ಜಾಕ್ ಪಾಟ್ ಹೊಡೆದ ಅನ್ ಕ್ಯಾಪ್ಡ್ ಪ್ಲೇಯರ್ಸ್: ಭಾರೀ ಮೊತ್ತಕ್ಕೆ ಬಿಕರಿ ಆದ ಐದು ಆಟಗಾರರು ಇವರೇ
ಐಪಿಎಲ್ ಮೆಗಾ ಆಕ್ಷನ್ ಸೌದಿಯಲ್ಲಿ ನಡೆದಿದೆ. ಈ ಹರಾಜಿನಲ್ಲಿ ಎಲ್ಲರ ಚಿತ್ತ ಸ್ಟಾರ್ ಆಟಗಾರರ ಮೇಲೆ ನೆಟ್ಟಿತು. ಈ ವೇಳೆ ಸ್ಟಾರ್ ಆಟಗಾರರು ನಿರೀಕ್ಷಿತ ಮೊತ್ತವನ್ನು ಪಡೆಯುವಲ್ಲಿ ವಿಫಲರಾದರು. ಆದರೆ ಅನ್ ಕ್ಯಾಪ್ಡ್ ಪ್ಲೇಯರ್ ಮಾಲೀಕರ ಚಿತ್ತ ಕದ್ದರು. ಈಗಾಗಲೇ ಐಪಿಎಲ್‌ನಲ್ಲಿ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿರುವ ಅನ್‌ಕ್ಯಾಪ್ಡ್ ಪ್ಲೇಯರ್ಸ್, ಮುಂದಿನ ಬಾರಿಯೂ ಮಿಂಚಲು ತಯಾರಾದರು. ಇವರನ್ನು ಕೊಳ್ಳಲು ಮಾಲೀಕರು ಸಹ ಕೋಟಿ ಕೋಟಿ ಹಣವನ್ನು ಹುಡಿದ್ದು ವಿಶೇಷವಾಗಿತ್ತು. ಭಾರೀ ಮೊತ್ತಕ್ಕೆ ಸೇಲ್ ಆದ ಅನ್‌ಕ್ಯಾಪ್ಡ್ ಆಟಗಾರರ ಪಟ್ಟಿ ಇಲ್ಲಿದೆ.
ಪಂಜಾಬ್ ತಂಡದ 24 ವರ್ಷದ ಆಟಗಾರ ನಮನ್ ಧೀರ್ ಮೊದಲ ದಿನ ಭಾರೀ ಮೊತ್ತಕ್ಕೆ ಸೇಲ್ ಆದ ಅನ್‌ಕ್ಯಾಪ್ಡ್ ಪ್ಲೇಯರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಇವರ ಮೂಲ ಬೆಲೆ 30 ಲಕ್ಷ ರೂ. ಆಗಿತ್ತು. ಇವರನ್ನು ಕೊಳ್ಳಲು ಆರ್‌ಸಿಬಿ, ಡೆಲ್ಲಿ, ರಾಜಸ್ಥಾನ ರಾಯಲ್ಸ್, ಪಂಜಾಬ್ ತಂಡಗಳು ಸಹ ಬಾಜಿ ಕಟ್ಟಿದವು. ಈ ವೇಳೆ ಮುಂಬೈ ಈ ಪ್ಲೇಯರ್ ಮೇಲೆ ಹದ್ದಿನ ಕಣ್ಣು ನೆಟ್ಟಿತ್ತು. ಅಲ್ಲದೆ 5.25 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತು.

ಎಲ್‌ಎಸ್‌ಜಿ ಪಾಲಾದ ಅಬ್ದುಲ್
ಈಗಾಗಲೇ ಐಪಿಎಲ್‌ನಲ್ಲಿ ಆಡಿ ಸೈ ಎನಿಸಿಕೊಂಡಿರುವ ಆಟಗಾರ ಸನ್‌ರೈಸರ್ಸ್ ಹೈದರಾಬಾದ್ ಪರ ಕಳೆದ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನ ನೀಡಿದರು. ಇವರ ಪ್ರದರ್ಶನದ ಫಲವಾಗಿ ಇವರ ಮೂಲ ಬೆಲೆಗಿಂತ 14 ಪಟ್ಟು ಹೆಚ್ಚು ಹಣವನ್ನು ತಮ್ಮ ಜೇಬಿಗೆ ಇಳಿಸಿಕೊಂಡರು. ಇವರು 4.20 ಕೋಟಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿದರು.
ಕಿಂಗ್ಸ್ ಸೇರಿದ ಯುವ ಬ್ಯಾಟರ್
ಕಳೆದ ಎರಡು ಆವೃತ್ತಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಬ್ಯಾಟ್ ಮಾಡಿದ್ದ ನೆಹಾಲ್ ವಧೇರಾ ನಿಜಕ್ಕೂ ಜಾಕ್ ಪಾಟ್ ಹೊಡೆದರು. ಇವರ ಮೂಲ ಬೆಲೆ 20 ಲಕ್ಷ ಆಗಿತ್ತು. ಇವರಿಗೆ ಕೊಳ್ಳಲು ಗುಜರಾತ್ ಹಾಗೂ ಡೆಲ್ಲಿ, ಚೆನ್ನೈ ತಂಡಗಳು ಬಾಜಿ ಕಟ್ಟಿದವು. ಕೊನೆಯಲ್ಲಿ 4.20 ಕೋಟಿ ನೀಡಿ ಪಂಜಾಬ್ ಹರಾಜು ಗೆದ್ದಿತು.
ಅಶುತೋಷ್ ಶರ್ಮಾ
ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ ಭರವಸೆ ಮೂಡಿಸಿದ್ದ ಪ್ಲೇಯರ್ ಆಶುತೋಷ್ ಶರ್ಮಾ ಅವರಿಗೆ ಡೆಲ್ಲಿ ಕ್ಯಾಪಿಟಲ್ಸ್ ಮೂರು ಕೋಟಿ ನೀಡಿ ಖರೀದಿಸಿತು. ಇಷ್ಟೊಂದು ಮೊತ್ತಕ್ಕೆ ಸೇಲ್ ಆಗಬಹುದಾ ಎಂಬ ಕಲ್ಪನೆ ಸಹ ಇವರಿಗೆ ಇರಲಿಲ್ಲ ಕಾಣುತ್ತೆ.
ಆಂಗ್ಕ್ರಿಶ್ ರಘುವಂಶಿ
ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಕೆಕೆಆರ್ ತಂಡಕ್ಕೆ ನೆರವಾಗಿದ್ದ ಪ್ಲೇಯರ್‌ಗೆ ಕೆಕೆಆರ್ ಮತ್ತೆ ರೆಡ್ ಕಾರ್ಪೆಟ್ ಹಾಕಿದೆ. ಇವರ ಮೂಲ ಬೆಲೆಗಿಂತ ಹೆಚ್ಚು ಪಟ್ಟು ಹಣವನ್ನು ನೀಡಿ ಕೆಕೆಆರ್ ಖರೀದಿಸಿತು. ಇವರು 3 ಕೋಟಿ ರೂಪಾಯಿಗೆ ಕೆಕೆಆರ್ ಮತ್ತೆ ಖರೀದಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications