ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಜಯ ಸಾಧಿಸಿ, ಕ್ವಾಲಿಫೈಯರ್‌ಗೆ ಅವಕಾಶ ಪಡೆದಿದೆ. ಲಕ್ನೋ ನೀಡಿದ್ದ ದಾಖಲೆಯ ರನ್‌ಗಳನ್ನು ಚೇಸ್ ಮಾಡಿದ ಆರ್‌ಸಿಬಿ ಅಮೋಘ ಜಯ ಸಾಧಿಸಿದೆ. ಈ ಮೂಲಕ ಕಳೆ 17 ಆವೃತ್ತಿಗಳಲ್ಲಿ ತನ್ನ ಕೈಯಲ್ಲಿ ಮಾಡಲಾಗದ್ದನ್ನು ಈ ಬಾರಿ ಮಾಡಿ ತೋರಿಸುವ ಇರಾದೆಯನ್ನು ಹೊಂದಿದೆ. ಆರ್‌ಸಿಬಿ, ಪಂಜಾಬ್ ವಿರುದ್ಧ ಕ್ವಾಲಿಫೈಯರ್ 1ರಲ್ಲಿ ಕಾದಾಟ ನಡೆಸಲಿದೆ.
ಲಕ್ನೋ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ದಾಖಲೆಯ ಮೊತ್ತವನ್ನು ಚೇಸ್ ಮಾಡಿದ್ದು ಹೇಗೆ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಈ ವೇಳೆ ಮೊದಲು ಬ್ಯಾಟ್ ಮಾಡಿದ್ದ ಎಲ್‌ಎಸ್‌ಜಿ 3 ವಿಕೆಟ್ ನಷ್ಟಕ್ಕೆ 227 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಆರ್‌ಸಿಬಿ 18.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 230 ರನ್ ಕಲೆ ಹಾಕಿತು. ಈ ಮೂಲಕ ಪೂರ್ಣ ಎರಡು ಅಂಕಗಳನ್ನು ಕಲೆ ಹಾಕಿ ಅಬ್ಬರಿಸುವ ಮೂಲಕ, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆಯಿತು.

ಆರ್‌ಸಿಬಿ ಸವಾಲಿನ ಮೊತ್ತವನ್ನು ಬೆನ್ನಟ್ಟಿದ್ದಾಗ ಆತ್ಮವಿಶ್ವಾಸದಿಂದಲೇ ಬ್ಯಾಟಿಂಗ್ ಮಾಡಿತು. ಈ ವೇಳೆ ಆರ್‌ಸಿಬಿ ತಂಡದ ಆರಂಭಿಕರು ಪವರ್ ಪ್ಲೇನಲ್ಲಿ ಪವರ್ ಫುಲ್ ಆಟದ ಪ್ರದರ್ಶನ ನೀಡಿದರು. ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಜೋಡಿ ಭದ್ರ ಬುನಾದಿಯನ್ನು ಹಾಕಿಕೊಟ್ಟಿತು. ಇದರ ಮೇಲೆ ಆರ್‌ಸಿಬಿ ತಂಡದ ಮಧ್ಯಮ ಕ್ರಮಾಂಕದ ಆಟಗಾರರು ಮಹಲ್ ಕಟ್ಟಿದರು.
1- ವಿರಾಟ್ ಕೊಹ್ಲಿ ಸಮಯೋಚಿತ ಆಟವಾಡಿ ತಂಡಕ್ಕೆ ಭರ್ಜರಿ ಆರಂಭ ನೀಡಿದರು. ಇವರು ತಮ್ಮ ಐಪಿಎಲ್ ವೃತ್ತಿ ಜೀವನದ 63ನೇ ಅರ್ಧಶತಕವನ್ನು ಬಾರಿಸಿ ಅಬ್ಬರಿಸಿದರು. ಇದು ಆರ್‌ಸಿಬಿ ಗೆಲುವಿನಲ್ಲಿ ಎದ್ದು ಕಂಡಿತು.
2- ಇನ್ನು ಈ ಪಂದ್ಯವನ್ನು ಗೆಲ್ಲಲು ಪ್ರಮುಖ ಕಾರಣಗಳಲ್ಲಿ ಎದ್ದು ಕಾಣುವ ಅಂಶ ಎಂದ್ರೆ, ಎಲ್‌ಎಸ್‌ಜಿ 13.5 ಓವರ್‌ನಲ್ಲಿ ಸುಲಭ ಅವಕಾಶವನ್ನು ಕೈ ಚೆಲ್ಲಿದ್ದು. ವಿಲಿಯಮ್ ಓರೂಕ್ ಎಸೆತದಲ್ಲಿ ಜಿತೇಶ್ ಶರ್ಮಾ ಶಾರ್ಟ್ ಥರ್ಡ್ ಮ್ಯಾನ್ ಬಳಿ ತಳ್ಳಿದರು. ಇದನ್ನು ನಾನ್ ಸ್ಟ್ರೈಕರ್ ಎಂಡ್‌ನಲ್ಲಿ ನೋಡಿದ ಮಯಾಂಕ್ ಅಗರ್‌ವಾಲ್, ಜಿತೇಶ್ ಶರ್ಮಾ ಅವರ ತುದಿಯನ್ನು ತಲುಪಿದರು. ಆದರೆ ಜಿತೇಶ್ ಇನ್ನು ಓಡುವುದು ಬಾಕಿ ಇತ್ತು. ಆಗ ಚೆಂಡನ್ನು ನಾನ್ ಸ್ಟ್ರೈಕರ್ ಎಂಡ್‌ನಲ್ಲಿ ಎಸೆದರು. ಆಗ ಓರೂಕ್ ಜಸ್ಟ್ ಚೆಂಡನ್ನು ಪಡೆದು ಸ್ಟಂಪಿಗಿ ಹಚ್ಚಿದ್ರೆ ಸಾಕಿತ್ತು. ಈ ಪ್ರಯತ್ನದಲ್ಲಿ ಓರೂಕ್ ವಿಫಲರಾದರು.
3- ದಿಗ್ವೇಶ್ ರಾಠಿ ಅವರ ಎಸೆತದಲ್ಲಿ ಜಿತೇಶ್ ಶರ್ಮಾ ರಿವರ್ಸ್ ಸ್ವೀಪ್ ಬಾರಿಸಿದರು. ಈ ಚೆಂಡು ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿದ್ದ ಫೀಲ್ಡರ್ ಕೈ ಸೇರಿತು. ಎಲ್ಲರೂ ಔಟ್ ಎಂದೇ ಭಾವಿಸಿದ್ದರು. ಆಗ ಮೈದಾನದಲ್ಲಿ ಸೈರನ್ ಆಯಿತು. ಅಂದರೆ ದಿಗ್ವೇಶ್ ಈ ಎಸೆತವನ್ನು ನೋಬಾಲ್ ಮಾಡಿದ್ದರು.
4- ದಿಗ್ವೇಶ್ ರಾಠಿ 17 ಓವರ್‌ನಲ್ಲಿ ನಾನ್-ಸ್ಟ್ರೈಕರ್ ಎಂಡ್‌ನಲ್ಲಿ ಜಿತೇಶ್ ಶರ್ಮಾ ಅವರನ್ನು ಔಟ್ ಮಾಡಲು ಪ್ರಯತ್ನಿಸಿದರು. ದಿಗ್ವೇಶ್ ಆಕ್ಷನ್ ಕಂಪ್ಲಿಟ್ ಮಾಡಿ ಚೆಂಡನ್ನು ರಿಲೀಸ್ ಮಾಡದೇ ಕೈಯಲ್ಲಿ ಹಿಡಿದು ಸ್ಟಂಪ್ಸ್‌ಗೆ ಹಚ್ಚಿದರು. ಇದರ ಪೂರ್ಣ ನಿರ್ಣಯವನ್ನು ನೀಡುವಂತೆ ಅಂಪೈರ್ ಫೀಲ್ಡ್ ಅಂಪೈರ್‌ಗೆ ಮನವಿ ಮಾಡಿದರು. ಅಷ್ಟೋತ್ತಿಗಾಗಲೇ ನಾಯಕ ರಿಷಭ್ ಪಂತ್ ವಿಷಯವನ್ನು ನಿಯಂತ್ರಿಸಿದರು ಮತ್ತು ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿ ತಮ್ಮ ಮನವಿಯನ್ನು ಹಿಂತೆಗೆದುಕೊಂಡರು.
5- 4 ವಿಕೆಟ್ ರೂಪದಲ್ಲಿ ಆರ್‌ಸಿಬಿ ವಿರಾಟ್ ಕೊಹ್ಲಿ ಅವರ ವಿಕೆಟ್ ಕಳೆದುಕೊಂಡಾಗ ಗೆಲುವಿನ ಆಚೆ ಕ್ಷೀಣಿಸಿತ್ತು. ಆದರೆ 123 ರಿಂದ ಆಟ ಮುಂದುವರಿಸಿದ ಜಿತೇಶ್ ಶರ್ಮಾ ಹಾಗೂ ಮಯಾಂಕ್ ಅಗರ್‌ವಾಲ್ ತಮ್ಮ ಜವಾಬ್ದಾರಿಯನ್ನು ಅರಿತು ಬ್ಯಾಟ್ ಮಾಡಿದರು. ಅಲ್ಲದೆ ಅಜೇಯ ಶತಕ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ಪರಿಣಾಮ ಬೆಂಗಳೂರು ಪಂದ್ಯವನ್ನು ಗೆಲ್ಲಲು ಸಾಧ್ಯವಾಯಿತು.