Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 World Cup 2024: ಇವರೇ ಅತಿಹೆಚ್ಚು ಸಿಕ್ಸರ್‌ ಹೊಡೆದ ಟಾಪ್‌ 5 ಬ್ಯಾಟರ್‌ಗಳು!

ಮೇ 29 ಬುಧವಾರ, ಬಹುನಿರೀಕ್ಷಿತ ಐಸಿಸಿ 2024ರ ಟಿ20 ವಿಶ್ವಕಪ್‌ ಆರಂಭಕ್ಕೆ ಇನ್ನು 4 ದಿನಗಳು ಮಾತ್ರ ಬಾಕಿ ಉಳಿದಿವೆ. ಅದಕ್ಕೂ ಮುನ್ನ ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದುವರೆಗೆ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್‌ಗಳು ಯಾರು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ಹಾಗಾಗಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಈ ಮೆಗಾ ಟೂರ್ನಿಗೂ ಮುನ್ನ, ಟಿ2o ವಿಶ್ವಕಪ್ ಇತಿಹಾಸದಲ್ಲಿ ಅತಿಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟರ್‌ಗಳ ಬಗ್ಗೆ ನೋಡೋಣ.

Top 5 batsmen who hit the most sixers in T20 World Cup history

1) ಕ್ರಿಸ್ ಗೇಲ್: ವೆಸ್ಟ್ ಇಂಡೀಸ್ ನ ಮಾಜಿ ಆರಂಭಿಕ ಸ್ಫೋಟಕ ಬ್ಯಾಟರ್‌ ಕ್ರಿಸ್ ಗೇಲ್ ಚುಟುಕು ಕ್ರಿಕೆಟ್‌ನಲ್ಲಿ ತನ್ನದೆಯಾದ ವಿಶೇಷವಾದ ಛಾಪು ಮೂಡಿಸಿದ್ದಾರೆ. ಹೀಗಾಗಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿರುವ ಹೆಗ್ಗಳಿಕೆಗೆ ಗೇಲ್‌ ಪಾತ್ರರಾಗಿದ್ದಾರೆ.

ಒಟ್ಟು 31 ವಿಶ್ವಕಪ್ ಪಂದ್ಯಗಳಲ್ಲಿ 63 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇಲ್ಲಿಯವರೆಗೆ ಯಾವುದೇ ಬ್ಯಾಟರ್‌ಗಳು ಗೇಲ್‌ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ.

Top 5 batsmen who hit the most sixers in T20 World Cup history

2) ರೋಹಿತ್ ಶರ್ಮಾ : ಭಾರತ ತಂಡದ ಆರಂಭಿಕ ಬ್ಯಾಟರ್‌ ಹಾಗು ನಾಯಕ ರೋಹಿತ್ ಶರ್ಮಾ ಟಿ20 ವಿಶ್ವಕಪ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ರೋಹಿತ್ 39 ಪಂದ್ಯಗಳಿಂದ ಒಟ್ಟು 35 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ರೋಹಿತ್ ಶರ್ಮಾ ತಮ್ಮ ಸಿಕ್ಸರ್‌ಗಳನ್ನು ಹೆಚ್ಚಿಸಿಕೊಳ್ಳಲು ಈ ಬಾರಿ ವಿಶ್ವಕಪ್‌ನಲ್ಲಿ ಅವಕಾಶವಿದೆ.

Top 5 batsmen who hit the most sixers in T20 World Cup history

3) ಜೋಸ್ ಬಟ್ಲರ್: ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಮತ್ತು ದೊಡ್ಡ ಹೊಡೆತಗಳಿಗೆ ಹೆಸರುವಾಸಿಯಾಗಿರುವ ಬ್ಯಾಟರ್‌ ಜೋಸ್ ಬಟ್ಲರ್ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿ ಮೂರನೇ ಸ್ಥಾನದಲ್ಲಿ ಉಳಿದಿದ್ದಾರೆ.

ಬಟ್ಲರ್ ಇದುವರೆಗಿನ ವಿಶ್ವಕಪ್ ಇತಿಹಾಸದಲ್ಲಿ 27 ಪಂದ್ಯಗಳಿಂದ ಒಟ್ಟು 33 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಬಟ್ಲರ್ ಅವರಿಗೂ ಕೂಡ ಹೆಚ್ಚು ಸಿಕ್ಸರ್ ಹೊಡೆಯಲು ಈ ವಿಶ್ವಕಪ್‌ನಲ್ಲಿ ಅವಕಾಶವಿದೆ.

Top 5 batsmen who hit the most sixers in T20 World Cup history

4) ಯುವರಾಜ್ ಸಿಂಗ್: ಟಿ20 ವಿಶ್ವಕಪ್ ಇತಿಹಾಸದಲ್ಲಿ ವಿಶೇಷವಾದ ದಾಖಲೆ ಬರೆದಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಎಡಗೈ ಸ್ಟಾರ್‌ ಆಲ್‌ ರೌಂಡರ್‌ ಯುವರಾಜ್ ಸಿಂಗ್ ಅವರು ಅತಿ ಹೆಚ್ಚು ಸಿಕ್ಸರ್ ಹೊಡೆದರವ ಸಾಲಿನಲ್ಲಿ 4ನೇ ಸ್ಥಾನದಲ್ಲಿದ್ದಾರೆ.

ಯುವರಾಜ್ 28 ಪಂದ್ಯಗಳಿಂದ ಒಟ್ಟು 33 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ ಏಕೈಕ ಬ್ಯಾಟರ್‌ ಆಗಿರುವ ದಾಖಲೆಯನ್ನು ಹೊಂದಿದ್ದಾರೆ. ಈ ವರ್ಷ ಐಸಿಸಿ ಟಿ20 ವಿಶ್ವಕಪ್‌ಗೆ ಯುವರಾಜ್‌ ಸಿಂಗ್‌ ಅವರನ್ನು ರಾಯಭಾರಿಯಾಗಿ ನೇಮಕ ಮಾಡಿದೆ.

Top 5 batsmen who hit the most sixers in T20 World Cup history

5) ಶೇನ್ ವ್ಯಾಟ್ಸನ್: ಆಸ್ಟ್ರೇಲಿಯಾದ ಮಾಜಿ ಸ್ಟಾರ್‌ ಆಲ್ ರೌಂಡರ್ ಶೇನ್ ವ್ಯಾಟ್ಸನ್ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. 22 ಪಂದ್ಯಗಳಲ್ಲಿ 31 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಟಾಪ್‌ 10 ಬ್ಯಾಟರ್‌ಗಳ ಸಾಲಿನ ಕೊಹ್ಲಿ

ಟೀಮ್‌ ಇಂಡಿಯಾ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಅವರು ಟಿ20 ವಿಶ್ವಕಪ್‌ನಲ್ಲಿ ಅತಿಹೆಚ್ಚು ಸಿಕ್ಸರ್‌ ಬಾರಿಸಿರುವ ಟಾಪ್‌ 10 ಆಟಗಾರರ ಸಾಲಿನಲ್ಲಿ 8ನೇ ಸ್ಥಾನದಲ್ಲಿದ್ದಾರೆ. 25 ಪಂದ್ಯಗಳಲ್ಲಿ ಒಟ್ಟು 28 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಇದೀಗ 2024ರ ಟಿ 20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ಬ್ಯಾಟ್‌ನಿಂದ ಮತ್ತಷ್ಟು ಸಿಕ್ಸರ್‌ಗಳನ್ನು ಹೊಡೆದು ಅಗ್ರ 5ರಲ್ಲಿ ಸ್ಥಾನ ಪಡೆಯುವ ಅವಕಾಶವನ್ನು ಹೊಂದಿದ್ದಾರೆ.

Story first published: Wednesday, May 29, 2024, 8:53 [IST]
Other articles published on May 29, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+