For Quick Alerts
ALLOW NOTIFICATIONS  
For Daily Alerts
 

ಚೆಕ್‌ ಮಾಡದ ಹೊರತು ನೀವು ನಂಬಲಾಗದ ಕ್ರಿಕೆಟ್‌ನ 5 ಸತ್ಯ ಸಂಗತಿಗಳು!

Top 5 Mind Blowing Facts of Cricket history

ಬೆಂಗಳೂರು: ಕ್ರಿಕೆಟ್ ಆಟವನ್ನು ಇಷ್ಟಪಡವರ ಸಂಖ್ಯೆ ಕಡಿಮೆ. ಜಗತ್ತಿನಾದ್ಯಂತ ಕ್ರಿಕೆಟ್ ಅಭಿಮಾನಿಗಳಿದ್ದಾರೆ. ಭಾರತದಲ್ಲಂತೂ ಉಳಿದ ಎಲ್ಲಾ ಕ್ರೀಡೆಗಳಿಗಿಂತ ದೊಡ್ಡ ಸಂಖ್ಯೆಯ ಅಭಿಮಾನಿಗಳು ಕ್ರಿಕೆಟ್‌ಗೆ ಇದ್ದಾರೆ. ನಮ್ಮ ರಾಷ್ಟ್ರೀಯ ಕ್ರೀಡೆ ಹಾಕಿಯಾದರೂ, ಇಲ್ಲಿ ಹೆಚ್ಚು ಜನಪ್ರಿಯ ಕ್ರೀಡೆಯೆಂದರೆ ಅದು ಕ್ರಿಕೆಟ್ಟೆ. ಅಂಕಿ-ಸಂಖ್ಯೆಗಳೊಂದಿಗೆ ಮುಂದುವರೆದು ನಮ್ಮನ್ನು ಕುತೂಹಲದ ತುದಿಗಾಲಲ್ಲಿ ನಿಲ್ಲಿಸುವ ಶಕ್ತಿ ಕ್ರಿಕೆಟ್‌ಗಿದೆ. ಇದೇ ಕಾರಣಕ್ಕೆ ಕ್ರಿಕೆಟ್‌ ಆಟಕ್ಕೆ ಅಭಿಮಾನಿಗಳ ಸಂಖ್ಯೆ ದೊಡ್ಡದು.

ಕ್ರಿಕೆಟ್ ಅನ್ನೋದು ಅಂಕಿ-ಸಂಖ್ಯೆಗಳೊಂದಿಗೆ ಮುಂದರಿಯುವ ಆಟವಾದ್ದರಿಂದ ಕ್ರಿಕೆಟ್ ಮೈದಾನದಲ್ಲಿ ನಂಬಲಾಗದ ದಾಖಲೆಗಳಾಗಿವೆ, ಅಚ್ಚರಿಗಳು ನಡೆದಿವೆ. ಕ್ರಿಕೆಟ್‌ ಇತಿಹಾಸವನ್ನು ಕೆದಕುತ್ತಾ ಹೋದರೆ ಇಂಥ ಸಾಕಷ್ಟು ಅಚ್ಚರಿಯ ಸಂಗತಿಗಳು ಸಿಕ್ಕುತ್ತವೆ.

ಕ್ರಿಕೆಟ್‌ ಜಗತ್ತಿನ ಅಚ್ಚರಿಯ ಸಂಗತಿಗಳಲ್ಲಿ ಇಲ್ಲೊಂದಿಷ್ಟಿವೆ. ಇವು ನೀವು ಚೆಕ್‌ ಮಾಡಿ ನೋಡದ ಹೊರತು ಸುಲಭಕ್ಕೆ ನಂಬಲಾಗದ ಸತ್ಯ ಸಂಗತಿಗಳು!

1. ಬರೋಬ್ಬರಿ 4,204 ವಿಕೆಟ್‌ಗಳು!

1. ಬರೋಬ್ಬರಿ 4,204 ವಿಕೆಟ್‌ಗಳು!

ಕ್ರಿಕೆಟ್ ಆಟಗಾರನೊಬ್ಬ ಬರೋಬ್ಬರಿ 4,204 ವಿಕೆಟ್‌ಗಳನ್ನು ಮುರಿದಿದ್ದಾನೆ ಎಂದರೆ ನಂಬಲು ಸಾಧ್ಯವೆ?. ಆದರೆ ಇಂಗ್ಲೆಂಡ್ ಕ್ರಿಕೆಟಿಗ ವಿಲ್ಫ್ರೆಡ್ ರೋಡ್ಸ್ ಈ ದಾಖಲೆ ನಿರ್ಮಿಸಿದ್ದಾರೆ. ಎಡಗೈ ಆರ್ಥಡಾಕ್ಸ್ ಬೌಲರ್ ಆಗಿರುವ ವಿಲ್ಫ್ರೆಡ್ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಭರ್ಜರಿ 4,204 ವಿಕೆಟ್‌ ಪಡೆದಿದ್ದಾರೆ. ಅಷ್ಟೇ ಅಲ್ಲ, 39,969 ರನ್ ದಾಖಲೆ ಕೂಡ ಹೊಂದಿದ್ದಾರೆ.

2. ವೀರೇಂದ್ರ ಸೆಹ್ವಾಗ್ '19' ಮ್ಯಾಜಿಕ್

2. ವೀರೇಂದ್ರ ಸೆಹ್ವಾಗ್ '19' ಮ್ಯಾಜಿಕ್

ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅವರ ವೈಯಕ್ತಿಕ ಅತ್ಯಧಿಕ ರನ್ ದಾಖಲೆಗಳನ್ನು ಗಮನಿಸಿದ್ದೀರಾ? ಸೆಹ್ವಾಗ್ ಟೆಸ್ಟ್‌ ಕ್ರಿಕೆಟ್‌ನಲ್ಲಿ 319 ರನ್, ಏಕದಿನದಲ್ಲಿ 219 ರನ್, ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ 319 ರನ್ ಮತ್ತು ಲಿಸ್ಟ್ 'ಎ'ಯಲ್ಲಿ 219 ರನ್ ದಾಖಲೆ ಹೊಂದಿದ್ದಾರೆ.

3. ದ್ರಾವಿಡ್‌ಗಿಂತ ವಾಲ್ಷ್ ಮೇಲು

3. ದ್ರಾವಿಡ್‌ಗಿಂತ ವಾಲ್ಷ್ ಮೇಲು

ಟೆಸ್ಟ್‌ ಕ್ರಿಕೆಟ್‌ನಲ್ಲಿ 'ಗೋಡೆ' ಅಂತ ಕರೆಸಿಕೊಂಡವರು ಭಾರತ ದಿಗ್ಗಜ, ಕನ್ನಡಿಗ ರಾಹುಲ್ ದ್ರಾವಿಡ್. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಬಾರಿ ನಾಟ್ ಔಟ್ ದಾಖಲೆಯಿರುವುದು ದ್ರಾವಿಡ್ ಅವರ ಹೆಸರಲ್ಲಿ ಅಲ್ಲ.
ವೆಸ್ಟ್ ಇಂಡೀಸ್‌ನ ಕರ್ಟ್ನಿ ವಾಲ್ಷ್ ಅವರ ಹೆಸರಲ್ಲಿ. ವಾಲ್ಷ್ 185 ಇನ್ನಿಂಗ್ಸ್‌ಗಳಲ್ಲಿ 61 ಬಾರಿ ಅಜೇಯ ಬ್ಯಾಟಿಂಗ್ ಮಾಡಿದ್ದರು.

4. 174 ಎಸೆತಗಳಲ್ಲಿ 36 ರನ್

4. 174 ಎಸೆತಗಳಲ್ಲಿ 36 ರನ್

ಟೆಸ್ಟ್‌ನಲ್ಲಾದರೆ 174 ಎಸೆತಗಳಲ್ಲಿ 36 ರನ್ ಗಳಿಸಿದ್ದನ್ನು ನಂಬಲಡ್ಡಿಯಿರಲಿಲ್ಲ. ಆದರೆ ಇದಾಗಿದ್ದು ಟೆಸ್ಟ್‌ನಲ್ಲಲ್ಲ; ವಿಶ್ವಕಪ್‌ನಲ್ಲಿ. ಈ ಕೆಟ್ಟ ದಾಖಲೆ ನಿರ್ಮಿಸಿದ್ದು ಭಾರತ ಸುನಿಲ್ ಗವಾಸ್ಕರ್. 1975ರ ಪ್ರುಡೆನ್ಶಿಯಲ್ ವಿಶ್ವಕಪ್‌ನ 19ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಈ ಬೇಡದ ದಾಖಲೆ ನಿರ್ಮಾಣವಾಗಿತ್ತು. 60 ಓವರ್‌ಗಳ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 335 ರನ್ ಮಾಡಿತ್ತು. ಚೇಸಿಂಗ್‌ಗೆ ಇಳಿದ ಭಾರತದಿಂದ ಆರಂಭಿಕ ಬ್ಯಾಟ್ಸ್‌ಮನ್ ಗವಾಸ್ಕರ್ 174 ಎಸೆತಗಳಲ್ಲಿ ಅಜೇಯ 36 ರನ್ ಬಾರಿಸಿದ್ದರು. ಭಾರತ ಈ ಪಂದ್ಯದಲ್ಲಿ 132 ರನ್ ಗಳಿಸಿ 202 ರನ್‌ನಿಂದ ಸೋತಿತ್ತು.

5. ಇಂಗ್ಲೆಂಡ್ ಹೆಸರಲ್ಲಿ ಕೆಟ್ಟ ದಾಖಲೆ

5. ಇಂಗ್ಲೆಂಡ್ ಹೆಸರಲ್ಲಿ ಕೆಟ್ಟ ದಾಖಲೆ

ಇಂಗ್ಲೆಂಡ್ ತಂಡದ ಹೆಸರಲ್ಲಿ ಒಂದು ವಿಚಿತ್ರ ಕೆಟ್ಟ ದಾಖಲೆಯಿದೆ. ಈ ದಾಖಲೆ ಏಕದಿನ ಕ್ರಿಕೆಟ್‌ ಫೈನಲ್‌ಗೆ ಸಂಬಂಧಿಸಿದೆ. ಐಸಿಸಿ ಪಂದ್ಯಗಳಲ್ಲಿ 60 ಓವರ್‌ಗಳ ಏಕದಿನ ಫೈನಲ್‌ನಲ್ಲಿ (1979 ವಿಶ್ವಕಪ್), 50 ಓವರ್‌ಗಳ ಏಕದಿನ ವಿಶ್ವಕಪ್ ಫೈನಲ್ ಪಂದ್ಯಗಳಲ್ಲಿ (1992 ವಿಶ್ವಕಪ್ ಮತ್ತು 2004ರ ಚಾಂಪಿಯನ್ಸ್ ಟ್ರೋಫಿ) ಮತ್ತು 20 ಓವರ್‌ಗಳ ಏಕದಿನ ಫೈನಲ್‌ ಪಂದ್ಯದಲ್ಲಿ (2013ರ ಚಾಂಪಿಯನ್ಸ್ ಟ್ರೋಫಿ) ಸೋತ ವಿಶ್ವದ ಏಕಮಾತ್ರ ತಂಡ ಇಂಗ್ಲೆಂಡ್.

Story first published: Wednesday, July 22, 2020, 9:30 [IST]
Other articles published on Jul 22, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+