ಕಾಲ್ತುಳಿತದ ಬಗ್ಗೆ ವಿರಾಟ್ ಪ್ರತಿಕ್ರಿಯೆ: "ಸಂತೋಷದ ಕ್ಷಣ ದುರಂತವಾಗಿ ಮಾರ್ಪಟ್ಟಿತು"
ಇಂಡೀಯನ್ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ 18ನೇ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡಿತ್ತು. ಈ ವೇಳೆ 17 ವರ್ಷಗಳ ಕಾಲ ಮಾಯಾಜಿಂಕೆಯಂತೆ ಕಾಡಿದ್ದ ಚಾಂಪಿಯನ್ ಪಟ್ಟವನ್ನು ರಜತ್ ಪಾಟಿದಾರ್ ಮುಂದಾಳತ್ವದ ತಂಡ ಅಲಂಕರಿಸಿತ್ತು. ಈ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಜೂನ್ 3 ರಂದು ಅಹಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ರನ್‌ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ, ಪ್ರಶಸ್ತಿಗೆ ಮುತ್ತಿಟ್ಟಿತು. ಅಲ್ಲಿ ಅಹಮದಾಬಾದ್‌ನಲ್ಲಿ ಆರ್‌ಸಿಬಿ ಕಪ್‌ಗೆ ಮುತ್ತಿಡುತ್ತಿದ್ದಂತೆ, ಇತ್ತ ಬೆಂಗಳೂರಿನಲ್ಲೂ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.
ಐಪಿಎಲ್ ಚಾಂಪಿಯನ್‌ರಿಗೆ ತವರು ಚಿನ್ನಸ್ವಾಮಿ ಮೈದಾನದಲ್ಲಿ ಸನ್ಮಾನಿಸಲು ಆರ್‌ಸಿಬಿ ಮ್ಯಾನೇಜ್ಮೆಂಟ್ ಪ್ಲ್ಯಾನ್ ಮಾಡಿಕೊಂಡಿತ್ತು. ಜೂನ್ 4 ರಂದು ಈ ಕಾರ್ಯಕ್ರಮಕ್ಕೆ ಸಿದ್ಧತೆಗಳನ್ನು ಸಹ ಮಾಡಿಕೊಳ್ಳಲಾಗಿತ್ತು. ಇದಕ್ಕಾಗಿ ಆರ್‌ಸಿಬಿ ವಿಜಯೋತ್ಸವ ಮೆರವಣಿಗೆಯನ್ನು ಆಯೋಜಿಸಿತ್ತು. ಆದರೆ ಈ ಒಂದು ನಿರ್ಧಾರ ಆರ್‌ಸಿಬಿ ಮ್ಯಾನೇಜ್ಮೆಂಟ್ ಚಿಂತೆಯನ್ನು ಹೆಚ್ಚಿಸಿತು. ಸಂಭ್ರಮಾಚರಣೆ ಖುಷಿ ಮಾಯವಾಗಿ ಸೂತಕ ಚಿನ್ನಸ್ವಾಮಿ ಮೈದಾನದಲ್ಲಿ ಮನೆ ಮಾಡಿತ್ತು.

ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಚಿನ್ನಸ್ವಾಮಿ ಅಂಗಳದತ್ತ ಮುಖ ಮಾಡಿದ್ರು. ಇದೇ ವೇಳೆ ಕಾಲ್ತುಳಿತ ಸಂಭವಿಸಿದ್ದು, 11 ಜನರ ಪ್ರಾಣ ಹಾರಿಹೋಗಿತ್ತು. ಈ ಬಗ್ಗೆ ಆರ್‌ಸಿಬಿ ಮ್ಯಾನೇಜ್ಮೆಂಟ್ 3 ತಿಂಗಳಿನಿಂದ ಯಾವುದೇ ಪೋಸ್ಟ್ ಸಾಮಾಜಿಕ ತಾಣಗಳಲ್ಲಿ ಮಾಡಿರಲಿಲ್ಲ. ಮೂರು ತಿಂಗಳ ಬಳಿಕ ತಂಡದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದಾರೆ.
ಕೊಹ್ಲಿ ಹೇಳಿದ್ದೇನು
ಆರ್‌ಸಿಬಿ ತಂಡದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ನೀಡಿದ ಹೇಳಿಕೆಯನ್ನು ಮ್ಯಾನೇಜ್ಮೆಂಟ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಸಂತೋಷವಾಗಿ ಕಳೆಯಬೇಕಿದ್ದ ಸಮಯ ದುರಂತದಲ್ಲಿ ಮಾರ್ಪಟ್ಟಿತ್ತು. ಜೂನ್ 4 ರಂದು ನಡೆದ ಹೃದಯ ವಿದ್ರಾವಕ ಘಟನೆಗೆ ಬದುಕು ನಿಜವಾಗಿಯೂ ನಿಮ್ಮನ್ನು ಸಿದ್ಧಪಡಿಸುವುದಿಲ್ಲ. ಯಾವ ಕ್ಷಣ ನಮ್ಮ ಫ್ರಾಂಚೈಸಿ ಇತಿಹಾಸದಲ್ಲಿ ಸಂತೋಷದ ಕ್ಷಣವಾಗಬೇಕಿತ್ತು. ಆ ಕ್ಷಣ ದುರಂತಮಯವಾಗಿ ಪರಿಣಮಿಸಿತು. ಈ ದುರುಂತದಲ್ಲಿ ಮೃತ ಪಟ್ಟ ಹಾಗೂ ಗಾಯಗೊಂಡ ಅಭಿಮಾನಿಗಳ ಬಗ್ಗೆ ಕಾಳಜಿ ಹೊಂದಿದ್ದೇವೆ. ಅವರಿಗಾಗಿ ಪ್ರಾರ್ಥಿಸುವೆ. ಈ ನಷ್ಟ ನಮ್ಮ ಜೀವನದ ಭಾಗವಾಗಿದೆ. ನಾವು ಜವಾಬ್ದಾರಿಯುತದಿಂದ ಮುಂದುರೆಯುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಕಾಲ್ತುಳಿತ ಪ್ರಕರಣದಲ್ಲಿ ಸಾವನ್ನಪ್ಪಿದ ಅಭಿಮಾನಿಗಳಿಗೆ ಈಗಾಗಲೇ ಆರ್‌ಸಿಬಿ 25 ಲಕ್ಷ ರೂ. ನೀಡಿದೆ. ಅಲ್ಲದೆ ಆರ್‌ಸಿಬಿ ಕೇರ್ಸ್ ಎಂಬ ಪೇಜ್ ಸಹ ಓಪನ್ ಮಾಡಿದೆ. ಅಲ್ಲದೆ ಈ ಪ್ರಕರಣದಲ್ಲಿ ಮಿಡಿದವರ ಸ್ಮರಣಾರ್ಥ ಸ್ಮಾರಕ ನಿರ್ಮಿಸಲು ಆರ್‌ಸಿಬಿ ಪ್ಲ್ಯಾನ್ ಮಾಡಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications