ಈ ವರ್ಷದ ಟಿ20 ವಿಶ್ವಕಪ್‌ನಲ್ಲಿಯೂ ಹೆಚ್ಚು ರನ್ ಹೊಡೆಯಲು ಸಜ್ಜಾಗಿದ್ದಾರೆ.

2) ಮಹೇಲ ಜಯವರ್ಧನೆ: ಶ್ರೀಲಂಕಾದ ಕ್ರಿಕೆಟ್ ದಂತಕಥೆ ಮಹೇಲ ಜಯವರ್ಧನೆ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಜಯವರ್ಧನೆ 31 ಪಂದ್ಯಗಲ್ಲಿ 1 ಶತಕ ಮತ್ತು 6 ಅರ್ಧಶತಕಗಳೊಂದಿಗೆ 1016 ರನ್ ಗಳಿಸಿದ್ದು, ಬೌಂಡರಿಗಳು ಮತ್ತು 35 ಸಿಕ್ಸರ್‌ಗಳನ್ನು ಸಹ ಹೊಡೆದಿದ್ದಾರೆ.

3) ಕ್ರಿಸ್ ಗೇಲ್: ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ಮಾಜಿ ಸ್ಫೋಟಕ ಬ್ಯಾಟರ್ ಕ್ರಿಸ್ ಗೇಲ್ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಗೇಲ್ 31 ಪಂದ್ಯಗಳಲ್ಲಿ 2 ಶತಕ ಮತ್ತು 7 ಅರ್ಧಶತಕಗಳೊಂದಿಗೆ 965 ರನ್ ಬಾರಿಸಿದ್ದಾರೆ. ಅಲ್ಲದೆ, ಗೇಲ್ ಬ್ಯಾಟ್‌ನಿಂದ 78 ಬೌಂಡರಿ ಹಾಗೂ 63 ಸಿಕ್ಸರ್‌ಗಳು ಬಂದಿವೆ.

4) ರೋಹಿತ್ ಶರ್ಮಾ: ಭಾರತ ತಂಡದ ಆರಂಭಿಕ ಬ್ಯಾಟರ್ ಮತ್ತು ನಾಯಕ ರೋಹಿತ್ ಶರ್ಮಾ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ 4ನೇ ಸ್ಥಾನದಲ್ಲಿದ್ದಾರೆ. ರೋಹಿತ್ 36 ಪಂದ್ಯಗಳಲ್ಲಿ 9 ಅರ್ಧಶತಕಗಳ ನೆರೆವಿನಿಂದ ಒಟ್ಟು 963 ರನ್ ಗಳಿಸಿದ್ದಾರೆ.
ಈ ಅವಧಿಯಲ್ಲಿ ರೋಹಿತ್ ಬ್ಯಾಟ್‌ನಿಂದ 91 ಬೌಂಡರಿ ಮತ್ತು 35 ಸಿಕ್ಸರ್‌ಗಳು ಕೂಡ ಬಂದಿವೆ. ಈ ವಿಶ್ವಕಪ್‌ನಲ್ಲಿ ರೋಹಿತ್‌ಗೆ ತಮ್ಮ ರನ್ ಹೆಚ್ಚಿಸಿಕೊಳ್ಳವ ಅವಕಾಶ ಹೊಂದಿದ್ದಾರೆ.

5) ತಿಲಕರತ್ನೆ ದಿಲ್ಶನ್: ಶ್ರೀಲಂಕಾದ ಮಾಜಿ ಸ್ಟಾರ್ ಬ್ಯಾಟರ್ ತಿಲಕರತ್ನೆ ದಿಲ್ಶನ್ ಟಿ20 ವಿಶ್ವಕಪ್‌ನಲ್ಲಿ ಅತಿಹೆಚ್ಚು ರನ್ ಗಳಿಸಿರುವ ಟಾಪ್ 5ನೇ ಆಟಗಾರನಾಗಿದ್ದಾರೆ. 34 ಪಂದ್ಯಗಳಲ್ಲಿ 6 ಅರ್ಧ ಶತಕಗಳೊಂದಿಗೆ 897 ರನ್ ಗಳಿಸಿದ್ದಾರೆ. ದಿಲ್ಶನ್ ಹೆಸರಿನಲ್ಲಿ 101 ಬೌಂಡರಿಗಳು ಮತ್ತು 20 ಸಿಕ್ಸರ್‌ಗಳು ಸೇರಿವೆ.