ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್‌ನಲ್ಲಿ 2021ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ 5 ಬೌಲರ್‌ಗಳು: ಭಾರತೀಯನೇ ಟಾಪ್

Top Five Bowlers With The Highest Wickets In Test cricket In 2021

ಬೆಂಗಳೂರು, ಸೆಪ್ಟೆಂಬರ್ 5: ಸೀಮಿತ ಓವರ್‌ಗಳ ಆರ್ಭಟದ ಮಧ್ಯೆಯೂ ಟೆಸ್ಟ್ ಕ್ರಿಕೆಟ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ರೋಚಕತೆಯನ್ನು ಹೊಂದಿದೆ. ಇತ್ತೀಚಿನ ಹಲವು ಟೆಸ್ಟ್ ಕ್ರಿಕೆಟ್ ಪಂದ್ಯಗಳು ಜಿದ್ದಾಜಿದ್ದಿನ ಸೆಣೆಸಾಟಕ್ಕೆ ಸಾಕ್ಷಿಯಾಗಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನ ಮೇಲೆ ಕ್ರಿಕೆಟ್ ಪ್ರೇಮಿಗಳ ಅಭಿಮಾನ ಕಡಿಮೆಯಾಗಿಲ್ಲ. ಇನ್ನು ಈ ವರ್ಷ ಅಂದರೆ 2021ರಲ್ಲಿ ಬ್ಯಾಟ್ಸ್‌ಮನ್‌ಗಳು ಬೌಲರ್‌ಗಳು ಹಾಗೂ ಒಟ್ಟಾರೆ ತಂಡಗಳಿಂದ ಸಾಕಷ್ಟು ಅದ್ಭುತವಾದ ಪ್ರದರ್ಶನಗಳು ಬಂದಿದೆ. ಇದೇ ವರ್ಷ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ನಡೆಯಿತು. ಫೈನಲ್ ಹಂತಕ್ಕೆ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಪ್ರವೇಶ ಪಡೆದುಕೊಂಡು ಬಳಿಕ ಕೇನ್ ಮಿಲಿಯಮ್ಸನ್ ನೇತೃತ್ವದ ಕೀವಿಸ್ ಪಡೆ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.

ಹೀಗಾಗಿ ಈ ಬಾರಿ ಟೆಸ್ಟ್ ಕ್ರಿಕೆಟ್‌ನಲ್ಲಿ ಸಾಕಷ್ಟು ಅದ್ಭುತ ಪಂದ್ಯಗಳು ಅದ್ಭುತ ಪ್ರದರ್ಶನಗಳು ಅಭಿಮಾನಿಗಳಿಗೆ ಸವಿಯಲು ದೊರೆತಿದೆ. ಅದರಲ್ಲೂ ಈ ಬಾರಿ ಟೆಸ್ಟ್ ಕ್ರಿಕೆಟ್‌ನಲ್ಲಿ ಬೌಲರ್‌ಗಳಿಂದ ಉತ್ತಮ ಪ್ರದರ್ಶನ ಹೊರಬಂದಿದೆ. ಈ ವರದಿಯಲ್ಲಿ ಈ ವರ್ಷದಲ್ಲಿ ನಡೆದ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಅಗ್ರ ಬೌಲರ್‌ಗಳು ಯಾರು? ಅವರ ಪ್ರದರ್ಶನ ಹೇಗಿತ್ತು? ಮೊದಲ ಸ್ಥಾನದಲ್ಲಿ ಯಾರಿದ್ದಾರೆ? ಈ ಬಗ್ಗೆ ಸಂಕ್ಷಿಪ್ತ ವರದಿ ಇಲ್ಲಿದೆ.

ಟೆಸ್ಟ್ ಇನ್ನಿಂಗ್ಸ್ ಬೆಳೆಸಬೇಕಿರುವುದೇ ಹೀಗೆ: ರೋಹಿತ್ ಆಟಕ್ಕೆ ತಲೆದೂಗಿದ ಗವಾಸ್ಕರ್ಟೆಸ್ಟ್ ಇನ್ನಿಂಗ್ಸ್ ಬೆಳೆಸಬೇಕಿರುವುದೇ ಹೀಗೆ: ರೋಹಿತ್ ಆಟಕ್ಕೆ ತಲೆದೂಗಿದ ಗವಾಸ್ಕರ್

5. ಒಲ್ಲೀ ರಾಬಿನ್ಸನ್

5. ಒಲ್ಲೀ ರಾಬಿನ್ಸನ್

ಇಂಗ್ಲೆಂಡ್ ಕ್ರಿಕೆಟ್ ತಂಡದ ಈ ವೇಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಬಾರಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಕಳೆದ ಜೂನ್ ತಿಂಗಳಿನಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಪರವಾಗಿ ಮೊದಲ ಬಾರಿಗೆ ಆಡುವ ಅವಕಾಶ ಪಡೆದುಕೊಂಡಿದ್ದರು. ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟ್ ಕಿತ್ತ ಮಿಂಚಿದ್ದರು. ಆದರೆ ಪಂದ್ಯದ ಬಳಿಕ ಭಾರೀ ವಿವಾದವೊಂದಕ್ಕೆ ರಾಬಿನ್ಸನ್ ಸಿಲುಕಿದ್ದರು. ವಿವಾದಾತ್ಮಕ ಅಭಿಪ್ರಾಯವೊಂದನ್ನು ಹಂಚಿಕೊಂಡಿದ್ದ ಟ್ವಿಟ್ಟರ್ ಪೋಸ್ಟ್‌ವೊಂದು ವೈರಲ್ ಆಗಿತ್ತು. ಈ ಟ್ವೀಟ್‌ನಲ್ಲಿದ್ದ ವಿವಾದಾತ್ಮಕ ಅಂಶಗಳ ಕಾರಣದಿಂದಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ರಾಬಿನ್ಸನ್ ವಿರುದ್ಧ ನಿಷೇಧ ಕಠಿಣ ಶಿಕ್ಷೆಯನ್ನು ನೀಡಿತ್ತು.

ಆದರೆ ಬಳಿಕ ಈ ನಿಷೇಧವನ್ನು ತೆರವುಗೊಳಿಸುವ ನಿರ್ಧಾರಕ್ಕೆ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಬಂದಿತ್ತು. ಇದರ ಪರಿಣಾಮವಾಗಿ ಭಾರತ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಆಐ್ಕೆಯಾದ ತಂಡದಲ್ಲಿ ರಾಬಿನ್ಸನ್ ಸ್ಥಾನ ಪಡೆದುಕೊಂಡರು. ಈ ಮೂಲಕ ಈ ಸರಣಿಯಲ್ಲಿಯೂ ರಾಬಿನ್ಸನ್ ಅದ್ಭುತ ಪ್ರದರ್ಶನ ನೀಡುತ್ತಿದ್ದು ಮತ್ತಷ್ಟು ಮಿಂಚುಹರಿಸುವ ವಿಶ್ವಾಸದಲ್ಲಿದ್ದಾರೆ. ನಾಟಿಂಗ್‌ಹ್ಯಾಮ್ ಹಾಗೂ ಲೀಡ್ಸ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಈವರೆಗೆ ಆಡಿದ ಐದು ಪಂದ್ಯಗಳ ಪೈಕಿ ರಾಬಿನ್ಸನ್ 28 ವಿಕೆಟ್ ಸಂಪಾದಿಸಿದ್ದಾರೆ. ಈ ಮೂಲಕ ಈ ಬಾರಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

4. ಜೇಮ್ಸ್ ಆಂಡರ್ಸನ್

4. ಜೇಮ್ಸ್ ಆಂಡರ್ಸನ್

ಟೆಸ್ಟ್ ಕ್ರಿಕೆಟ್ ಕಂಡ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರೆನಿಸಿರುವ ಜೇಮ್ಸ್ ಆಂಡರ್ಸನ್ ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. 39ರ ಹರೆಯದಲ್ಲಿಯೂ ಆಂಡರ್ಸನ್ ತಮ್ಮ ಬೌಲಿಂಗ್ ಮೊನಚು ಕಳೆದುಕೊಳ್ಳದೆ ಎದುರಾಳಿಗಳಿಗೆ ಮಾರಕವಾಗುತ್ತಿದ್ದಾರೆ. ಹೀಗಾಗಿಏ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ವೇಗಿ ಎಂದು ಇಂಗ್ಲೆಂಡ್‌ನ ಈ ಬೌಲರ್ ಎನಿಸಿದಿದ್ದಾರೆ. ವರ್ಷಗಳು ಹೆಚ್ಚಾದಂತೆ ತಮ್ಮ ಬೌಲಿಂಗ್‌ನ ಮೊನಷನ್ನು ಮತ್ತಷ್ಟಯ ಹೆಚ್ಚಿಸುತ್ತಲೇ ಹೋಗುತ್ತಿದ್ದಾರೆ ಜೇಮ್ಸ್ ಆಂಡರ್ಸನ್. ಟೆಸ್ಟ್ ಕ್ರಿಕೆಟ್‌ನಲ್ಲಿ 600ಕ್ಕೂ ಅಧಿಕ ವಿಕೆಟ್ ಪಡೆದಿರುವ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.

ಇತ್ತೀಚೆಗಷ್ಟೇ ಈ ದಿಗ್ಗಜ ಬೌಲರ್ ಭಾರತದ ಶ್ರೇಷ್ಠ ಬೌಲರ್ ಅನಿಲ್ ಕುಂಬ್ಳೆ ವಿಕೆಟ್ ದಾಖಲೆಯನ್ನು ಹಿಂದಿಕ್ಕಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸದ್ಯ ಆಂಡರ್ಸನ್ ದಿಗ್ಗಜ ಆಟಗಾರರಾದ ಮುತ್ತಯ್ಯ ಮುರಳೀಧರನ್ ಹಾಗೂ ಶೇನ್ ವಾರ್ನ್ ಅವರಿಗಿಂತ ಮಾತ್ರವೇ ಹಿಂದಿದ್ದಾರೆ.

ಇನ್ನು ಜೇಮ್ಸ್ ಆಂಡರ್ಸನ್ ಈ ವರ್ಷ ಈವರೆಗೆ ಒಟ್ಟು 10 ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು 32 ವಿಕೆಟ್ ಸಂಪಾದಿಸಿದ್ದಾರೆ. ಎರಡು ಬಾರಿ ಐದು ವಿಕೆಟ್‌ಗಳ ಗೊಂಚಲು ಕೂಡ ಪೊಡೆದುಕೊಂಡಿದ್ದಾರೆ. ಈ ಮೂಲಕ ಈ ವರ್ಷ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಆಂಡರ್ಸನ್ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

3. ಹಸನ್ ಅಲಿ

3. ಹಸನ್ ಅಲಿ

ಈ ವರ್ಷದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನದ ವೇಗಿ ಹಸನ್ ಅಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಪಾಕಿಸ್ತಾನ ತಂಡದಲ್ಲಿ ಮಧ್ಯಮ ವೇಗಿಯಾಗಿ ಯಶಸ್ಸು ಸಾಧಿಸಿರುವ ಹಸನ್ ಅಲಿ ಪಾಲಿಗೆ ಈ ವರ್ಷ ಅತ್ಯುತ್ತಮವಾಗಿದೆ. ಸಾಕಷ್ಟು ಏರಿಳಿತಗಳ ಮೂಲಕ ದಾಳಿ ನಡೆಸುವ ಈ ವೇಗದ ಬೌಲರ್ ಅತ್ಯುತ್ತಮ ಪ್ರದರ್ಶನ ನೀಡಲು ಯಶಸ್ವಿಯಾಗಿದ್ದಾರೆ.

2021ರಲ್ಲಿ ಈವರೆಗೆ ಆರು ಪಂದ್ಯಗಳಲ್ಲಿ ಆಡಿರುವ ಹಸನ್ ಅಲಿ ಈವರೆಗೆ 32 ವಿಕೆಟ್ ಸಂಪಾದಿಸಿ ಮಿಂಚಿದ್ದಾರೆ. 169.5 ಓವರ್‌ಗಳನ್ನು ಎಸೆದಿದ್ದಾರೆ ಹಸನ್ ಅಲಿ. ಈ ವರ್ಷ ಈವರೆಗೆ ನಾಲ್ಕು ಬಾರಿ ಐದು ವಿಕೆಟ್ ಹೊಂಚಲು ಪಡೆದಿರುವ ಹಸನ್ ಅಲಿ, ಒಂದು ಬಾರಿ 10 ವಿಕೆಟ್‌ಗಳ ಗೊಂಚಲು ಕೂಡ ಪಡೆದು ಮಿಂಚಿದ್ದಾರೆ.

2. ಶಾಹಿನ್ ಶಾ ಅಫ್ರಿದಿ

2. ಶಾಹಿನ್ ಶಾ ಅಫ್ರಿದಿ

ಈ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನದ ಮತ್ತೊಂದು ವೇಗದ ಬೌಲರ್ ಸ್ಥಾನವನ್ನು ಪಡೆದಿದ್ದಾರೆ. 21ರ ಹರೆಯದ ಯುವ ವೇಗಿ ಶಾಹಿನ್ ಶಾ ಅಫ್ರಿದಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಎರಡನೇ ಪಾಕಿಸ್ತಾನಿ ಬೌಲರ್. ಸದ್ಯ ಪಾಕಿಸ್ತಾನದ ಪರವಾಗಿ ಎಲ್ಲಾ ಮಾದರಿಯಲ್ಲಿಯೂ ಮಿಂಚುತ್ತಿರುವ ಶಾಹಿನ್ ಶಾ ಅಫ್ರಿದಿ ತಮ್ಮ ನಿಖರವಾಗಿ ಲೈನ್‌ ಮತ್ತು ಲೆಂತ್ ದಾಳಿಯಿಂದಾಗಿ ಉತ್ತಮ ಯಶಸ್ಸು ಸಂಪಾದಿಸಿದ್ದಾರೆ. ಕ್ರಿಕೆಟ್ ಅಭಿಮಾನಿಗಳಿಂದ ಸಾಕಷ್ಟು ಪ್ರಶಂಸೆಗೆ ಒಳಗಾಗಿರುವ ಪಾಕಿಸ್ತಾನದ ಈ ವೇಗಿಯ ಅದ್ಭುತವಾಗಿ ಕೌಶಲ್ಯಕ್ಕೆ ಕ್ರಿಕೆಟ್ ತಜ್ಞರು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡದ ಈ ಯುವ ವೇಗಿಯ ಪಾಲಿಗೆ 2021 ಅತ್ಯುತ್ತಮ ವರ್ಷವಾಗಿದೆ. ಈ ವರ್ಷದಲ್ಲಿ ಈವರೆಗೆ 7 ಪಂದ್ಯಗಳನ್ನು ಆಡಿರುವ ಶಾಹಿನ್ ಅಫ್ರಿದಿ 231.5 ಓವರ್‌ಗಳನ್ನು ಎಸೆದಿದ್ದು 37 ವಿಕೆಟ್ ಸಂಪಾದಿಸಿದ್ದಾರೆ. ಎರಡು ಬಾರಿ ಐದು ವಿಕೆಟ್‌ಗಳ ಗೊಂಚಲು ಸಂಪಾದಿಸಿರುವ ಈ ಬೌಲರ್ ಒಂದು ಬಾರಿ 10 ವಿಕೆಟ್‌ಗಳ ಗೊಂಚಲು ಪಡೆದುಕೊಂಡಿದ್ದಾರೆ.

ಕೊಹ್ಲಿಯ ಈ ನಿರ್ಧಾರದಿಂದ 4ನೇ ಟೆಸ್ಟ್ ನಲ್ಲಿ ಭಾರತ ಸೋಲೋದು ಗ್ಯಾರೆಂಟಿ | Oneindia Kannada
1. ಆರ್ ಅಶ್ವಿನ್

1. ಆರ್ ಅಶ್ವಿನ್

ವೇಗದ ಬೌಲರ್‌ಗಳೇ ಹೊಂದಿರುವ ಈ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಮಾತ್ರ ಭಾರತದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಪಡೆದುಕೊಂಡಿದ್ದಾರೆ. ಈ ವರ್ಷದಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದಾರೆ ಆರ್ ಅಶ್ವಿನ್. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ಯಮ ಆಫ್ ಸ್ಪಿನ್ನರ್‌ಗಳಲ್ಲಿ ಒಬ್ಬರು ಎಂದು ಅಶ್ವಿನ್ ಕ್ಯಾತರಾಗಿದ್ದಾರೆ. ಕಳೆದ ಜೂನ್‌ನಲ್ಲಿ ಅಥ್ಯವಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಉದ್ಘಾಟನಾ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ ಆಗಿದ್ದಾರೆ ಆರ್ ಅಶ್ವಿನ್. 71 ವಿಕೆಟ್ ಸಂಪಾದಿಸಿದ್ದರು ಆರ್ ಅಶ್ವಿನ್. ಒಟ್ಟಾರೆಯಾಗಿ ಆರ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 413 ವಿಕೆಟ್ ಸಂಪಾದಿಸಿದ್ದಾರೆ. ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ ಅಶ್ವಿನ್.

ಇಷ್ಟಲ್ಲಾ ಅದ್ಭುತ ಪ್ರದರ್ಶನ ನೀಡುತ್ತಿದ್ದರೂ ಇಂಗ್ಲೆಂಡ್ ನೆಲದಲ್ಲಿ ಆಡಿರುವ ಕಳೆದ ನಾಲ್ಕು ಪಂದ್ಯಗಳಲ್ಲಿ ಸ್ಥಾನವನ್ನು ಪಡೆಯುವಲ್ಲಿ ಆರ್ ಅಶ್ವಿನ್ ವಿಫಲವಾಗಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಟೀಮ್ ಇಂಡಿಯಾ ನಾಲ್ವರು ವೇಗಿಗಳು ಹಾಗೂ ಓರ್ವ ಸ್ಪಿನ್ನರ್‌ ಜೊತೆಗೆ ಆಡುತ್ತಿರುವ ಕಾರಣದಿಂದಾಗಿ ಆರ್ ಅಶ್ವಿನ್ ಬದಲಾಗಿ ರವೀಂದ್ರ ಜಡೇಜಾ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹಿಗಾಗಿ ಅನುಭವಿ ಆಟಗಾರನಿಗೆ ನಿರಾಶೆಯಾಗಿದೆ.

ಇಷ್ಟು ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದರು ಕೂಡ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಆರ್ ಅಶ್ವಿನ್ ಅಗ್ರ ಸ್ಥಾನವನ್ನು ಪಡೆದುಕೊಂಡಿರುವುದು ಗಮನಾರ್ಹ. ಈ ವರ್ಷ ಆರ್ ಅಶ್ವಿನ್ ಒಟ್ಟು 6 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. ಇದರಲ್ಲಿ ಒಟ್ಟು 38 ವಿಕೆಟ್‌ಗಳನ್ನು ಸಂಪಾದಿಸುವ ಮೂಲಕ ಅಗ್ರ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ.

Story first published: Monday, September 6, 2021, 10:39 [IST]
Other articles published on Sep 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X