Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs BAN ಚಾಂಪಿಯನ್ಸ್‌ ಟ್ರೋಫಿ 2025: ಬಾಂಗ್ಲಾ ಅಭಿಮಾನಿಗಳ "ಹೃದಯ" ಗೆದ್ದ ತೋಹಿದ್

ಚಾಂಪಿಯನ್ಸ್ ಟ್ರೋಫಿ "ಬಿ" ಗುಂಪಿನ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಕಾದಾಟ ನಡೆಸಿದವು. ಈ ವೇಳೆ ಬಾಂಗ್ಲಾ ತಂಡದ ಟಾಪ್‌ ಆರ್ಡರ್‌ ಅನುಭವಿ ಬೌಲರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಆದರೆ ಯುವ ಆಟಗಾರರು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಯನ್ನು ಪೂರಕವಾಗಿ ಬಳಸಿಕೊಂಡು ಬ್ಯಾಟ್‌ ಮಾಡಿ ತಂಡಕ್ಕೆ ಆಧಾರವಾದರು. ಅಲ್ಲದೆ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ಈ ಜೋಡಿ ನೆರವಾಯಿತು.

ಟಾಸ್‌ ಗೆದ್ದು ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡುವ ನಿರ್ಣಯವನ್ನು ಮಾಡಿತು. ಈ ವೇಳೆ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಬ್ಯಾಟರ್‌ಗಳು ವಿಫಲರಾದರು. ಬಾಂಗ್ಲಾದೇಶದ ಭರವಸೆಯ ಬ್ಯಾಟರ್‌ಗಳಾದ ತಂಜೀದ್ ಹಸನ್‌, ಸೌಮ್ಯ ಸರ್ಕಾರ್, ನಜ್ಮುಲ್ ಹುಸೇನ್‌ ಶಾಂಟೋ, ಮೇಹದಿ ಹಸನ್‌ ಮಿರ್ಜಾ, ಮುಷ್ಫೀಕರ್ ರಹೀಮ್‌ ಅವರು ನಿರಾಸೆಯನ್ನು ಅನುಭಿಸಿದರು. ಇವರ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಲಿಲ್ಲ. ಪರಿಣಾಮ ಬಾಂಗ್ಲಾದೇಶ 8.3 ಓವರ್‌ಗಳಲ್ಲಿ 35 ರನ್‌ ಸೇರಿಸಿ ಐದು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು.

Towhid Hridoy Shines as Bangladesh s Lone Warrior in Champions Trophy 2025 Clash Against India

ಆರನೇ ವಿಕೆಟ್‌ಗೆ ಭರ್ಜರಿ ಜೊತೆಯಾಟ

ಬಾಂಗ್ಲಾದೇಶ ತಂಡದ ಪರ ಆರನೇ ವಿಕೆಟ್‌ ಯುವ ಬ್ಯಾಟರ್‌ಗಳಾದ ತೌಹಿದ್ ಹೃದಯ್, ಜೇಕರ್ ಅಲಿ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಮಿಡ್ಲ್‌ ಓವರ್‌ಗಳಲ್ಲಿ ವಿಕೆಟ್ ಬೀಳದಂತೆ ನೋಡಿಕೊಂಡು ತಂಡಕ್ಕೆ ಆಧಾರವಾಯಿತು. ಬಾಂಗ್ಲಾ ಪರ ಮಧ್ಯದ 34 ಓವರ್‌ಗಳಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ ತೌಹಿದ್ ಹೃದಯ್, ಜೇಕರ್ ಅಲಿ ಜೋಡಿ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ನೆರವಾಯಿತು. ಈ ಜೊಡಿ 206 ಎಸೆತಗಳಲ್ಲಿ 154 ರನ್‌ಗಳ ಅಮೋಘ ಕಾಣಿಕೆ ನೀಡಿತು. ಜೇಕರ್ ಅಲಿ 4 ಬೌಂಡರಿ ನೆರವಿನಿಂದ 68 ರನ್‌ ಬಾರಿಸಿ ಔಟ್ ಆದರು.

ಮಧ್ಯಮ ಹಾಗೂ ಕೆಳ ಮಧ್ಯಮ ಕ್ರಮಾಂಕದ ಆಟಗಾರರು ರನ್‌ ಕಲೆ ಹಾಕುವಲ್ಲಿ ವಿಫಲರಾದರು.

Towhid Hridoy Shines as Bangladesh s Lone Warrior in Champions Trophy 2025 Clash Against India


ತೌಹಿದ್ ಹೃದಯ್ ಅಬ್ಬರ

ಬಾಂಗ್ಲಾದೇಶದ 24 ವರ್ಷದ ತೌಹಿದ್ ಹೃದಯ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಮೂಲಕ ತಮ್ಮ ತಂಡಕ್ಕೆ ಆಧಾರವಾದರು. ಇವರು ಭಾರತೀಯ ಬೌಲರ್‌ಗಳನ್ನು ಕಾಡಿ ಬೌಂಡರಿ, ಸಿಕ್ಸರ್‌ಗಳನ್ನು ಬಾರಿಸಿದರು. ಇವರು 118 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 100 ರನ್‌ ಬಾರಿಸಿ ಔಟ್ ಆದರು. ಗಾಯದ ನಡುವೆಯೂ ರನ್‌ ಕದಿಯಲು ಬಾರದಿದ್ದಾಗಲೂ ಕೆಚ್ಚೆದೆಯಿಂದ ಬ್ಯಾಟಿಂಗ್ ಆಡಿದ ತೌಹಿದ್ ಹೃದಯ್ ನಿಜಕ್ಕೂ ನೆರೆದ ಬಾಂಗ್ಲಾ ಅಭಿಮಾನಿಗಳ ಹೃದಯ ಗೆದ್ದರು.

ಬಾಂಗ್ಲಾದೇಶ 49.4 ಓವರ್‌ಗಳಲ್ಲಿ 228 ರನ್‌ಗಳಿಗೆ ಆಲೌಟ್‌ ಆಯಿತು.

ಭಾರತದ ಪರ ಮೊಹಮ್ಮದ್ ಶಮಿ ಅಮೋಘ ಬೌಲಿಂಗ್ ದಾಳಿ ನಡೆಸಿದರು. ಇವರು 53 ರನ್‌ ನೀಡಿ ಐದು ವಿಕೆಟ್‌ ಕಬಳಿಸಿದರು. ವೇಗಿ ಹರ್ಷಿತ್ ರಾಣಾ 3, ಅಕ್ಷರ್‌ ಪಟೇಲ್‌ 2 ವಿಕೆಟ್‌ ಪಡೆದರು.

Story first published: Thursday, February 20, 2025, 18:23 [IST]
Other articles published on Feb 20, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+