ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಮೆಗಾ ಲೀಗ್‌ನಲ್ಲಿ 10 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಈ ಲೀಗ್‌ನಲ್ಲಿ ಗೆಲುವು ದಾಖಲಿಸಿ, ಅಂಕಗಳನ್ನು ಕಲೆ ಹಾಕುವ ಇರಾದೆ ಎಲ್ಲ ತಂಡಗಳದ್ದು ಆಗಿರುತ್ತದೆ. ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವಾಗ ಎದುರಾಳಿ ಯಾಗಿದ್ದವರು, ಈಗ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುತ್ತಾರೆ. ಇನ್ನು ಒಂದೇ ದೇಶದ ಪರ ಆಡುವ ಆಟಗಾರರು ಎದುರಾಳಿಗಳು ಆಗುತ್ತಾರೆ. ಸ್ಟಾರ್ ಆಟಗಾರರು ಮೈದಾನದಲ್ಲಿ ಇಳಿಯುತ್ತಾರೆ ಎಂದ್ರೆ ಜಿದ್ದು ಕಟ್ಟಿಟ್ಟ ಬುತ್ತಿ. ಐಪಿಎಲ್ ಇತಿಹಾಸದಲ್ಲಿ ಜಿದ್ದಾಜಿದ್ದಿನ ಕಾಳಗದ ಬಗ್ಗೆ ವಿವರ ಇಲ್ಲಿದೆ.
ಐಪಿಎಲ್‌ನಲ್ಲಿ ಅದೆಷ್ಟೋ ಪಂದ್ಯಗಳು ರೋಚಕತೆ ಹೆಚ್ಚಿಸಿರುತ್ತವೆ. ಇನ್ನು ಎಷ್ಟೋ ಪಂದ್ಯಗಳು ಸ್ಟಾರ್ ವಾರ್‍ನಿಂದ ಸದ್ದು ಮಾಡುತ್ತವೆ. ಇನ್ನು ಹಲವು ಪಂದ್ಯಗಳು ಹೈಪ್ ಕ್ರಿಯೇಟ್ ಆಗಿರುತ್ತವೆ. ಐಪಿಎಲ್ ಅಖಾಡದಲ್ಲಿ ಹೈಪ್ ಕ್ರಿಯೇಟ್ ಮಾಡಿರುವ ಐದು ಕಾಳಗಗಳ ಬಗ್ಗೆ ವರದಿ ಇಲ್ಲಿದೆ.

ಐಪಿಎಲ್ ವೇಳಾ ಪಟ್ಟಿಗಳು ಬಿಡುಗಡೆ ಆದಾಗ ಅಭಿಮಾನಿಗಳು ತಮ್ಮ ತಮ್ಮ ತಂಡದ ಪಂದ್ಯಗಳನ್ನು ಗುರುತು ಮಾಡಿಕೊಳ್ಳುತ್ತಾರೆ. ಇದೇ ವೇಳೆ ಬಿಗ್‌ಸ್ಟೆ ರೈವಲ್‌ರಿ ಎಂದೇ ಕರೆಸಿಕೊಳ್ಳುವ ಪಂದ್ಯಗಳನ್ನು ಸಹ ಮಾರ್ಕ್ ಮಾಡಿಕೊಳ್ಳುತ್ತಾರೆ. ಈ ಸಾಲಿನಲ್ಲಿ ಸೇರುಬ ಬಿಗ್ ಫೈಟ್‌ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಕ್ಲ್ಯಾಷ್‌ಗೂ ಹೈಪ್ ಇದ್ದೇ ಇರುತ್ತದೆ. ಈ ಕಾಳಗದಲ್ಲಿ ಧೋನಿ ಹಾಗೂ ವಿರಾಟ್ ಅವರ ಕಾಳಗವನ್ನು ಕಣ್ಣು ತುಂಬಿಕೊಳ್ಳಲು ಜನ ಕಾತುರದಿಂದ ಕಾಯುತ್ತ ಇರುತ್ತಾರೆ. ಚೆನ್ನೈ ವಿರುದ್ಧ ಆರ್‌ಸಿಬಿ ಅಂಕಿ ಅಂಶಗಳು ಹೇಳಿಕೊಳ್ಳುವಂತೆ ಇಲ್ಲ. ಈ ವರೆಗೆ ಉಭಯ ತಂಡಗಳು 32 ಬಾರಿ ಮುಖಾಮುಖಿ ಆಗಿದ್ದು ಚೆನ್ನೈ 21 ರಲ್ಲಿ ಗೆಲುವು ದಾಖಲಿಸಿದರೆ, ಆರ್‌ಸಿಬಿ 11 ರಲ್ಲಿ ಜಯ ಸಾಧಿಸಿದೆ.
ಇನ್ನು ಜಿದ್ದಾಜಿದ್ದಿನಿಂದ ಕೂಡಿರುವ ಕಾಳಗದಲ್ಲಿ ಎರಡನೇ ಸ್ಥಾನದಲ್ಲಿ ನಿಲ್ಲುವ ಪಂದ್ಯ ಆರ್‌ಸಿಬಿ ಹಾಗೂ ಕೆಕೆಆರ್ ನಡುವಿನ ಫೈಟ್. ಈ ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು ಪಂದ್ಯ ರಣ ರೋಚಕತೆ ಹುಟ್ಟಿಸಿರುತ್ತದೆ. ಶಾರುಖ್ ಖಾನ್ ಒಡೆತನದ ತಂಡ ಹಾಗೂ ಆರ್‌ಸಿಬಿಗೆ ಫ್ಯಾನ್ಸ್ ಸಖತ್ ಆಗಿದ್ದಾರೆ. ಉಭಯ ತಂಡಗಳ ನಡುವೆ ಈ ವರೆಗೆ 32 ಪಂದ್ಯಗಳು ನಡೆದಿದ್ದು ಕೆಕೆಆರ್ 18 ಗೆಲುವು ದಾಖಲಿಸಿದರೆ, ಆರ್‌ಸಿಬಿ 14 ಪಂದ್ಯಗಳಲ್ಲಿ ಜಯ ಸಾಧಿಸಿದೆ.

ವಾಣಿಜ್ಯ ನಗರಿಯ ತಂಡ ಮುಂಬೈ ಇಂಡಿಯನ್ಸ್ ಹಾಗೂ ಸಿಲಿಕಾನ್ ನಗರಿಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಕಾದಾಟವೂ ಸಹ ರಣ ರೋಚಕತೆಯಿಂದ ಕೂಡಿರುತ್ತದೆ. ಈ ವೇಳೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅಂಗಳ ಪ್ರವೇಶಿಸಿದಾಗ ಹೈವೋಲ್ಟೇಜ್ ಕಾವು ಕಾಣಬಹುದು. ಮುಂಬೈ ತಂಡದಲ್ಲಿ ಸಾಲು ಸಾಲು ಸ್ಟಾರ್ ಆಟಗಾರರು ಇದ್ದಾರೆ. ಆರ್‌ಸಿಬಿ ತಂಡದಲ್ಲೂ ಸ್ಟಾರ್‌ಗಳಿಗೆ ಏನು ಕಮ್ಮಿ ಇಲ್ಲ ಹೀಗಾಗಿ ಈ ಪಂದ್ಯ ಅಭಿಮಾನಿಗಳ ನೆಚ್ಚಿನ ಪಂದ್ಯ. ಈ ಎರಡೂ ತಂಡಗಳು ಐಪಿಎಲ್ ಇತಿಹಾಸದಲ್ಲಿ ಒಟ್ಟು 32 ಬಾರಿ ಮುಖಾಮುಖಿ ಆಗಿದ್ದು, ಮುಂಬೈ 19, ಬೆಂಗಳೂರು 13 ಪಂದ್ಯಗಳನ್ನು ಗೆದ್ದಿದೆ.
ಐಪಿಎಲ್‌ನ ಮೋಸ್ಟ್ ಸಕ್ಸಸ್ ಫುಲ್ ತಂಡಗಳಲ್ಲಿ ಒಂದಾಗಿರುವ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಕಾಳಗವೂ ಸಹ ರಣ ರೋಚಕತೆ ಹೆಚ್ಚಿಸಿರುತ್ತದೆ. ಈ ತಂಡಗಳು ಮೈದಾನದಲ್ಲಿ ಫೈಟ್ ನಡೆಸಿದಾಗ ಮುಂಬೈ ಹೆಚ್ಚು ಬಾರಿ ಗೆದ್ದಿದೆ. ಎರಡೂ ತಂಡಗಳು ಒಟ್ಟು 36 ಬಾರಿ ಮುಖಾಮುಖಿ ಆಗಿದ್ದು ಮುಂಬೈ 20 ರಲ್ಲಿ ಜಯ ಸಾಧಿಸಿದರೆ, ಚೆನ್ನೈ 16 ಪಂದ್ಯಗಳನ್ನು ಗೆದ್ದಿದೆ.
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಫೈಟ್ ಸಹ ಜಿದ್ದಾಜಿದ್ದಿನಿಂದ ಕೂಡಿರುತ್ತದೆ. ಈ ಪಂದ್ಯಗಳು ಥ್ರಿಲಿಂಗ್ ಆಗಿರುತ್ತವೆ. ಈ ಪಂದ್ಯಗಳನ್ನು ನೋಡಲು ಅಭಿಮಾನಿಗಳು ಸಹ ಕಾತುರದಿಂದ ಕಾಯುತ್ತಲೇ ಇರುತ್ತಾರೆ. ಉಭಯ ತಂಡಗಳು ಈಗಾಗಲೇ ಐಪಿಎಲ್ ಅಂಗಳದಲ್ಲಿ 32 ಬಾರಿ ಕಾದಾಟ ನಡೆಸಿದ್ದು, ಕೆಕೆಆರ್ 16 ರಲ್ಲಿ ಜಯ ಸಾಧಿಸಿದರೆ, ಡೆಲ್ಲಿ 15 ಪಂದ್ಯಗಳನ್ನು ಗೆದ್ದಿದೆ.