IPL 2025: ಎದುರಾಳಿ ಬ್ಯಾಟರ್ಸ್ ಎದೆಯಲ್ಲಿ ನಡುಕ ಹುಟ್ಟಿಸಬಲ್ಲ ಟಾಪ್-3 ಸ್ಪಿನ್ನರ್ಸ್
ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) 2025ರ ಟೂರ್ನಿ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಐಪಿಎಲ್ 2025 ರ ಉದ್ಘಾಟನಾ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವೆ ನಡೆಯಲಿದೆ. ಐಪಿಎಲ್ 2025ರಲ್ಲಿ ಹಲವು ಆಟಗಾರರ ಪ್ರದರ್ಶನದ ಎಲ್ಲರ ಚಿತ್ತ ನೆಟ್ಟಿದೆ. ಅದ್ಭುತ ಪ್ರದರ್ಶನ ನೀಡಲು ಆಟಗಾರರು ಕೂಡ ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ.
ಐಪಿಎಲ್ 2025 ರಲ್ಲಿ ಎದುರಾಳಿ ತಂಡದ ಬ್ಯಾಟರ್ಸ್ ಎದೆಯಲ್ಲಿ ನಡುಕ ಹುಟ್ಟಿಸಬಲ್ಲ ಮೂವರು ಅಪಾಯಕಾರಿ ಸ್ಪಿನ್ನರ್ಸ್ ಇದ್ದಾರೆ. ಈ ಬಾರಿ ಟಾಪ್- 3 ಸ್ಪಿನ್ನರ್ಸ್ ಅತಿ ಹೆಚ್ಚು ವಿಕೆಟ್ ಪಡೆಯುವ ಅವಕಾಶವನ್ನು ಹೊಂದಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ವರುಣ್ ಚಕ್ರವರ್ತಿ
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಐಪಿಎಲ್ 2025 ರಲ್ಲಿ ಬ್ಯಾಟರ್ಸ್‌ಗೆ ದುಃಸ್ವಪ್ನವಾಗಬಲ್ಲರು. ವರುಣ್ ಚಕ್ರವರ್ತಿ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ವರ್ಷ ಐಪಿಎಲ್ 2024 ರಲ್ಲಿ ವರುಣ್ ಚಕ್ರವರ್ತಿ 21 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು. ವರುಣ್ ಚಕ್ರವರ್ತಿ ಅವರ ಮಾರಕ ಸ್ಪಿನ್ ಬೌಲಿಂಗ್‌ನಲ್ಲಿ ಬ್ಯಾಟರ್ಸ್‌ಗೆ ರನ್ ಗಳಿಸುವುದು ಸುಲಭವಾಗಿಲ್ಲ. ಹೀಗಾಗಿ ವರುಣ್ ಚಕ್ರವರ್ತಿ ಐಪಿಎಲ್‌ನ ಅಪಾಯಕಾರಿ ಸ್ಪಿನ್ ಬೌಲರ್ ಎನಿಸಿಕೊಂಡಿದ್ದಾರೆ. ಅವರು ಆಡಿರುವ 70 ಐಪಿಎಲ್ ಪಂದ್ಯಗಳಲ್ಲಿ 24.12 ಬೌಲಿಂಗ್ ಸರಾಸರಿಯಲ್ಲಿ 83 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವೆಂದರೆ 20 ರನ್‌ಗಳಿಗೆ 5 ವಿಕೆಟ್‌ಗಳು.
ಸುನಿಲ್ ನರೈನ್
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮತ್ತೊಬ್ಬ ಆಫ್ ಸ್ಪಿನ್ನರ್ ಸುನಿಲ್ ನರೈನ್ ಐಪಿಎಲ್ 2025 ರಲ್ಲಿ ಪರ್ಪಲ್ ಕ್ಯಾಪ್ ಗೆಲ್ಲುವ ನಿರೀಕ್ಷೆಯಿದೆ. ಐಪಿಎಲ್ 2025 ರ ಮೆಗಾ ಹರಾಜಿಗೂ ಮುಂಚೆಯೇ ಕೆಕೆಆರ್ ಸುನಿಲ್ ನರೈನ್ ಅವರನ್ನು 12 ಕೋಟಿ ರೂ.ಗೆ ಉಳಿಸಿಕೊಂಡಿತು. ಕಳೆದ ವರ್ಷ ಐಪಿಎಲ್ 2024 ರಲ್ಲಿ, ನರೈನ್ ಕೆಕೆಆರ್ ಪರ 17 ವಿಕೆಟ್ ಕಬಳಿಸಿದ್ದರು. ಐಪಿಎಲ್‌ನಲ್ಲಿ ಸುನಿಲ್ ನರೈನ್ ಅವರ ಇದುವರೆಗಿನ ದಾಖಲೆ ಅತ್ಯುತ್ತಮವಾಗಿದೆ. ಸುನಿಲ್ ನರೈನ್ 176 ಐಪಿಎಲ್ ಪಂದ್ಯಗಳಲ್ಲಿ 25.39 ಸರಾಸರಿಯಲ್ಲಿ 180 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ 19 ರನ್‌ಗಳಿಗೆ 5 ವಿಕೆಟ್‌ಗಳು.
ಸುನಿಲ್ ನರೈನ್ ಐಪಿಎಲ್ 2025 ರಲ್ಲಿ ಬೌಲಿಂಗ್ ಮಾತ್ರವಲ್ಲದೆ, ಬ್ಯಾಟಿಂಗ್‌ನಲ್ಲಿಯೂ ಅಬ್ಬರಿಸಿದ್ದರು. ಕೆಕೆಆರ್ ಪರ ಪರ ಸುನಿಲ್ ನರೈನ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಬಿರುಸಿನ ಬ್ಯಾಟಿಂಗ್ ಮೂಲಕ ಹೆಚ್ಚು ರನ್ ಗಳಿಸಿದ್ದರು.
ಕುಲ್ದೀಪ್ ಯಾದವ್
ಐಪಿಎಲ್‌ನಲ್ಲಿ ಕುಲ್ದೀಪ್ ಯಾದವ್ ಸ್ಥಿರ ಉತ್ತಮ ಪ್ರದರ್ಶನ ನೀಡಿದ್ದಾರೆ. ಕುಲದೀಪ್ ಯಾದವ್ 84 ಐಪಿಎಲ್ ಪಂದ್ಯಗಳಲ್ಲಿ 87 ವಿಕೆಟ್ ಪಡೆದಿದ್ದಾರೆ. ಐಪಿಎಲ್‌ನಲ್ಲಿ ಅವರು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವೆಂದರೆ 14 ರನ್‌ಗಳಿಗೆ 4 ವಿಕೆಟ್‌ಗಳು. ಕುಲದೀಪ್ ಯಾದವ್ ಪವರ್-ಪ್ಲೇ ಮತ್ತು ಮಿಡಲ್ ಓವರ್‌ಗಳಲ್ಲಿ ತುಂಬಾ ಅಪಾಯಕಾರಿ ಸ್ಪಿನ್ನರ್ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಕುಲದೀಪ್ ಯಾದವ್ ಕೂಡ ಐಪಿಎಲ್ 2025 ರಲ್ಲಿ ಪರ್ಪಲ್ ಕ್ಯಾಪ್ ಗೆಲ್ಲುವ ಪಣ ತೊಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications