ಐಪಿಎಲ್ ಇತಿಹಾಸದ ಟಾಪ್ 5 ಬೆಸ್ಟ್ ಆಲ್‌ರೌಂಡರ್ಸ್ ಪಟ್ಟಿ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆರಂಭದಿಂದಲೂ ಆಲ್‌ರೌಂಡರ್‌ಗೆ ಹೆಚ್ಚಿನ ಪ್ರಾಮುಖ್ಯ. ಈ ಆಟಗಾರರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ಆಧಾರವಾಗಬಲ್ಲರು. ಹೀಗಾಗಿಯೇ ಈ ಆಟಗಾರರಿಗೆ ಹರಾಜಿನಲ್ಲಿ ಮಾಲೀಕರು ಸಹ ದೊಡ್ಡ ಮೊತ್ತವನ್ನು ಹೂಡಿ ತಂಡಕ್ಕೆ ಸೇರಿಸಿಕೊಳ್ಳುತ್ತಾರೆ. ಐಪಿಎಲ್ ಇತಿಹಾಸದಲ್ಲಿ ಬೆಸ್ಟ್ ಆಲ್‌ರೌಂಡರ್‌ಗಳ ಮಾಹಿತಿ ಇಲ್ಲಿದೆ.
ಐಪಿಎಲ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಗಮನ ಸೆಳೆದ ಆಟಗಾರರ ಪಟ್ಟಿ ದೊಡ್ಡದಿದೆ. ಆದರೆ ಐಪಿಎಲ್‌ನಲ್ಲಿ ತಮ್ಮ ಆಲ್‌ರೌಂಡರ್ ಆಟದ ಮೂಲಕ ಗಮನ ಸೆಳೆದ ಆಟಗಾರರ ಪಟ್ಟಿಯಲ್ಲಿ ವಿದೇಶಿ ಹಾಗೂ ದೇಶೀಯ ಆಟಗಾರರು ಇದ್ದಾರೆ. ಈ ಪಟ್ಟಿಯಲ್ಲಿ ಹೆಚ್ಚಾಗಿ ವಿಂಡೀಸ್ ತಂಡದ ದೈತ್ಯ ಆಟಗಾರರು ಪ್ರಾಬಲ್ಯ ಮರೆದಿದ್ದಾರೆ.

ಆಂಡ್ರೆ ರಸೆಲ್
ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಆಟಗಾರ ವೆಸ್ಟ್ ಇಂಡೀಸ್ ತಂಡದ ಆಂಡ್ರೆ ರಸೆಲ್ ಅವರಿಗೆ ಸ್ಥಾನ. ಇವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಹೆಚ್ಚು ಬಾರಿ ಕಣಕ್ಕೆ ಇಳಿದಿದ್ದಾರೆ. ಇವರು ಆಡಿದ 140 ಪಂದ್ಯಗಳಲ್ಲಿ 2651 ರನ್ ಕಲೆ ಹಾಕಿದ್ದಾರೆ. ಈ ವೇಳೆ ಇವರು 123 ವಿಕೆಟ್ ಸಹ ಪಡೆದಿದ್ದಾರೆ.
ಕೀರನ್ ಪೊಲಾರ್ಡ್
ಈ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ ಕೀರನ್ ಪೊಲಾರ್ಡ್ ಅವರಿಗೂ ಸ್ಥಾನ. ಇವರು ಆಡಿದ 189 ಐಪಿಎಲ್ ಪಂದ್ಯಗಳಲ್ಲಿ 3412 ರನ್ ಕಲೆ ಹಾಕಿದ್ದಾರೆ. ಈ ವೇಳೆ 69 ವಿಕೆಟ್ ಪಡೆದಿದ್ದಾರೆ.
ಸುನಿಲ್ ನರೈನ್
ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಟಗಾರ ಸುನಿಲ್ ನರೈನ್ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಆಟಗಾರ. ಇವರು ಆಡಿದ 200 ಪಂದ್ಯಗಳಲ್ಲಿ 1820 ರನ್ ಕಲೆ ಹಾಕಿದ್ದಾರೆ. ಈ ವೇಳೆ 205 ವಿಕೆಟ್ ಕಬಳಿಸಿದ್ದಾರೆ.
ಶೇನ್ ವ್ಯಾಟ್ಸನ್
ಆಲ್‌ರೌಂಡರ್‌ಗಳ ಪಟ್ಟಿಯನ್ನು ಒಮ್ಮೆ ನೋಡುತ್ತಾ ಹೋದರೆ ಆಸ್ಟ್ರೇಲಿಯಾದ ಶೇನ್ ವ್ಯಾಟ್ಸನ್ ಅವರಿಗೂ ಸ್ಥಾನ. ಇವರು ಐಪಿಎಲ್‌ನಲ್ಲಿ ಆಡಿದ 145 ಪಂದ್ಯಗಳಲ್ಲಿ 3874 ರನ್ ಕಲೆ ಹಾಕಿದ್ದಾರೆ. ಈ ವೇಳೆ 92 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.
ರವೀಂದ್ರ ಜಡೇಜಾ
ಈ ಪಟ್ಟಿಯಲ್ಲಿ ಭಾರತದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಿಗೂ ಸ್ಥಾನ. ಇವರು ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಲಯನ್ಸ್, ಈಗ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುತ್ತಿದ್ದಾರೆ. ಇವರು ಆಡಿದ 265 ಪಂದ್ಯಗಳಲ್ಲಿ 3450 ರನ್ ಸಿಡಿಸಿದ್ದಾರೆ. ಇವರು ಬೌಲಿಂಗ್‌ನಲ್ಲೂ ಕಮಾಲ್ ಮಾಡಿದ್ದು 178 ವಿಕೆಟ್ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications