Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: ಎದುರಾಳಿಗಳಿಗೆ ತಲೆನೋವಾಗಲಿರುವ ಟಾಪ್‌ 7 ಆಲ್‌ರೌಂಡರ್ಸ್‌

ಇನ್ನೇನು ಐಪಿಎಲ್‌ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಟೂರ್ನಿಯಲ್ಲಿ ಸ್ಟಾರ್ ಆಟಗಾರರು ಕಣಕ್ಕೆ ಇಳಿಯಲಿದ್ದಾರೆ. ಈ ವೇಳೆ ಎಲ್ಲರ ಕಣ್ಣುಗಳು ಸ್ಟಾರ್‌ ಆಲ್‌ರೌಂಡರ್‌ಗಳ ಮೇಲೆ ನೆಟ್ಟಿರಲಿವೆ. ಈ ಐಪಿಎಲ್‌ನಲ್ಲಿ ವಿವಿಧ ತಂಡಗಳ ಪರ ಆಡಲಿರುವ ಟಾಪ್‌ 7 ಆಲ್‌ರೌಂಡರ್‌ಗಳ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಟ್ಟಿಯಲ್ಲಿ ಆರ್‌ಸಿಬಿ ತಂಡದ ಆಲ್‌ರೌಂಡರ್‌ಗಳು ಇದ್ದಾರೆ.

ಹೊಡಿ ಬಡಿ ಆಟದಲ್ಲಿ ಬ್ಯಾಟರ್‌ಗಳು ಹಾಗೂ ಬೌಲರ್‌ಗಳಿಗಿಂತ ಹೆಚ್ಚಾಗಿ ಆಲ್‌ರೌಂಡರ್‌ಗಳಿಗೆ ಮಾಲೀಕರು ಮಣೆ ಹಾಕುತ್ತಾರೆ. ಈ ಆಟಗಾರರು ತಮ್ಮ ಬಿಗುವಿನ ದಾಳಿ ಹಾಗೂ ಸಿಡಿಲಬ್ಬರದ ಬ್ಯಾಟಿಂಗ್‌ನಿಂದ ತಂಡಕ್ಕೆ ನೆರವಾಗಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಈ ಬಾರಿ ಲೀಗ್‌ನಲ್ಲಿ ಎಲ್ಲರ ಕಣ್ಣುಗಳು ಈ ಏಳು ಸ್ಟಾರ್ ಆಲ್‌ರೌಂಡರ್‌ಗಳ ಮೇಲೆ ನೆಟ್ಟಿರಲಿವೆ.

Top 7 Power

ಹಾರ್ದಿಕ್ ಪಾಂಡ್ಯ

ಸ್ಟಾರ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಆಟಗಾರ ಹಾರ್ದಿಕ್ ಪಾಂಡ್ಯ. ಇವರು ತಮ್ಮ ಮಿಡಿಯಮ್ ಪೇಸ್‌ ದಾಳಿಯಿಂದ ಎದುರಾಳಿಗಳನ್ನು ಕಾಡಬಲ್ಲರು. ಇನ್ನು ಇವರು ಮಿಡ್ಲ್ ಆರ್ಡರ್‌ನಲ್ಲಿ ಬ್ಯಾಟ್ ಮಾಡಿ ಬಿಗ್ ಹಿಟ್ ಬಾರಿಸುವ ಕ್ಷಮತೆ ಹೊಂದಿದ್ದಾರೆ. ಹೀಗಾಗಿ ಇವರು ಎದುರಾಳಿಗಳಿಗೆ ತಲೆನೋವಾಗಿದ್ದಾರೆ. ಇವರು ಇತ್ತೀಚಿಗೆ ನಡೆದ ಟಿ20 ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಅಬ್ಬರಿಸಿದ್ದರು.

ರವೀಂದ್ರ ಜಡೇಜಾ

ಟೀಮ್ ಇಂಡಿಯಾದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಯಾವುದೇ ಫಾರ್ಮೆಟ್‌ ಇದ್ದರೂ ಹೊಂದಿಕ್ಕೊಳ್ಳುವ ಆಟಗಾರ. ಇವರು ಈ ಬಾರಿ ರಾಜಸ್ಥಾನ ರಾಯಲ್ಸ್‌ ತಂಡದ ಪರ ಕಣಕ್ಕೆ ಇಳಿಯಲಿದ್ದು, ಇವರಿಗೆ ರಾಯಲ್ಸ್ ತಂಡ ದೊಡ್ಡ ಜವಾಬ್ದಾರಿಯನ್ನು ಸಹ ನೀಡಲಿದೆ. ಇವರ ಲೆಫ್ಟ್ ಆರ್ಮ್‌ ಸ್ಪಿನ್ ಎದುರಾಳಿ ಬ್ಯಾಟರ್‌ಗಳನ್ನು ಕಾಡಲಿದೆ. ಅಲ್ಲದೆ ಇವರು ನಂಬಿಕಸ್ಥ ಕೆಳ ಕ್ರಮಾಂಕದ ಬ್ಯಾಟರ್‌ ಆಗಿದ್ದು, ಸ್ಟ್ರೈಕ್‌ ಬದಲಿಸುತ್ತಾ, ದೊಡ್ಡ ಇನಿಂಗ್ಸ್‌ ಕಟ್ಟಬಲ್ಲರು.

Top 7 Power

ಕ್ಯಾಮರೂನ್‌ ಗ್ರೀನ್‌

ಐಪಿಎಲ್‌ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಆಟಗಾರ ಕ್ಯಾಮರೂನ್ ಗ್ರೀನ್. ಇವರು ಈ ಬಾರಿ ಕೆಕೆಆರ್ ತಂಡದ ಪರ ಆಡಲಿದ್ದಾರೆ. ಗ್ರೀನ್ ಆಗಮನದಿಂದ ಕೆಕೆಆರ್‌ ತಂಡ ಬಲಿಷ್ಠವಾದಂತೆ ಕಾಣುತ್ತಿದೆ. ಇವರು ಬೌಲಿಂಗ್‌ನಲ್ಲಿ ಭಿನ್ನತೆ ಹೊಂದಿದ್ದು, ಡೆತ್ ಓವರ್‌ಗಳಲ್ಲಿ ಇವರು ಬ್ಯಾಟ್ ಮಾಡಬಲ್ಲ ಕ್ಷಮತೆ ಹೊಂದಿದ್ದಾರೆ.

ಅಕ್ಷರ್ ಪಟೇಲ್

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿರುವ ಅಕ್ಷರ್ ಪಟೇಲ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್. ಇವರು ತಮ್ಮ ಸ್ಪಿನ್ ಜಾದುವಿನಿಂದ ಎದುರಾಳಿಗಳನ್ನು ಕಟ್ಟಿ ಹಾಕಿದರೆ, ಯಾವುದೇ ಕ್ರಮಾಂಕದಲ್ಲಾದ್ರೂ ಬ್ಯಾಟಿಂಗ್‌ಗೆ ಕಳುಹಿಸಿದರೆ ಸೈ ಎನ್ನುವ ಪ್ಲೇಯರ್‌. ಇವರ ಸ್ಥಿರ ಪ್ರದರ್ಶನ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ.

ಮಿಚೆಲ್ ಮಾರ್ಷ್

ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಮ್ಯಾಚ್ ವಿನ್ನರ್ ಆಗಿ ಗುರುತಿಸಿಕೊಂಡಿರುವ ಆಟಗಾರ ಮಿಚೆಲ್ ಮಾರ್ಷ್. ಇವರು ಪಂದ್ಯದ ಗತಿಯನ್ನೇ ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ಬದಲಿಸಬಲ್ಲ ಕ್ಷಮತೆ ಹೊಂದಿದ್ದಾರೆ. ಮಿಡಿಯಮ್‌ ಪೇಸ್‌ ಬೌಲಿಂಗ್‌ನಿಂದಲೂ ಎಲ್‌ಎಸ್‌ಜಿ ತಂಡಕ್ಕೆ ನೆರವಾಗಬಹುದು.

ವೆಂಕಟೇಶ್ ಅಯ್ಯರ್

ಎಡಗೈ ಬ್ಯಾಟರ್‌ ವೆಂಕಟೇಶ್‌ ಅಯ್ಯರ್ ಈ ಬಾರಿ ಆರ್‌ಸಿಬಿ ತಂಡದ ಪರ ಆಡಲಿದ್ದಾರೆ. ಇವರು ಟಾಪ್‌ ಆರ್ಡರ್‌ನಲ್ಲಿ ಬ್ಯಾಟ್ ಮಾಡಲಿದ್ದು, ಪಾರ್ಟ್‌ ಟೈಮ್‌ ಬೌಲರ್ ಆಗಿ ಸಹ ಗುರುತಿಸಿಕೊಂಡಿದ್ದಾರೆ. ಇವರು ಆರ್‌ಸಿಬಿ ತಂಡಕ್ಕೆ ಹಲವು ಆಯ್ಕೆಗಳನ್ನು ಸಂಯೋಜಿಸುವಲ್ಲಿ ನೆರವಾಗಬಲ್ಲ ಆಟಗಾರ.

ಶಿವಂ ದುಬೆ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕಣಕ್ಕೆ ಇಳಿಯಲಿರುವ ಪವರ್ ಹಿಟರ್ ಶಿವಂ ದುಬೆ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಸ್ಪಿನ್ ಬೌಲರ್‌ಗಳ ವಿರುದ್ಧ ಲೀಲಾಜಾಲವಾಗಿ ರನ್‌ಗಳನ್ನು ಕಲೆ ಹಾಕಬಲ್ಲ ಕ್ಷಮತೆ ಇವರದ್ದಾಗಿದೆ. ಇವರ ವೇಗದ ಬೌಲಿಂಗ್ ಸಿಎಸ್‌ಕೆ ತಂಡಕ್ಕೆ ಬಲ ತರಲಿದೆ.

Story first published: Wednesday, March 18, 2026, 11:09 [IST]
Other articles published on Mar 18, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+