For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌ನ ಪ್ರಮುಖ ಆಟಗಾರರು ಆ್ಯಷಸ್ ಬಹಿಷ್ಕರಿಸುವ ಸಾಧ್ಯತೆ!

Top England players could boycott Ashes Down Under in view of strict bubble life

ಲಂಡನ್‌: ಇಂಗ್ಲೆಂಡ್‌ನ ಕೆಲ ಪ್ರಮುಖ ಆಟಗಾರರು ಮುಂಬರಲಿರುವ ಜನಪ್ರಿಯ ಆ್ಯಷಸ್ ಸರಣಿಯನ್ನು ಬಹಿಷ್ಕರಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಆಸ್ಟ್ರೇಲಿಯಾದಲ್ಲಿ ಕಠಿಣ ಕ್ವಾರಂಟೈನ್ ನಿಯಮವಿರುವುದರಿಂದ ಆ್ಯಷಸ್‌ನಲ್ಲಿ ಆಡುವ ಆಟಗಾರರು ಸುಮಾರು ನಾಲ್ಕು ತಿಂಗಳ ಕಾಲ ಬಯೋ ಬಬಲ್ ಒಳಗಿರಬೇಕು. ಹೋಟೆಲ್ ರೂಮ್‌ನೊಳಗೆ ಅಷ್ಟು ದಿನಗಳ ಕಾಲ ಕಳೆಯಲು ಇಷ್ಟವಿಲ್ಲದ್ದರಿಂದ ಕೆಲವು ಆಟಗಾರರು ಆ್ಯಷಸ್ ನಲ್ಲಿ ಆಡದಿರಲು ಯೋಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇಂಗ್ಲೆಂಡ್‌ನ ಕೆಲ ಅನುಭವಿ ಆಟಗಾರರು ಆ್ಯಷಸ್ ಸರಣಿ ಬಹಿಷ್ಕರಿಸಲು ಯೋಚಿಸಿದ್ದರೂ ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಸಿಸಿಬಿ) ಆ್ಯಷಸ್ ಸರಣಿ ಮುಂದೂಡುವ ಬಗ್ಗೆ ಏನೂ ಯೋಚಿಸುತ್ತಿಲ್ಲ. ಯಾವ ಆಟಗಾರರು ಆಡದಿದ್ದರೂ ಆ್ಯಷಸ್‌ನಲ್ಲಿ ಪಾಲ್ಗೊಳ್ಳುವ ಯೋಚನೆಯಲ್ಲಿ ಇಸಿಬಿ ಇದೆ. ಈ ಬಗ್ಗೆ ಬೋರ್ಡ್, ಆಟಗಾರರು ಮತ್ತು ಬೆಂಬಲ ಸಿಬ್ಬಂದಿ ಮಧ್ಯೆ ಮಾತುಕತೆ ನಡೆಯುತ್ತಿದೆ.

"ಇಂಗ್ಲೆಂಡ್‌ನ ಫೀಲ್ಡಿಂಗ್‌ ಗಮನಾರ್ಹವಾಗಿ ಕಡಿಮೆ ಸಾಮರ್ಥ್ಯ ಹೊಂದಿದೆ. ಮುಂಬರುವ ಆ್ಯಷಸ್ ವೇಳೆ ಇನ್ನೂ ಸಮಸ್ಯೆ ಬೆಳೆಯಬಹುದು. ಈ ಬಗ್ಗೆ ಇಸಿಬಿ ಮತ್ತು ಅಧಿಕಾರಿಗಳ ಜೊತೆ ಮಾತುಕತೆ ನಡೆಯುತ್ತಿದೆ," ಎಂದು ಇಎಸ್‌ಪಿಎನ್‌ ಕ್ರಿಕ್‌ ಇನ್ಫೋ ವರದಿ ಹೇಳಿದೆ.

ಕ್ವಾರಂಟೈನ್ ನಿಯಮ ಸ್ವಲ್ಪ ಮಟ್ಟಿಗೆ ಸಡಿಲಿಸುವಂತೆ ಅಥವಾ ಪ್ರವಾಸ ಸರಣಿ ಮುಂದೂಡುವಂತೆ ಇಂಗ್ಲೆಂಡ್ ಆಟಗಾರರು ಮಾಡಿಕೊಂಡ ಮನವಿಯನ್ನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಿರಸ್ಕರಿಸಿದೆ. ಇದರಿಂದ ಇಂಗ್ಲೆಂಡ್ ಅನುಭವಿ ಆಟಗಾರರು ನಿರಾಶೆಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.

"ಇಂಗ್ಲೆಂಡ್‌ ಬೋರ್ಡ್‌ ಜೊತೆಗಿನ ಮನವಿ ಈಡೇರದಿದ್ದರಿಂದ ಆಟಗಾರರು ಅವರವರ ಆಯ್ಕೆ ಪರಿಗಣಿಸಲಿದ್ದಾರೆ. ಇವುಗಳಲ್ಲಿರುವ ಒಂದು ಆಯ್ಕೆಯೆಂದರೆ ಆಟಗಾರರು ಮತ್ತು ಬೆಂಬಲ ಸಿಬ್ಬಂದಿ ಎಲ್ಲರೂ ಸೇರಿ ಪ್ರವಾಸ ಬಹಿಷ್ಕರಿಸೋದು," ಎಂದು ಮೂಲವೊಂದು ಮಾಹಿತಿ ನೀಡಿದೆ. ಅಂದ್ಹಾಗೆ, ಇಂಗ್ಲೆಂಡ್‌ನ ಬಹಳಷ್ಟು ಆಟಗಾರರು ಐಪಿಎಲ್‌ನಲ್ಲೂ ಆಡುತ್ತಿಲ್ಲ.

Story first published: Thursday, September 16, 2021, 8:23 [IST]
Other articles published on Sep 16, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+