For Quick Alerts
ALLOW NOTIFICATIONS  
For Daily Alerts
 

ಭಾರತ vs ಬಾಂಗ್ಲಾ ಮುಖಾಮುಖಿಯಲ್ಲಿ ಸರ್ವಕಾಲಿಕ ಅಧಿಕ ರನ್ ಸರದಾರರು

Top five all time highest scores in India vs Bangladesh matches

ದುಬೈ, ಸೆಪ್ಟೆಂಬರ್ 28: ದುಬೈಯ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು (ಸೆಪ್ಟೆಂಬರ್ 28) ಏಷ್ಯಾ ಕಪ್ 2018ರ ಪ್ರಶಸ್ತಿ ಸುತ್ತಿನಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಎದುರುಬದುರಾಗಿವೆ. ಏಷ್ಯಾಕಪ್ ಇತಿಹಾಸಲ್ಲಿ ಇತ್ತಂಡಗಳ ಮುಖಾಮುಖಿ ಅನೇಕ ದಾಖಲೆಗೂ ಕಾರಣವಾಗಿವೆ.

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಅಂತಾರಾಷ್ಟ್ರೀಯ ಶತಕದ ಶತಕ ಬಾರಿಸಿದ್ದು ಏಷ್ಯಾ ಕಪ್ ನಲ್ಲೇ. ಅದೂ ಬಾಂಗ್ಲಾದೇಶ ವಿರುದ್ಧವೆ. ಆದರೆ ಬಾಂಗ್ಲಾ ದೇಶ ವಿರುದ್ಧ ಅಧಿಕ ರನ್ ಬಾರಿಸಿದ ಅಗ್ರ ಆರು ಮಂದಿಯ ಪಟ್ಟಿ ತೆಗೆದರೆ ಅದರಲ್ಲಿ ಸಚಿನ್ ಕೆಳ ತುದಿಯಲ್ಲಿ ನಿಲ್ಲುತ್ತಾರೆ.

ಏಷ್ಯಾ ಕಪ್ 2018ರ ಫೈನಲ್ ನಲ್ಲಿನ ಭಾರತ-ಬಾಂಗ್ಲಾದೇಶ ಮುಖಾಮುಖಿಯ ಜೊತೆ ಜೊತೆಯಲ್ಲೇ ಏಷ್ಯಾ ಕಪ್ ಇತಿಹಾಸದಲ್ಲಿ ಇತ್ತಂಡಗಳ ಪಂದ್ಯಗಳಲ್ಲಿನ ಸರ್ವಕಾಲಿಕ ಅಧಿಕ ರನ್ ಸರದಾರರತ್ತ ಒಮ್ಮೆ ಕಣ್ಣಾಯಿಸೋಣ..

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ಕ್ರಿಕೆಟ್ ಜಗತ್ತಿನ ದಾಖಲೆಗಳನ್ನು ಸರಿಗಟ್ಟುತ್ತ ಸಾಗುತ್ತಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಏಷ್ಯಾ ಕಪ್ ನಲ್ಲಿ ಬಾಂಗ್ಲಾ ವಿರುದ್ಧ ಅಧಿಕ ರನ್ ಸರದಾರರಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಕೊಹ್ಲಿ ಅವರು ಬಾಂಗ್ಲಾದ ಫತುಲ್ಲಾದಲ್ಲಿ 2014ರ ಫೆಬ್ರವರಿ 26ರಂದು ನಡೆದಿದ್ದ ಪಂದ್ಯದಲ್ಲಿ 136 ರನ್ ಚಚ್ಚಿದ್ದರು. ಇದರಲ್ಲಿ ಭಾರತ 6 ವಿಕೆಟ್ ಜಯ ಸಾಧಿಸಿತ್ತು.

ಸೌರವ್ ಗಂಗೂಲಿ

ಸೌರವ್ ಗಂಗೂಲಿ

ಬಂಗಾಳ ಹುಲಿ ಖ್ಯಾತಿಯ ಎಡಗೈ ಬ್ಯಾಟ್ಸ್ಮನ್ ಸೌರವ್ ಗಂಗೂಲಿ ಅವರು ಅಧಿಕ ರನ್ ಗಳಿಸಿದವರಲ್ಲಿ ದ್ವಿತೀಯ ಸ್ಥಾನದಲ್ಲಿ ನಿಲ್ಲುತ್ತಾರೆ. ಬಾಂಗ್ಲಾದ ಧಾಕಾದಲ್ಲಿ 2000 ಇಸವಿಯ ಮೇ 30-31ರಲ್ಲಿ ದಾದಾ ಅಜೇಯ 135 ರನ್ ಬಾರಿಸಿದ್ದರು. ಭಾರತ ಇದರಲ್ಲಿ 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿತ್ತು.

ಮುಷ್ಫಿಕರ್ ರಹೀಮ್

ಮುಷ್ಫಿಕರ್ ರಹೀಮ್

ಬಾಂಗ್ಲಾ ವಿರುದ್ಧ ಅಧಿಕ ರನ್ ಬಾರಿಸಿದವರಲ್ಲಿ ಭಾರತದವರೇ ಹೆಚ್ಚಿದ್ದರಾದರೂ ಬಾಂಗ್ಲಾದಿಂದಲೂ ಮುಷ್ಫಿಕರ್ ರಹೀಮ್ ಈ ಸಾಧನೆ ಮೆರೆದಿದ್ದಾರೆ. ಫತುಲ್ಲಾದಲ್ಲಿ 2014ರ ಫೆಬ್ರವರಿ 26ರಂದು ನಡೆದಿದ್ದ ಪಂದ್ಯದಲ್ಲೇ ರಹೀಮ್ 117 ರನ್ ಸಿಡಿಸಿದ್ದರು. ಇದರಲ್ಲಿ ಭಾರತಕ್ಕೆ 6 ವಿಕೆಟ್ ಜಯ ಲಭಿಸಿತ್ತು.

ಸುರೇಶ್ ರೈನಾ

ಸುರೇಶ್ ರೈನಾ

ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಸುರೇಶ್ ರೈನಾ ಶತಕದ ಅಪೂರ್ವ ಸಾಧನೆ ಮೆರೆದಿದ್ದರು. ಈ ಪಂದ್ಯ 2008ರ ಫೆಬ್ರವರಿ 28ರಂದು ನಡೆದಿತ್ತು. ಈ ವೇಳೆ ರೈನಾ ಅಜೇಯ 116 ರನ್ ಬಾರಿಸಿದ್ದರು. ಭಾರತ 7 ವಿಕೆಟ್ ಗೆಲುವು ಸಾಧಿಸಿತ್ತು. (ಚಿತ್ರ ಕೃಪೆ ಬಿಸಿಸಿಐ)

ಅಲೋಕ್ ಕಪಾಲಿ

ಅಲೋಕ್ ಕಪಾಲಿ

ಸುರೇಶ್ ರೈನಾ ಅವರು ಶತಕ ಬಾರಿಸಿ ಮಿಂಚಿದ್ದ ಅದೇ ಪಂದ್ಯದಲ್ಲಿ ಬಾಂಗ್ಲಾ ಆಟಗಾರ ಅಲೋಕ್ ಕಪಾಲಿ ಅವರೂ ಶತಕ ಸಿಡಿಸಿದ್ದರು. 2008ರ ಫೆಬ್ರವರಿ 28ರಂದು ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದ್ದ ಪಂದ್ಯಲ್ಲಿ ಅಲೋಕ್ 115 ರನ್ ಬಾರಿಸಿದ್ದರು.

ಲಿಟನ್ ದಾಸ್

ಲಿಟನ್ ದಾಸ್

ಏಷ್ಯಾ ಕಪ್ 2018ರ ಫೈನಲ್ ನಲ್ಲಿ ಬಾಂಗ್ಲಾ ಆಟಗಾರ ಈ ಅಪೂರ್ವ ಸಾಧನೆ ಮೆರೆದರು. ದುಬೈಯ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ 28 ಸೆಪ್ಟೆಂಬರ್ 2018ರಂದು ನಡೆದಿದ್ದ ಈ ಪಂದ್ಯದಲ್ಲಿ ದಾಸ್ ಆಕರ್ಷಕ 121 ರನ್ ಸಿಡಿಸಿದ್ದರು.

Story first published: Friday, September 28, 2018, 19:52 [IST]
Other articles published on Sep 28, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+