For Quick Alerts
ALLOW NOTIFICATIONS  
For Daily Alerts
 

ಈ 6 ಬೌಲರ್‌ಗಳಿಂದ ಟಿ20 ವಿಶ್ವಕಪ್ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ!

2024ರ ಟಿ20 ವಿಶ್ವಕಪ್‌ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಟೂರ್ನಿಯಲ್ಲಿ ಎಲ್ಲಾ 20 ತಂಡಗಳ ಬೌಲರ್‌ಗಳು ತಮ್ಮ ಮಿಂಚಿನ ಪ್ರದರ್ಶನ ತೋರಲು ಸಿದ್ದರಾಗಿದ್ದಾರೆ. ಜೊತೆಗೆ ಎದುರಾಳಿ ತಂಡದ ಬ್ಯಾಟರ್‌ಗಳನ್ನು ಕಟ್ಟಿ ಹಾಕಲು ಭರ್ಜರಿ ತಯಾರಿ ನಡೆಸಿದ್ದಾರೆ.

ಇಂತಹ ಪ್ರತಿಷ್ಠಿತ ಟೂರ್ನಿಗಳಲ್ಲಿ ಪ್ರತಿಯೊಬ್ಬ ಬೌಲರ್‌ಗೂ ತಾನು ಬೌಲಿಂಗ್‌ ಮಾಡುವಾಗ ಸತತ ಮೂರು ಎಸೆತಗಳಲ್ಲಿಯೂ ವಿಕೆಟ್‌ಗಳನ್ನು‌ ಪಡೆಯುವ ಬಯಕೆ ಇರುತ್ತದೆ. ಆದರೆ ಇದುವರೆಗೆ ನಡೆದ ಟಿ20 ವಿಶ್ವಕಪ್‌ ಆವೃತ್ತಿಗಳಲ್ಲಿ ಇಂತಹ ಅಪರೂಪ ದಾಖಲೆಯನ್ನು ಮಾಡಿರುವುದು ಕೇವಲ 6 ಬೌಲರ್‌ಗಳು ಮಾತ್ರ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಅಪಾಯಕಾರಿ ಬೌಲರ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.

Top 6 bowlers who took the most Hattrick wickets in T20 World Cup history

1) ಬ್ರೆಟ್ ಲೀ: ಆಸ್ಟ್ರೇಲಿಯಾದ ವೇಗದ ಬೌಲರ್ ಬ್ರೆಟ್ ಲೀ ಒಂದು ಕಾಲದಲ್ಲಿ ಎದುರಾಳಿ ಬ್ಯಾಟರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿದವರು. ಅತ್ಯಂತ ಅಪಾಯಕಾರಿ ಆಗಿದ್ದ ಬ್ರೆಟ್‌ ಲೀ ಟಿ20 ವಿಶ್ವಕಪ್ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಬೌಲರ್ ಆಗಿದ್ದಾರೆ.

ಕೇಪ್ ಟೌನ್‌ನಲ್ಲಿ ನಡೆದ 2007ರ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಮೂರು ಎಸೆತಗಳಲ್ಲಿ ಮೂರು ವಿಕೆಟ್‌ಗಳನ್ನು ಪಡೆದಿದ್ದರು. ಶಕೀಬ್ ಅಲ್ ಹಸನ್, ಮಶ್ರಫೆ ಮೊರ್ತಜಾ ಮತ್ತು ಅಲೋಕ್ ಕಪಾಲಿ ಅವರ ವಿಕೆಟ್ ಕಬಳಿಸಿದ್ದರು.

2) ಕರ್ಟಿಸ್ ಕ್ಯಾಂಫರ್: ಐರಿಶ್ ಬೌಲರ್ ಕರ್ಟಿಸ್ ಕ್ಯಾಂಫರ್ ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಅಲ್ಲದೆ ಡಬಲ್ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

2021ರ ಟಿ20 ವಿಶ್ವಕಪ್‌ನಲ್ಲಿ ನೆದರ್‌ಲ್ಯಾಂಡ್ ವಿರುದ್ಧ 4 ಎಸೆತಗಳಲ್ಲಿ 4 ವಿಕೆಟ್‌ಗಳನ್ನು ಕಬಳಿಸಿದ್ದರು. ಕ್ಯಾಂಫರ್ ಕಾಲಿನ್ ಅಕರ್‌ಮನ್, ರಿಯಾನ್ ಟೆನ್ ಡೋಸ್ಚೇಟ್, ಸ್ಕಾಟ್ ಎಡ್ವರ್ಡ್ಸ್ ಮತ್ತು ರೋಲೋಫ್ ವ್ಯಾನ್ ಡೆರ್ ಮೆರ್ವೆ ಅವರ ವಿಕೆಟ್‌ಗಳನ್ನು ಪಡೆದಿದ್ದರು.

Top 6 bowlers who took the most Hattrick wickets in T20 World Cup history

3) ವನಿಂದು ಹಸರಂಗ: ಶ್ರೀಲಂಕಾದ ಲೆಗ್ ಸ್ಪಿನ್ನರ್ ಹಾಗು ನಾಯಕ ವನಿಂದು ಹಸರಂಗ ಟಿ20 ವಿಶ್ವಕಪ್ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. 2021ರ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹ್ಯಾಟ್ರಿಕ್ ಸಾಧನೆ ಗೈದಿದ್ದಾರೆ. ಮೂರು ಎಸೆತಗಳಲ್ಲಿ ಏಡೆನ್ ಮಾರ್ಕ್ರಾಮ್, ಟೆಂಬಾ ಬವುಮಾ ಮತ್ತು ಡ್ವೇನ್ ಪ್ರಿಟೋರಿಯಸ್ ಅವರನ್ನು ಔಟ್‌ ಮಾಡಿದ್ದರು.

Top 6 bowlers who took the most Hattrick wickets in T20 World Cup history

4) ಕಗಿಸೊ ರಬಾಡ: ಟಿ20 ವಿಶ್ವಕಪ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ ಹ್ಯಾಟ್ರಿಕ್ ವಿಕೆಟ್ ಪಡೆದ ನಾಲ್ಕನೇ ಬೌಲರ್ ಆಗಿದ್ದಾರೆ. 2021 ರಲ್ಲಿ ಇಂಗ್ಲೆಂಡ್ ವಿರುದ್ಧ ಹ್ಯಾಟ್ರಿಕ್ ದಾಖಲೆ ಹೊಂದಿದ್ದು, ಕ್ರಿಸ್ ವೋಕ್ಸ್, ಇಯಾನ್ ಮಾರ್ಗನ್ ಮತ್ತು ಕ್ರಿಸ್ ಜೋರ್ಡಾನ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದ್ದರು.

Top 6 bowlers who took the most Hattrick wickets in T20 World Cup history

5) ಕಾರ್ತಿಕ್ ಮೇಯಪ್ಪನ್: ಯುಎಇ ಬೌಲರ್ ಕಾರ್ತಿಕ್ ಮೇಯಪ್ಪನ್ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಐದನೇ ಬೌಲರ್. 2022ರ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ 3 ವಿಕೆಟ್‌ಗಳನ್ನು ಕಬಳಿಸಿದ್ದರು. ಭಾನುಕಾ ರಾಜಪಕ್ಸೆ, ಚರಿತ್ ಅಸಲಂಕಾ ಮತ್ತು ದಸುನ್ ಶಾನಕ ಅವರಿಗೆ ಮೆಯ್ಯಪ್ಪನ್ ಪೆವಿಲಿಯನ್ ಹಾದಿ ತೋರಿಸಿದ್ದರು.

Top 6 bowlers who took the most Hattrick wickets in T20 World Cup history

6) ಜೋಶುವಾ ಲಿಟಲ್: ಐರ್ಲೆಂಡ್‌ನ ಎಡಗೈ ವೇಗದ ಬೌಲರ್ ಜೋಶುವಾ ಲಿಟಲ್ ವಿಶ್ವಕಪ್ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಆರನೇ ಬೌಲರ್. 2022ರ ಟಿ20 ವಿಶ್ವಕಪ್‌ನಲ್ಲಿ ಅಡಿಲೇಡ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಹ್ಯಾಟ್ರಿಕ್ ಪಡೆದಿದ್ದರು. ಲಿಟಲ್ ಮೂರು ಎಸೆತಗಳಲ್ಲಿ ಕೇನ್ ವಿಲಿಯಮ್ಸನ್, ಜಿಮ್ಮಿ ನೀಶಮ್ ಮತ್ತು ಮಿಚೆಲ್ ಸ್ಯಾಂಟ್ನರ್ ಅವರನ್ನು ಔಟ್‌ ಮಾಡುವಲ್ಲಿ ಯಶಸ್ವಿಯಾಗಿದ್ದರು.

Story first published: Wednesday, May 29, 2024, 20:17 [IST]
Other articles published on May 29, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+