ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮೊದಲ ಆವೃತ್ತಿಯಿಂದಲೂ ಇರುವ ತಂಡಗಳಲ್ಲಿ ಪಂಜಾಬ್ ಕಿಂಗ್ಸ್ ಸಹ ಒಂದು. ಆರ್‌ಸಿಬಿ ತಂಡದಂತೆ ಪಂಜಾಬ್ ಸಹ ಇನ್ನು ಒಮ್ಮೆಯೂ ಐಪಿಎಲ್ ಟ್ರೋಫಿ ಗೆದ್ದಿಲ್ಲ. ಪ್ರತಿ ಬಾರಿಯೂ ಉತ್ತಮ ಪ್ರದರ್ಶನ ನೀಡಿದರೂ, ಹಲವು ಆವೃತ್ತಿಗಳಲ್ಲಿ ಲೀಗ್ ಹಂತದಲ್ಲೇ ಗುಡ್ ಬೈ ಹೇಳಿದೆ. ಆದರೆ ಈ ಬಾರಿ ಪಂಜಾಬ್ ಚೊಚ್ಚಲ ಐಪಿಎಲ್ ಟ್ರೋಫಿಯ ಕನಸು ಕಾಣುತ್ತಿದೆ. ತಂಡ ಈ ಕನಸು ಕಾಣಲು ಕಾರಣರಾದ ಆಟಗಾರರ ಬಗ್ಗೆ ವರದಿ ಇಲ್ಲಿದೆ.
ಪಂಜಾಬ್ ಕಿಂಗ್ಸ್ 2008ರಲ್ಲಿ ಮೊದಲ ಬಾರಿಗೆ ಸೆಮಿಫೈನಲ್ ಹಂತ ತಲುಪಿತ್ತು. ಇನ್ನು 2014ರಲ್ಲಿ ರನ್ನರ್ ಅಪ್ ಆಗಿದ್ದೇ ದೊಡ್ಡ ಸಾಧನೆ ಆಗಿತ್ತು. ಆದರೆ ಆ ಬಳಿಕ ಪಂಜಾಬ್ ಒಮ್ಮೆಯೂ ಫೈನಲ್‌ಗೆ ತಲುಪಿಲ್ಲ. ಈ ಬಾರಿಯ ಐಪಿಎಲ್‌ನಲ್ಲಿ ಬಲಿಷ್ಠ ತಂಡವನ್ನು ಕಟ್ಟಿರುವ ಪಂಜಾಬ್ ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಡುವ ಕನಸು ಕಾಣುತ್ತಿದೆ. ಈ ನಿಟ್ಟಿನಲ್ಲಿ ಈ ಬಾರಿ ತಂಡಕ್ಕೆ ಚಾಂಪಿಯನ್ ಪಟ್ಟ ತೊಡಿಸ ಬಲ್ಲ ಐದು ಆಟಗಾರರ ಪಟ್ಟಿ ಇಲ್ಲಿದೆ.

ಕಳೆದ ಬಾರಿಯ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ತೊಡಿಸಿದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ ಖರೀದಿ ಮಾಡಿತು. ಇವರಿಗೆ 26.75 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತು. ಪಂಜಾಬ್ ಒಬ್ಬ ಒಳ್ಳೆಯ ನಾಯಕನ ಹುಡುಕಾಟದಲ್ಲಿತ್ತು. ಅಲ್ಲದೆ ಕೋಚ್ ರಿಕಿ ಪಾಂಟಿಂಗ್ ಹಾಗೂ ಶ್ರೇಯಸ್ ಅಯ್ಯರ್ ನಡುವಿನ ಸಂಬಂಧ ಉತ್ತಮವಾಗಿದ್ದು, ತಂಡಕ್ಕೆ ಚೊಚ್ಚಲ ಬಾರಿಗೆ ಟ್ರೋಫಿ ತೊಡಿಸುವಲ್ಲಿ ಶ್ರಮಿಸಬಲ್ಲರು.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ವಿಕೆಟ್ ಬೇಟೆ ನಡೆಸಬಲ್ಲ ಬೌಲರ್‌ಗಳ ಪಟ್ಟಿಯಲ್ಲಿ ಯುಜುವೇಂದ್ರ ಚಹಾಲ್ ಕಾಣಿಸಿಕೊಳ್ಳುತ್ತಾರೆ. ಇವರು ಮಿಡ್ಲ್ ಓವರ್‌ನಲ್ಲಿ ಬಿಗುವಿನ ದಾಳಿ ನಡೆಸಿ, ವಿಕೆಟ್ ಬೇಟೆ ನಡೆಸಬಲ್ಲ ಬೌಲರ್. ಇವರ ಲೆಗ್ ಸ್ಪಿನ್ ಹಾಗೂ ಗೂಗ್ಲಿ ಎಸೆತಗಳಿಗೆ ಎದುರಿಸುವಲ್ಲಿ ಬ್ಯಾಟರ್‌ಗಳು ಕಂಗಾಲಾಗುತ್ತಾರೆ. ಇವರನ್ನು ಪಂಜಾಬ್ 18 ಕೋಟಿ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.

ಆರ್‌ಸಿಬಿ ಹರಾಜು ಅಂಗಳಕ್ಕೆ ಬಿಟ್ಟ ಆಟಗಾರನ್ನು ಪಂಜಾಬ್ 4.20 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಇವರು ವಿಶ್ವದ ಸ್ಟಾರ್ ಆಲ್‌ರೌಂಡರ್‌ಗಳಲ್ಲಿ ಒಬ್ಬರು. ಇವರು ಬ್ಯಾಟಿಂಗ್, ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲರು. ಗ್ಲೇನ್ ಅದೆಷ್ಟೋ ಅಂತಾರಾಷ್ಟ್ರೀಯ ಹಾಗೂ ಲೀಗ್ ಪಂದ್ಯದಲ್ಲಿ ಏಕಾಂಗಿ ಹೋರಾಟ ನೀಡಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ.
ಪ್ರಸಕ್ತ ವರ್ಷದ ಟಿ20 ಕ್ರಿಕೆಟ್‌ನಲ್ಲಿ ಅಮೋಘ ಸಾಧನೆ ಮಾಡಿರುವ ಆಟಗಾರ ಅರ್ಷದೀಪ್ ಸಿಂಗ್. ಇವರನ್ನು ಉಳಿಸಿಕೊಳ್ಳುವಲ್ಲಿ ಎಡವಿದ್ದ ಪಂಜಾಬ್, ಹರಾಜಿನಲ್ಲಿ ಆರ್‌ಟಿಎಂ ಬಳಿಸಿ ಇವರಿಗೆ ಮಣೆ ಹಾಕಿದೆ. ಇವರಿಗೆ ಪಂಜಾಬ್ 18 ಕೋಟಿ ರೂ. ಭಾರೀ ಮೊತ್ತವನ್ನು ನೀಡಿದೆ. ಇವರು ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳ್ಲಿ ಬಿಗುವಿನ ದಾಳಿ ನಡೆಸುವಲ್ಲಿ ಹೆಸರುವಾಸಿ.
ದಕ್ಷಿಣ ಆಫ್ರಿಕಾ ತಂಡದ ಭರವಸೆಯ ಆಟಗಾರ ಮಾರ್ಕೊ ಯಾನ್ಸೆನ್ ತಮ್ಮ ಬಿಗುವಿನ ದಾಳಿಯ ಮೂಲಕವೇ ಹೆಸರುವಾಸಿ. ಇತ್ತೀಚಿಗೆ ಇವರು ತಮ್ಮಲ್ಲಿ ಬ್ಯಾಟಿಂಗ್ ಮಾಡುವ ಕ್ಷಮತೆ ಸಹ ಇರುವುದಾಗಿ ತೋರಿಸಿದ್ದಾರೆ. ಇವರ ಆಲ್‌ರೌಂಡರ್ ಎಬಿಲಿಟಿ ತಂಡಕ್ಕೆ ಬೂಸ್ಟ್ ನೀಡಲಿದೆ. ಅಲ್ಲದೆ ಇವರು ಬಿಗ್ ಹಿಟ್ಟಿಂಗ್ ಶಾಟ್‌ಗಳ ಮೂಲಕವೂ ಅಭಿಮಾನಿಗಳನ್ನು ರಂಜಿಸಬಹುದು.