ವಿಶ್ವ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಮೂಲಕ ಅಮೋಘ ಪ್ರದರ್ಶನ ನೀಡುತ್ತಲೇ ಸಾಕಷ್ಟು ರನ್ ಗಳಿಸಿರುವ ಹಲವು ದಿಗ್ಗಜ ನಾಯಕರು ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ತಮ್ಮ ಅತ್ಯುತ್ತಮ ಬ್ಯಾಟಿಂಗ್‌ನಿಂದ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ.
ಅಷ್ಟೇ ಅಲ್ಲದೆ, ಅವರ ನಾಯಕತ್ವದಲ್ಲಿ ತಂಡವು ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಸಾಧನೆಗಳನ್ನು ಮಾಡಿದೆ. ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಂತಹ ನಾಯಕರ ಬಗ್ಗೆ ಇಲ್ಲಿದೆ ಮಾಹಿತಿ. ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಗ್ರ ಐವರು ನಾಯಕರ ಪಟ್ಟಿಯಲ್ಲಿ ಭಾರತದ ಸೌರವ್ ಗಂಗೂಲಿ ಮತ್ತು ರೋಹಿತ್ ಶರ್ಮಾ ಅವರ ಹೆಸರಿಲ್ಲ.

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಸಾಲಿನ ಮೊದಲಿಗರಾಗಿದ್ದಾರೆ. ಆಸ್ಟ್ರೇಲಿಯಾ ತಂಡದ ನಾಯಕರಾಗಿ 230 ಪಂದ್ಯಗಳ 220 ಇನ್ನಿಂಗ್ಸ್‌ಗಳಲ್ಲಿ 8497 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಪಾಂಟಿಂಗ್ 22 ಶತಕಗಳು ಮತ್ತು 51 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ನಾಯಕನಾಗಿ ಅವರ ಅತ್ಯುತ್ತಮ ರನ್ 164.
ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ನಾಯಕರಾಗಿದ್ದಾರೆ. ಅವರು ಟೀಮ್ ಇಂಡಿಯಾ ನಾಯಕನಾಗಿ 200 ಪಂದ್ಯಗಳ 172 ಇನ್ನಿಂಗ್ಸ್‌ಗಳಲ್ಲಿ 6641 ರನ್ ಗಳಿಸಿದ್ದಾರೆ. ಭಾರತ ಪರ 6 ಶತಕ ಹಾಗೂ 47 ಅರ್ಧ ಶತಕ ಸಿಡಿಸಿದ್ದಾರೆ. ಧೋನಿಯ ಅತ್ಯುತ್ತಮ ರನ್ 139*.
ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಯಕರ ಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಮೂರನೇ ಸ್ಥಾನದಲ್ಲಿದ್ದಾರೆ. 218 ಪಂದ್ಯಗಳ 208 ಇನ್ನಿಂಗ್ಸ್‌ಗಳಲ್ಲಿ 6295 ರನ್ ಕಲೆ ಹಾಕಿದ್ದು, 7 ಶತಕಗಳು ಮತ್ತು 38 ಅರ್ಧ ಶತಕಗಳನ್ನು ಹೊಂದಿದ್ದಾರೆ. ಅವರ ಅತ್ಯುತ್ತಮ ರನ್ 134*.
ಶ್ರೀಲಂಕಾದ ಮಾಜಿ ನಾಯಕ ಅರ್ಜುನ್ ರಣತುಂಗಾ ಕೂಡ ಅತಿ ಹೆಚ್ಚು ರನ್ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು ಶ್ರೀಲಂಕಾ ಪರ 193 ಪಂದ್ಯಗಳ 185 ಇನ್ನಿಂಗ್ಸ್‌ಗಳಲ್ಲಿ 5608 ರನ್ ಗಳಿಸಿದ್ದಾರೆ. ನಾಯಕನಾಗಿ ಈ ಅವಧಿಯಲ್ಲಿ ಅವರು 4 ಶತಕ ಮತ್ತು 37 ಅರ್ಧ ಶತಕಗಳನ್ನು ಸಿಡಿಸಿದ್ದು, ಗರಿಷ್ಠ ರನ್ 134*.
ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಯಕರ ಪೈಕಿ ಐದನೇ ಸ್ಥಾನದಲ್ಲಿದ್ದಾರೆ. ಅವರು 95 ಪಂದ್ಯಗಳ 91 ಇನ್ನಿಂಗ್ಸ್‌ಗಳಲ್ಲಿ 5449 ರನ್ ಗಳಿಸಿದ್ದಾರೆ. 21 ಶತಕ ಹಾಗೂ 27 ಅರ್ಧ ಶತಕ ಬಾರಿಸಿದ್ದಾರೆ. ಕೊಹ್ಲಿ ಗರಿಷ್ಠ ರನ್ 160*.