Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ನಲ್ಲಿ ಅತ್ಯಧಿಕ ಕ್ಯಾಚ್ ದಾಖಲೆ ಬರೆದಿರುವ ಟಾಪ್ 5 ಫೀಲ್ಡರ್‌ಗಳು!

Top 5 Most catches by a fielder in the IPL history

ಬೆಂಗಳೂರು: ಕಳೆದ ಒಂದು ದಶಕದಲ್ಲಿ ವಿಶ್ವ ಕ್ರಿಕೆಟ್‌ನ ಫೀಲ್ಡಿಂಗ್‌ನಲ್ಲಿ ಮಹತ್ವದ ಬದಲಾವಣೆಗಳಾಗಿವೆ. ವಿಶ್ವದ ಎಲ್ಲಾ ತಂಡಗಳು ಫೀಲ್ಡಿಂಗ್‌ನತ್ತ ಗಮನ ಹರಿಸಿದೆ, ತಮ್ಮ ತಮ್ಮ ತಂಡಗಳನ್ನು ಬಲಗೊಳಿಸಿಕೊಂಡಿದೆ. ಹಿಂದೆ ವಿಶ್ವಕ್ರಿಕೆಟ್‌ನ ತಂಡವೊಂದರಲ್ಲಿ ಬರೀ ಒಬ್ಬರು ಅಥವಾ ಇಬ್ಬರು ಅದ್ಭುತ ಫೀಲ್ಡರ್‌ಗಳು ಮಾತ್ರ ಕಾಣಸಿಗುತ್ತಿದ್ದರು. ಈಗ ಹಾಗೇನಿಲ್ಲ, ಇಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡವೊಂದರ ಬಹುತೇಕ ಎಲ್ಲಾ ಆಟಗಾರರೂ ಅದ್ಭುತ ಫೀಲ್ಡರ್‌ಗಳಾಗಿ ಮಿನುಗುತ್ತಾರೆ. ಕ್ಯಾಚ್ ಸಿಗಲಿದೆ ಅಂತಾದರೆ ಸೂಪರ್‌ ಮ್ಯಾನ್ ರೀತಿಯಲ್ಲಿ ಹಾರಿ ಕ್ಯಾಚ್ ಮಾಡುವ ಅನೇಕ ಬೆಸ್ಟ್ ಫೀಲ್ಡರ್‌ಗಳು ಈಗ ಕಾಣಸಿಗುತ್ತಿದ್ದಾರೆ.

ಟೆಸ್ಟ್, ಏಕದಿನ ಕ್ರಿಕೆಟ್‌ಗಿಂತ ಟಿ20 ಕ್ರಿಕೆಟ್ ಈ ದಿನಗಳಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಈ ಕ್ರಿಕೆಟ್ ಮಾದರಿಯಲ್ಲಿ ಬ್ಯಾಟ್ಸ್‌ಮನ್, ಬೌಲರ್ ಮತ್ತು ಫೀಲ್ಡರ್ ಈ ಮೂವರೂ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಅಂದರೆ ಇಲ್ಲಿ ಇಡೀ ತಂಡದ ಆಟವೇ ನೋಡಲು ರೋಚಕವೆನಿಸುತ್ತದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಅದ್ಭುತ ಕ್ಯಾಚ್‌ಗಳಿಗಾಗಿ ಗಮನ ಸೆಳೆದ ಅನೇಕರಿದ್ದಾರೆ. ಇದರಲ್ಲಿ ಅತೀ ಹೆಚ್ಚು ಕ್ಯಾಚ್ ದಾಖಲೆಯಿರುವ 5 ಫೀಲ್ಡರ್‌ಗಳ ಪಟ್ಟಿ ಇಲ್ಲಿದೆ.

1. ಸುರೇಶ್ ರೈನಾ

1. ಸುರೇಶ್ ರೈನಾ

ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್ ಸುರೇಶ್ ರೈನಾ ಸ್ಫೋಟಕ ಬ್ಯಾಟಿಂಗ್‌ಗೆ ಅಷ್ಟೇ ಅಲ್ಲ, ಮಿಂಚಿನ ವೇಗದ ಫೀಲ್ಡಿಂಗ್‌ನಲ್ಲೂ ಎತ್ತಿದ ಕೈ. ಐಪಿಎಲ್‌ನಲ್ಲಿ ಸದ್ಯ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುವ ರೈನಾ 193 ಐಪಿಎಲ್ ಪಂದ್ಯಗಳಲ್ಲಿ 102 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಅದೂ ಫೀಲ್ಡರ್ ಆಗಿ ರೈನಾ ಈ ಸಾಧನೆ ಮಾಡಿದ್ದಾರೆ. 33ರ ಹರೆಯದ ಆಕ್ರಮಣಕಾರಿ ಆಟಗಾರ ರೈನಾ ಐಪಿಎಲ್‌ನಲ್ಲಿ 5368 ರನ್ ದಾಖಲೆ ಹೊಂದಿದ್ದಾರೆ. ಅಲ್ಲದೆ ಒಂದೇ ಪಂದ್ಯದಲ್ಲಿ ಮೂರು ಅದ್ಭುತ ಕ್ಯಾಚ್‌ಗಳನ್ನು ಪಡೆದ ಹಿರಿಮೆ ರೈನಾದ್ದು.

2. ಎಬಿ ಡಿ ವಿಲಿಯರ್ಸ್

2. ಎಬಿ ಡಿ ವಿಲಿಯರ್ಸ್

ಸಿಕ್ಸ್ ಹೋಗಲಿದ್ದ ಚೆಂಡನ್ನು ಬೌಂಡರಿ ಲೈನ್‌ನಲ್ಲಿ ಒಂದೇ ಕೈನಲ್ಲಿ ಸೂಪರ್ ಮ್ಯಾನ್ ರೀತಿಯಲ್ಲಿ ಕ್ಯಾಚ್ ಮಾಡಿದ್ದ ದಕ್ಷಿಣ ಆಫ್ರಿಕಾದ ಅಪಾಯಕಾರಿ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್ ತುಂಬಾ ಫೇಮಸ್ ಆಗಿದ್ದರು. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವ ಎಬಿಡಿ 154 ಐಪಿಎಲ್ ಪಂದ್ಯಗಳಲ್ಲಿ 84 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಎಬಿಡಿ ಕೂಡ ರೈನಾ ಅವರಂತೆ ಒಂದೇ ಐಪಿಎಲ್ ಪಂದ್ಯದಲ್ಲಿ 3 ಕ್ಯಾಚ್‌ಗಳನ್ನು ಪಡೆದಿದ್ದಾರೆ.

3. ರೋಹಿತ್ ಶರ್ಮಾ

3. ರೋಹಿತ್ ಶರ್ಮಾ

ರೋಹಿತ್ ಶರ್ಮಾಗೆ 'ಉದಾಸೀನದವ' ಅನ್ನೋ ಪ್ರೀತಿಯ ಹೆಸರಿದೆ. ಬ್ಯಾಟಿಂಗ್ ವೇಳೆ ರೋಹಿತ್ ಹೆಚ್ಚು ರನ್ ಓಡುವ ಬದಲು ಸಿಕ್ಸ್‌-ಫೋರ್‌ಗಳಲ್ಲೆ ಡಬಲ್ ರನ್ ಕದಿಯಲು ಮುಂದಾಗುತ್ತಾರೆ. ಇದಕ್ಕಾಗಿಯೇ ಕ್ರಿಕೆಟ್ ಪ್ರೇಮಿಗಳು ರೋಹಿತ್ ಅವರನ್ನು ಪ್ರೀತಿಯಿಂದ 'ಉದಾಸೀನದವ' ಅಂತ ಕರೀತಾರೆ. ಬ್ಯಾಟಿಂಗ್ ವಿಷಯದಲ್ಲಿ ಉದಾಸೀನದವನಾಗಿ ಕಾಣುವ ಹಿಟ್‌ಮ್ಯಾನ್ ರೋಹಿತ್ ಫೀಲ್ಡಿಂಗ್ ವಿಚಾರದಲ್ಲಿ ತುಂಬಾ ಚುರುಕು. ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ನಾಯಕನಾಗಿರುವ ಶರ್ಮಾ 188 ಪಂದ್ಯಗಳಲ್ಲಿ ಫೀಲ್ಡರ್ ಆಗಿದ್ದುಕೊಂಡು 83 ಕ್ಯಾಚ್‌ಗಳನ್ನು ಪಡೆದಿದ್ದಾರೆ. 33ರ ಹರೆಯದ ರೋಹಿತ್ ಐಪಿಎಲ್‌ನಲ್ಲಿ 4,898 ರನ್ ಗಳಿಸಿದ್ದಾರೆ.

4. ಕೀರನ್ ಪೊಲಾರ್ಡ್

4. ಕೀರನ್ ಪೊಲಾರ್ಡ್

ಐಪಿಎಲ್‌ನಲ್ಲಿ ದಾಖಲೆಯ ನಾಲ್ಕು ಬಾರಿ ಚಾಂಪಿಯನ್ಸ್ ಪಟ್ಟ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡದ ಮತ್ತೊಬ್ಬ ಸ್ಫೋಟಕ ಬ್ಯಾಟ್ಸ್‌ಮನ್ ಮೂಲತಃ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಆಲ್ ರೌಂಡರ್ ಆಗಿರುವ ಕೀರನ್ ಪೊಲಾರ್ಡ್ ಐಪಿಎಲ್‌ನಲ್ಲಿ 82 ಕ್ಯಾಚ್‌ಗಳನ್ನು ಪಡೆದಿದ್ದಾರೆ. 148 ಐಪಿಎಲ್ ಪಂದ್ಯಗಳಲ್ಲಿ ಪೊಲಾರ್ಡ್ ಈ ಸಾಧನೆ ತೋರಿದ್ದಾರೆ. 33ರ ಹರೆಯದ ಪೊಲಾರ್ಡ್ ಸುಮಾರು 100 ಕೆಜಿ ತೂಗುವ, 6 ಫೀಟ್ 4 ಇಂಚಿನ ದೈತ್ಯ ಕಾಯದ ಆಟಗಾರ.

5. ಡ್ವೇನ್ ಬ್ರಾವೋ

5. ಡ್ವೇನ್ ಬ್ರಾವೋ

ವೆಸ್ಟ್ ಇಂಡೀಸ್ ತಂಡದ ಮತ್ತೊಬ್ಬ ಚುರುಕಿನ ಆಲ್ ರೌಂಡರ್ ಡ್ವೇನ್ ಬ್ರಾವೋ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುವ ಬ್ರಾವೋ 134 ಪಂದ್ಯಗಳಲ್ಲಿ 74 ಕ್ಯಾಚ್‌ಗಳನ್ನು ಪಡೆದಿದ್ದಾರೆ. 36ರ ಹರೆಯದ ಬ್ರಾವೋ 1483 ರನ್ ಮತ್ತು 147 ವಿಕೆಟ್ ದಾಖಲೆ ಹೊಂದಿದ್ದಾರೆ. ಸಿಎಸ್‌ಕೆ ಅನೇಕ ಗೆಲುವಿನಲ್ಲಿ ಬ್ರಾವೋ ಪ್ರಮುಖ ಕೊಡುಗೆ ನೀಡಿದ್ದರು.

Story first published: Friday, July 3, 2020, 16:03 [IST]
Other articles published on Jul 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+