IPL 2025: ವಿರಾಟ್ ಕೊಹ್ಲಿ & ಕೆ.ಎಲ್. ರಾಹುಲ್ ದಾಖಲೆ ಪುಡಿ ಪುಡಿ ಮಾಡಿದ ದಕ್ಷಿಣ ಆಫ್ರಿಕಾ ಆಟಗಾರ!
ಐಪಿಎಲ್ ಹವಾ ಶುರುವಾಗಿದೆ, 2025ರ ಐಪಿಎಲ್ ಸೀಸನ್‌ಗೆ ತಯಾರಿ ಭರ್ಜರಿಯಾಗಿ ಸಾಗಿದೆ. ಭಾರತದ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿಸಿ, ಭಾರತದ ಕ್ರಿಕೆಟ್ ಲೋಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುವಂತೆ ಮಾಡಿದ್ದೇ 'ಐಪಿಎಲ್' ಎನ್ನಬಹುದು. ಹೀಗಿದ್ದಾಗ ಸದ್ಯ ಹೊಸ ಸೀಸನ್ ಆರಂಭಕ್ಕೆ ಮೊದಲು ಆಟಗಾರರ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಹೀಗೆ ಆಟಗಾರರ ಆಯ್ಕೆ ಶುರುವಾದ ಬೆನ್ನಲ್ಲೇ ಐಪಿಎಲ್-2025 ಹಲವು ದಾಖಲೆ ಸೃಷ್ಟಿಸಿದೆ. ಅದರಲ್ಲೂ ವಿರಾಟ್ ಕೊಹ್ಲಿ ನಿರ್ಮಿಸಿದ್ದ ದಾಖಲೆ ಕೂಡ ಇದೀಗ ಧೂಳ್ ಧೂಳ್ ಆಗಿದೆ!
2025ರ ಐಪಿಎಲ್ ಅಖಾಡದಲ್ಲಿ ಕಪ್ ಗೆಲ್ಲಲು ಸೆಣೆಸಾಟ ನಡೆಸುವ ತಂಡಗಳು ಈಗ ತಮ್ಮಲ್ಲೇ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನ ರಿಲೀಸ್ ಮಾಡಿವೆ. ಈ ಮೂಲಕ 2025ರ ಐಪಿಎಲ್ ಆವೃತ್ತಿಗಾಗಿ ನಡೆಯುವ ಆಟಗಾರರ ಹರಾಜಿಗೆ ಎಂಟ್ರಿ ಕೊಡಲಿರುವ ಆಟಗಾರರು ಯಾರು? ಯಾರು? ಎಂಬ ಪ್ರಶ್ನೆಗೆ ಸೂಕ್ತ ಉತ್ತರ ಸಿಕ್ಕಂತಾಗಿದೆ. 2025ರ ಐಪಿಎಲ್ ಅಖಾಡದಲ್ಲಿ ಒಟ್ಟು 10 ತಂಡಗಳು ಕಪ್ ಗೆಲ್ಲಲು ಸೆಣೆಸಾಟ ನಡೆಸಲಿದ್ದು, ಈ ಪೈಕಿ 10 ತಂಡಗಳಿಂದ ಸೇರಿ ಒಟ್ಟಾರೆ 46 ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧಾರ ಮಾಡಲಾಗಿದೆ. ವಿರಾಟ್ ಕೊಹ್ಲಿ ನಿರ್ಮಿಸಿದ್ದ ದಾಖಲೆ ಕೂಡ ಇದೀಗ ದಕ್ಷಿಣ ಆಫ್ರಿಕಾ ಆಟಗಾರನ ಪಾಲಾಗಿದೆ.

ಐಪಿಎಲ್ ಇತಿಹಾಸದಲ್ಲೇ ಇದು ಮೊದಲು!
ಅಂದಹಾಗೆ 2008ರ ಸಮಯದಲ್ಲಿ ಶುರುವಾದ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಇದುವರೆಗೂ ಕ್ರಿಕೆಟ್ ಇತಿಹಾಸದಲ್ಲಿ ಹಲವು ದಾಖಲೆ ಬರೆದಿದೆ. ಅದೇ ರೀತಿ ಆಟಗಾರರನ್ನು ರಿಟೇನ್ ಮಾಡಿಕೊಳ್ಳುವುದು ಅಥವಾ ತಂಡಗಳು ಕೆಲ ಆಟಗಾರರನ್ನ ತಮ್ಮಲ್ಲೇ ಉಳಿಸಿಕೊಳ್ಳುವ ಪ್ರಕ್ರಿಯೆಯು ಸಾಕಷ್ಟು ಗಮನ ಸೆಳೆಯುತ್ತದೆ. ಈ ರೀತಿ ಐಪಿಎಲ್ ಟೂರ್ನಿಯ ಅಖಾಡದಲ್ಲಿ ಐಪಿಎಲ್ ತಂಡಗಳು ರಿಟೇನ್ ಮಾಡ್ಕೊಂಡ ದುಬಾರಿ ಆಟಗಾರರ ಪಟ್ಟಿಯಲ್ಲಿ, ಕಿಂಗ್ ವಿರಾಟ್ ಕೊಹ್ಲಿ & ಕೆಎಲ್ ರಾಹುಲ್ ದಾಖಲೆ ಉಡೀಸ್ ಆಗಿದೆ.
ಟಾಪ್-5 ದುಬಾರಿ ರಿಟೇನ್ ಆಟಗಾರರು!
ಐಪಿಎಲ್ ಟೂರ್ನಿಯಲ್ಲಿ ರಿಟೇನ್ ಆಗಿರುವ ಆಟಗಾರರ ಪೈಕಿ ರಿಷಬ್ ಪಂತ್ & ರವೀಂದ್ರ ಜಡೇಜಾ ಹಾಗೂ ರೋಹಿತ್ ಶರ್ಮಾ ಸಮವಾದ ಸ್ಥಾನ ಪಡೆದಿದ್ದಾರೆ. ಈ ಆಟಗಾರರನ್ನು ತಮ್ಮ ತಂಡದಲ್ಲೇ ಉಳಿಸಿಕೊಳ್ಳಲು ಅಂದ್ರೆ ರಿಟೇನ್ ಮಾಡಲು ಭರ್ಜರಿ 16 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಲಾಗಿತ್ತು. ರಿಷಬ್ ಪಂತ್ ಪರವಾಗಿ ಡೆಲ್ಲಿ ಕ್ಯಾಪಿಟಲ್ಸ್, ರವೀಂದ್ರ ಜಡೇಜಾ ಪರವಾಗಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರೋಹಿತ್ ಶರ್ಮಾ ಪರವಾಗಿ ಮುಂಬೈ ಇಂಡಿಯನ್ಸ್ ತಂಡ ಇಷ್ಟು ದೊಡ್ಡ ಮಟ್ಟದ ಹಣ ಖರ್ಚು ಮಾಡಿತ್ತು.
ಕೊಹ್ಲಿ ದಾಖಲೆ ಮುರಿದವರು ಯಾರು?
ಇದು ಬಿಟ್ಟು ನಮ್ಮ ಬೆಂಗಳೂರು ತಂಡದ ಕಿಂಗ್ ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಅವರನ್ನು ಸುಮಾರು 17 ಕೋಟಿ ರೂಪಾಯಿ ಕೊಟ್ಟು ರಿಟೇನ್ ಮಾಡಲಾಗಿತ್ತು. ಒಂದ್ಕಡೆ ವಿರಾಟ್ ಕೊಹ್ಲಿ ಅವರನ್ನು ಉಳಿಸಿಕೊಳ್ಳಲು ಆರ್‌ಸಿಬಿ ತಂಡ ಹಣ ಖರ್ಚು ಮಾಡಿತ್ತು, ಈ ರೀತಿ ಲಖನೌ ತಂಡವು ಕೆ.ಎಲ್. ರಾಹುಲ್ ಅವರಿಗಾಗಿ 17 ಕೋಟಿ ರೂಪಾಯಿ ಸುರಿದಿತ್ತು. ಇದೀಗ ದಕ್ಷಿಣ ಆಫ್ರಿಕಾ ತಂಡದ ಆಟಗಾರ ಹೆನ್ರಿಚ್ ಕ್ಲಾಸೆನ್ ಅವರನ್ನು ಉಳಿಸಿಕೊಳ್ಳುವುದಕ್ಕೆ ಸನ್‌ರೈಸರ್ಸ್ ಹೈದರಾಬಾದ್ ತಂಡವು, ಸುಮಾರು 23 ಕೋಟಿ ರೂಪಾಯಿ ಖರ್ಚು ಮಾಡಿ ಹೊಸ ದಾಖಲೆ ಬರೆದಿದೆ!
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications