Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗ್ಲೋಬಲ್‌ ಟಿ20ಯಲ್ಲಿ ಯುವರಾಜ್‌ ಸಿಂಗ್‌ರ ಪಂದ್ಯ ತಡವಾಗಿ ಶುರುವಾಗಿದ್ದೇಕೆ?

Toronto Nationals vs Montreal Tigers 2019

ಟೊರಾಂಟೊ, ಆಗಸ್ಟ್‌ 08: ಗ್ಲೋಬಲ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಯುವರಾಜ್‌ ಸಿಂಗ್‌ ಸಾರಥ್ಯದ ಟೊರಾಂಟೊ ನ್ಯಾಷನಲ್ಸ್‌ ಮತ್ತು ಮಾಂಟ್ರೆಯಲ್‌ ಟೈಗರ್ಸ್‌ ನಡುವೆ ಬುಧವಾರ ನಡೆದ ಪಂದ್ಯ ಆಟಗಾರರ ಪ್ರತಿಭಟನೆ ಕಾರಣ 2 ಗಂಟೆ ತಡವಾಗಿ ಆರಂಭವಾಯಿತು.

ಎರಡೂ ತಂಡಗಳ ಆಟಗಾರರು ಮತ್ತು ಸದಸ್ಯರು, ಸಂಭಾವನೆ ಸರಿಯಾಗಿ ನೀಡದ ಕಾರಣ ಟೂರ್ನಿಯ ಸಂಘಟಕರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಆದರೂ ಟೂರ್ನಿಯ ಪ್ರಾಸರ ಹಕ್ಕು ಪಡೆದಿರುವ ಸಂಸ್ಥೆಯು ಯಾವುದೇ ರೀತಿಯ ಪ್ರತಿಭಟನೆ ನಡೆದಿಲ್ಲ ಎಂದೇ ಹೇಳಿಕೆ ನೀಡಿತ್ತು.

ಯುವರಾಜ್‌ ಸಾರಥ್ಯದ ಟೊರಾಂಟೊ ನ್ಯಾಷನಲ್ಸ್‌ಗೆ ಈ ಪಂದ್ಯದಲ್ಲಿ ಗೆದ್ದರಷ್ಟೇ ಪ್ಲೇ ಆಫ್ಸ್‌ ತಲುಪುವ ಅವಕಾಶವಿತ್ತು. ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದ ನ್ಯಾಷನಲ್ಸ್‌ ತಂಡಕ್ಕೆ ಟೈಗರ್ಸ್‌ ಎದುರು ಗೆಲುವು ಅನಿವಾರ್ಯವಾಗಿತ್ತು. ಒಂದು ವೇಳೆ ಈ ಪಂದ್ಯ ನಡೆಯದೇ ರದ್ದಾಗಿದ್ದರೆ ನ್ಯಾಷನಲ್ಸ್‌ ತಂಡ ತನ್ನ ಅಭಿಯಾನವನ್ನು ಲೀಗ್‌ ಹಂತದಲ್ಲೇ ಕೊನೆಗೊಳಿಸುವಂತಾಗುತ್ತಿತ್ತು.

ನಿಗದಿಯಂತೆ ಭಾರತೀಯ ಕಾಲಮಾನ ರಾತ್ರಿ 10ಕ್ಕೆ ಆರಂಭವಾಗಬೇಕಿದ್ದ ಪಂದ್ಯ ಆಟಗಾರರ ಪ್ರತಿಭಟನೆ ಕಾರಣ ಎರಡು ಗಂಟೆ ತಡವಾಗಿ ಶುರುವಾಯಿತು. ಮಾಧ್ಯಮಗಳ ವರದಿ ಪ್ರಕಾರ ಆಟಗಾರರ ಪ್ರತಿಭಟನೆಯೇ ಪಂದ್ಯ ತಡವಾಗುವುದಕ್ಕೆ ಕಾರಣವಾಗಿದೆ. ಬಳಿಕ ಗ್ಲೋಬಲ್‌ ಟಿ20 ಟೂರ್ನಿಯ ಸಂಘಟಕರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಎಲ್ಲವೂ ಸ್ಪಷ್ಟವಾಯಿತು.

"ಟೊರಾಂಟೊ ನ್ಯಾಷನಲ್ಸ್‌ ಮತ್ತು ಮಾಂಟ್ರೆಯಲ್‌ ಟೈಗರ್ಸ್‌ ನಡುವೆ ಬುಧವಾರ (ಆಗಸ್ಟ್‌ 7) ನಡೆದ ಪಂದ್ಯ ಎರಡು ಗಂಟೆ ತಡವಾಗಿ ಶುರುವಾಯಿತು. ಆಟಗಾರರು ಮತ್ತು ಗ್ಲೋಬಲ್‌ ಟಿ20 ಲೀಗ್‌ನ ಫ್ರಾಂಚೈಸಿ ತಂಡಗಳ ನಡುವಣ ವ್ಯವಹಾರದಲ್ಲಿ ಎದುರಾದ ಗೊಂದಲವೇ ಇದಕ್ಕೆ ಕಾರಣ. ಈ ನಿಟ್ಟಿನಲ್ಲಿ ಎಲ್ಲಾ ಸ್ಟೇಕ್‌ಹೋಲ್ಡರ್ಸ್‌ ನಡುವೆ ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ," ಎಂದು ಜಿಟಿ20 ಸಂಘಟಕರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಡವಾಗಿ ಶುರುವಾದರೂ ಪಂದ್ಯ ಪ್ರೇಕ್ಷಕರಿಗೆ ಭರಪೂರ ಮನರಂಜನೆಯನ್ನೇ ನೀಡಿತು. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಟೊರಾಂಟೊ ನ್ಯಾಷನಲ್ಸ್‌ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 189 ರನ್‌ಗಳ ದೊಡ್ಡ ಮೊತ್ತವನ್ನೇ ದಾಖಲಿಸಿತು. ಹೆನ್ರೆಚ್‌ ಕ್ಲಾಸನ್‌ 34 ಎಸೆತಗಳಲ್ಲಿ 64 ರನ್‌ ಚೆಚ್ಚಿ ಅಬ್ಬರಿಸಿದರು. ಬಳಿಕ ಗುರಿ ಬೆನ್ನತ್ತಿದ ಟೈಗರ್ಸ್‌ ತಂಡ 154 ರನ್‌ಗಳಿಗೆ ಆಲ್‌ಔಟ್‌ ಆಯಿತು. ಟೈಗರ್ಸ್‌ ಪರ ಮ್ಯಾಥ್ಯೂ ಕ್ರಾಸ್ (39) ಮತ್ತು ದಿನೇಶ್‌ ಚಾಂದಿಮಾಲ್‌ (36) ಅಲ್ಪ ಹೋರಾಟ ನಡೆಸಿದರು. ಮಿಚೆಲ್‌ ಮೆಕ್ಲೆನೆಗನ್‌ ಮತ್ತು ಕ್ರಿಸ್‌ ಗ್ರೀನ್‌ ತಲಾ ಮೂರು ವಿಕೆಟ್‌ ಪಡೆದು ಯಶಸ್ವಿ ಬೌಲರ್‌ಗಳೆನಿಸಿದರು.

Story first published: Thursday, August 8, 2019, 18:28 [IST]
Other articles published on Aug 8, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+