For Quick Alerts
ALLOW NOTIFICATIONS  
For Daily Alerts
 

ODIನಲ್ಲಿ ಅತಿ ಹೆಚ್ಚು ಬಾರಿ 300+ ರನ್ ಚೇಸ್ ಮಾಡಿರುವ ಟಾಪ್ 5 ತಂಡಗಳಿವು

Top 5 teams that have chased 300+ runs for more number of times in ODI

ಏಕದಿನ ಪಂದ್ಯದಲ್ಲಿ 300ಕ್ಕೂ ಹೆಚ್ಚಿನ ರನ್ ಗುರಿ ಬೆನ್ನಟ್ಟುವುದು ಸುಲಭದ ಮಾತಲ್ಲ. ಈ ರೀತಿ 300+ ರನ್ ಗುರಿಯನ್ನು ಬೆನ್ನಟ್ಟುವಾಗ ಗೆಲುವು ಸಾಧಿಸುವುದು ಖಚಿತ ಎನ್ನುವ ಸಂದರ್ಭಗಳಲ್ಲಿ ತಂಡಗಳು ವಿಫಲವಾಗಿರುವ ಉದಾಹರಣೆಗಳು ಸಾಕಷ್ಟಿವೆ. ಆರಂಭದಿಂದ ಅಂತ್ಯದವರೆಗೂ ಸಹ ಉತ್ತಮವಾಗಿ ಆಡಿದರೆ ಮಾತ್ರ 300+ ರನ್‌ಗಳ ಗುರಿ ಮುಟ್ಟಲು ಸಾಧ್ಯ.

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ 300+ ರನ್‌ಗಳ ಗುರಿ ಬೆನ್ನಟ್ಟಿದ ತಂಡ ಶ್ರೀಲಂಕಾ. 1992ರ ವಿಶ್ವಕಪ್ ಪಂದ್ಯವೊಂದರಲ್ಲಿ ಜಿಂಬಾಬ್ವೆ ವಿರುದ್ಧ 312 ರನ್ ಚೇಸ್ ಮಾಡಿ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 300+ ರನ್‌ಗಳ ಗುರಿ ಬೆನ್ನಟ್ಟಿದ ಮೊದಲ ತಂಡ ಎಂಬ ಖ್ಯಾತಿಗೆ ಶ್ರೀಲಂಕಾ ಪಾತ್ರವಾಯಿತು. ನಂತರದ ಪಂದ್ಯಗಳಲ್ಲಿ ಹಲವಾರು ತಂಡಗಳು ಈ ಸಾಧನೆಯ ಪಟ್ಟಿಗೆ ಸೇರಿಕೊಂಡವು.

ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಬಾರಿ 300+ ರನ್ ಚೇಸ್ ಮಾಡಿರುವ ಟಾಪ್ 5 ತಂಡಗಳ ಪಟ್ಟಿ ಈ ಕೆಳಕಂಡಂತಿದೆ.

5. ನ್ಯೂಜಿಲೆಂಡ್‌ :

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೂ ಒಟ್ಟು 7 ಬಾರಿ 300+ ರನ್ ಗುರಿಯನ್ನು ಯಶಸ್ವಿಯಾಗಿ ಮುಟ್ಟಿರುವ ನ್ಯೂಜಿಲೆಂಡ್ ತಂಡ ಟಾಪ್ 5ನೇ ಸ್ಥಾನದಲ್ಲಿದೆ.

4. ಶ್ರೀಲಂಕಾ :

ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಮೊಟ್ಟಮೊದಲ ಬಾರಿಗೆ 300+ ರನ್ ಗುರಿಯನ್ನು ಯಶಸ್ವಿಯಾಗಿ ಮುಟ್ಟಿದ ಖ್ಯಾತಿಯನ್ನು ಹೊಂದಿರುವ ಶ್ರೀಲಂಕಾ ಇದುವರೆಗೂ ಒಟ್ಟು 10 ಬಾರಿ ಈ ಸಾಧನೆಯನ್ನು ಮಾಡಿದ್ದು ನಾಲ್ಕನೇ ಸ್ಥಾನದಲ್ಲಿದೆ.

3. ಆಸ್ಟ್ರೇಲಿಯಾ :

ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾದ ಆಸ್ಟ್ರೇಲಿಯಾ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ ಇದುವರೆಗೂ ಒಟ್ಟು 11 ಬಾರಿ 300+ ರನ್ ಚೇಸ್ ಮಾಡಿ ಮೂರನೇ ಸ್ಥಾನದಲ್ಲಿದೆ.

2. ಇಂಗ್ಲೆಂಡ್ :

ಪ್ರಸ್ತುತ ನಡೆಯುತ್ತಿರುವ ಇಂಡಿಯಾ - ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ 337 ರನ್ ಚೇಸ್ ಮಾಡಿದ ಇಂಗ್ಲೆಂಡ್ ಇದುವರೆಗೂ ಒಟ್ಟು 12 ಬಾರಿ 300+ ರನ್ ಗುರಿ ಬೆನ್ನಟ್ಟಿ ಎರಡನೇ ಸ್ಥಾನದಲ್ಲಿದೆ.

1. ಭಾರತ :

ಟೀಮ್ ಇಂಡಿಯಾ ಇದುವರೆಗೂ ಒಟ್ಟು 19 ಏಕದಿನ ಪಂದ್ಯಗಳಲ್ಲಿ 300+ ರನ್ ಚೇಸ್ ಮಾಡುವುದರ ಮೂಲಕ ಟಾಪ್ ಒಂದನೇ ಸ್ಥಾನ ಪಡೆದುಕೊಂಡಿದೆ.

Story first published: Saturday, March 27, 2021, 20:16 [IST]
Other articles published on Mar 27, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+