Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚಿತ್ರಗಳಲ್ಲಿ: ಐಸಿಸಿ ಶ್ರೇಯಾಂಕದ ಟಾಪ್ 5 ಬೌಲರ್ಸ್

ಬೆಂಗಳೂರು, ಮಾರ್ಚ್ 21: ಟೀಂ ಇಂಡಿಯಾದ ಸ್ಪಿನ್ನರ್ ಗಳಾದ ರವೀಂದ್ರ ಜಡೇಜ ಹಾಗೂ ಆರ್ ಅಶ್ವಿನ್ ಅವರು ಐಸಿಸಿ ಟೆಸ್ಟ್ ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಿಸಿದ್ದಾರೆ. ಮಿಕ್ಕ ಬೌಲರ್ ಗಳ ವಿವರ ಮುಂದಿದೆ.

ಮಾರ್ಚ್ 21ರ ಎನಿಕೆಗೂ ಮುನ್ನ ಭಾರತ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಹಾಗೂ ಎಡಗೈ ಸ್ಪಿನ್ನರ್ ಜಡೇಜ ಅವರು ನಂ.1 ಟೆಸ್ಟ್ ಬೌಲರ್ ಸ್ಥಾನವನ್ನು ಹಂಚಿಕೊಂಡಿದ್ದರು.

ಆದರೆ, ರಾಂಚಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಜಡೇಜ ಅವರು 9 ವಿಕೆಟ್ ಗಳಿಸಿ ಉತ್ತಮ ಪ್ರದರ್ಶನ ನೀಡಿ ಹೆಚ್ಚಿನ ಅಂಕ ಗಳಿಸಿದರು. ಜಡೇಜ ಅವರ ಉತ್ತಮ ಬೌಲಿಂಗ್ ಹೊರತಾಗಿಯೂ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್ -ಗವಾಸ್ಕರ್ ಟ್ರೋಫಿಯ ನಾಲ್ಕು ಪಂದ್ಯಗಳ ಸರಣಿ 1-1ರಲ್ಲಿ ಸಮಬಲ ಕಂಡಿದ್ದು, ಅಂತಿಮ ಟೆಸ್ಟ್ ಪಂದ್ಯ ಮಾರ್ಚ್ 25 ರಿಂದ ಧರ್ಮಶಾಲದಲ್ಲಿ ನಡೆಯಲಿದೆ.. ಮಾರ್ಚ್ 21ರ ಅನ್ವಯ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿರುವ ಟಾಪ್ 5 ಟೆಸ್ಟ್ ಬೌಲರ್ ಗಳ ವಿವರ ಮುಂದೆ ಓದಿ...


#1 ರವೀಂದ್ರ ಜಡೇಜ

#1 ರವೀಂದ್ರ ಜಡೇಜ

ರಾಂಚಿ ಪಂದ್ಯಕ್ಕೂ ಮುನ್ನ ಅಶ್ವಿನ್ ಹಾಗೂ ಜಡೇಜ 892 ಅಂಕಗಳೊಂದಿಗೆ ಜಂಟಿಯಾಗಿ ಅಗ್ರಸ್ಥಾನದಲ್ಲಿದ್ದರು. ಪಂದ್ಯದ ನಂತರ ಏಳು ಅಂಕ ಗಳಿಸಿ 899 ಅಂಕ ಪಡೆದು ಅಗ್ರಸ್ಥಾನಕ್ಕೇರಿದರು. ಅಶ್ವಿನ್, ಬಿಶನ್ ಬೇಡಿ ಅವರ ನಂತರ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಭಾರತೀಯ ಬೌಲರ್ ಜಡೇಜ ತಲುಪಿದ್ದಾರೆ.

#2 ಆರ್ ಅಶ್ವಿನ್

#2 ಆರ್ ಅಶ್ವಿನ್

904 ಅಂಕ ಗಳಿಸಿ ನಂ. 1 ಟೆಸ್ಟ್ ಬೌಲರ್ ಎನಿಸಿಕೊಂಡಿದ್ದ ಅರ್ ಅಶ್ವಿನ್ ಅವರು ರಾಂಚಿ ಪಂದ್ಯದ ವೇಳೆಗೆ 892 ಅಂಕಗಳಿಗೆ ಕುಸಿದರು. ಈಗ 37 ಅಂಕ ಕಳೆದುಕೊಂಡು 862 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

#3 ರಂಗಣ ಹೆರಾತ್

#3 ರಂಗಣ ಹೆರಾತ್

ಶ್ರೀಲಂಕಾದ ಎಡಗೈ ಸ್ಪಿನ್ನರ್ ರಂಗಣ ಹೆರಾತ್ ಅವರು 854 ಅಂಕ ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 362 ಕ್ಕೂ ಅಧಿಕ ವಿಕೆಟ್ ಪಡೆದಿದ್ದ ವೆಟ್ಟೋರಿ ದಾಖಲೆ ಮುರಿದಿರುವ ಹೆರಾತ್ ಅವರು ಮುತ್ತಯ್ಯ ಹಾಗೂ ವಾಸ್ ನಂತರ ಶ್ರೇಷ್ಠ ಬೌಲರ್ ಎನಿಸಿಕೊಂಡಿದ್ದಾರೆ.

#4 ಜೋಶ್ ಹೇಜಲ್ ವುಡ್

#4 ಜೋಶ್ ಹೇಜಲ್ ವುಡ್

ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್ ವುಡ್ ಅವರು 842 ಅಂಕ ಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ.

#5 ಜೇಮ್ಸ್ ಆಂಡರ್ಸನ್

#5 ಜೇಮ್ಸ್ ಆಂಡರ್ಸನ್

ಇಂಗ್ಲೆಂಡಿನ ಜೇಮ್ಸ್ ಆಂಡರ್ಸನ್ ಅವರು ಗಾಯದ ಸಮಸ್ಯೆಯಿಂದ ಹಲವು ಸರಣಿಗಳಿಂದ ದೂರ ಉಳಿದಿದ್ದರು. 810 ಅಂಕ ಗಳೊಂದಿಗೆ 5ನೇ ಸ್ಥಾನ ಪಡೆದುಕೊಂಡಿದ್ದಾರೆ.


Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+