For Quick Alerts
ALLOW NOTIFICATIONS  
For Daily Alerts
 

Virat Kohli: 18 ಗಂಟೆಯಲ್ಲಿ ಅಳಿಸಿತು ವಿರಾಟ್‌ ಕೊಹ್ಲಿ ಬಣ್ಣ

ಅಹಮದಾಬಾದ್‌ನಲ್ಲಿ ಮಂಗಳವಾರ ನಡೆದ ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ 6 ರನ್‌ಗಳಿಂದ ಪಂಜಾಬ್‌ ಕಿಂಗ್ಸ್ ತಂಡವನ್ನು ಮಣಿಸಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತು. ಈ ವೇಳೆ ಆರ್‌ಸಿಬಿ ಅಭಿಮಾನಿಗಳನ್ನು ಸಂದರ್ಶನವನ್ನು ಮಾಡಲಾಯಿತು. ಆಗ ಆರ್‌ಸಿಬಿ ತಂಡದ ಸೂಪರ್ ಸ್ಟಾರ್ ಬ್ಯಾಟರ್‌ ವಿರಾಟ್‌ ಕೊಹ್ಲಿ ಅವರನ್ನು ಸಹ ಮಾತನಾಡಿಸಿದ್ರು. ಆಗ ವಿರಾಟ್‌ ಭಾವುಕರಾದರು. 18 ವರ್ಷಗಳಿಂದ ಮಾಡದ ಸಾಧನೆಯನ್ನು ಮಾಡಿದ ಖುಷಿ ಕಣ್ಣಂಚಲ್ಲಿ ಎದ್ದು ಕಾಣುತ್ತಿತ್ತು.

ಸಂದರ್ಶನದಲ್ಲಿ ವಿರಾಟ್‌ ಕೊಹ್ಲಿ ತಮಗು ಹಾಗೂ ಬೆಂಗಳೂರಿಗೆ ಇರುವ ನಂಟನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಈ ವೇಳೆ ವಿರಾಟ್‌ ಬೆಂಗಳೂರಿಗೆ ತಮ್ಮ ಹೃದಯದಲ್ಲಿ ವಿಶೇಷ ಸ್ಥಾನ ಇದೆ ಎಂದು ಬಣ್ಣಿಸಿದ್ದರು. ಅಲ್ಲದೆ ತಮ್ಮ ಪತ್ನಿ ಅನುಷ್ಕಾ ಶರ್ಮಾ ಸಹ ಬೆಂಗಳೂರಿನವಳು ಎಂದು ತಿಳಿಸಿದ್ದರು. ಅಲ್ಲದೆ ಐಪಿಎಲ್‌ನಲ್ಲಿ ಆರ್‌ಸಿಬಿ ಬಿಟ್ಟು ಬೇರೆ ತಂಡಗಳ ಪರ ಆಡುವುದಿಲ್ಲ ಎಂದು ಸಹ ತಿಳಿಸಿದ್ದರು. ಇವರ ಈ ಅಭಿಮಾನವನ್ನು ಕಂಡು ಅಭಿಮಾನಿಗಳ ಕಣ್ಣುಗಳು ತುಂಬಿಕೊಂಡಿದ್ದವು.

Tragedy Strikes RCB Victory Parade Fans Question Virat Kohli s Silence

ಬೆಂಗಳೂರು ಅಂದ್ರೆನೆ ಹಾಗೆ, ಭಾರತದ ಯಾವುದೇ ಮೂಲೆಯಿಂದ ಬಂದ್ರೂ ಸಹ ತಮ್ಮವರಂತೆ ಆತಿಥ್ಯ ನೀಡುತ್ತದೆ. ಇದರ ವಾತಾವರಣಕ್ಕೆ ಬೇರೆ ರಾಜ್ಯದವರು ಮನಸೋತಿದ್ದಾರೆ. ತಮ್ಮ ತಮ್ಮ ಊರು ಬಿಟ್ಟ ಉತ್ತರ ಭಾರತೀಯರು, ಬೆಂಗಳೂರು ಬಿಟ್ಟು ಹೋಗುವ ಮನಸ್ಸು ಮಾಡುವುದೇ ಇಲ್ಲ. ಅಷ್ಟು ಅತ್ಯಾಪ್ತವಾಗುವ ಈ ನಗರ ಟೀಮ್ ಇಂಡಿಯಾದ ಸೂಪರ್‌ ಸ್ಟಾರ್ ಆಟಗಾರನಿಗೂ ಇಷ್ಟ. ವಿರಾಟ್‌ ಕೊಹ್ಲಿ ಅವರ ಬೆಳವಣಿಗೆಗೆ ಈ ಫ್ರಾಂಚೈಸಿ ಬೆನ್ನು ಕೊಟ್ಟಿದೆ. ವಿರಾಟ್‌ ಅವರ ಬೆಂಗಳೂರು ಪ್ರೀತಿ ಕಂಡು ಅಭಿಮಾನಿಗಳು ಇವರನ್ನು ಬೆಂಗಳೂರಿನ ದತ್ತು ಪುತ್ರ ಎಂದೇ ಕರೆದ್ರು. ಆದರೆ ಈ ಎಲ್ಲ ಗೌರವವನ್ನು ಉಳಿಸಿಕೊಳ್ಳುವಲ್ಲಿ ವಿರಾಟ್ ಕೊಹ್ಲಿ ಎಡವಿದ್ರಾ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಹಮದಾಬಾದ್‌ನಿಂದ ಬೆಂಗಳೂರಿಗೆ ಬಂದಳಿದ ಆರ್‌ಸಿಬಿ ತಂಡವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸಿದ್ಧರಾಗಿದ್ದರು. ಇವರ ಜೋಶ್‌ ಹೆಚ್ಚು ಮಾಡಲು ಆ ಒಂದು ಟ್ವೀಟ್‌ ಸಾಕಿತ್ತು. ಬುಧವಾರ ಬೆಂಗಳೂರಿನಲ್ಲಿ ವಿಜೇತ ತಂಡದ ಪೆರೆಡ್‌ ಹಾಗೂ ಸಂಭ್ರಮಾಚರಣೆ ಘೋಷಣೆ ಮಾಡಲಾಯಿತು. 18 ವರ್ಷಗಳಿಂದ ಮಾಡದ ಸಾಧನೆಯನ್ನು ತಮ್ಮ ತಂಡ ಮಾಡಿದನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳ ಜನ ಸಾಗರವೇ ಚಿನ್ನಸ್ವಾಮಿಯತ್ತ ಹರಿದು ಬಂದಿತು. 3 ಲಕ್ಷಕ್ಕೂ ಹೆಚ್ಚು ಜನ ಚಿನ್ನಸ್ವಾಮಿಯಲ್ಲಿ ಜಮಾಯಿಸಿದರು. ಆಗ ನೂಕುನುಗ್ಗಲು ಆಗಿ, 11 ಜನರ ಪ್ರಾಣ ಹಾರಿ ಹೋಗಿದೆ.

Tragedy Strikes RCB Victory Parade Fans Question Virat Kohli s Silence

ಬಣ್ಣ ಹೋದ ಮೇಲೆ

ಹೊರಗಡೆ ಪ್ರಾಣಗಳು ಹೋಗ್ತಾ ಇದ್ದರೂ, ಒಳಗಡೆ ಸಂಭ್ರಮಾಚರಣೆ ನಡೆದಿತ್ತು. ಇದೆಂತಹ ಸಂಭ್ರಮಾಚರಣೆ ಎಂದು ಅಭಿಮಾನಿಗಳು ಪ್ರಶ್ನೆ ಕೇಳಿದ್ದಾರೆ. ಇನ್ನು ಇಷ್ಟೆಲ್ಲಾ ದೊಡ್ಡ ದುರಂತ ನಡೆದರೂ ಸಹ ವಿರಾಟ್‌ ಕೊಹ್ಲಿ ಮೌನಕ್ಕೆ ಶರಣಾಗಿದ್ದು ಅಭಿಮಾನಿಗಳಿಗೆ ಬೇಸರ ಇಮ್ಮಡಿ ಗೊಳಿಸಿದೆ. ಸಾಮಾಜಿಕ ತಾಣದಲ್ಲಿ ವಿರಾಟ್ ಒಂದೇ ವಾಖ್ಯದಲ್ಲಿ ಸಂತಾಪ ಮುಗಿಸಿದ್ರು. ವಿರಾಟ್‌ಗೆ ಈ ಸ್ಟಾರ್‌ ಗಿರಿ ನೀಡುವಲ್ಲಿ ಅವರ ಆಟ ಎಷ್ಟು ಮುಖ್ಯವೋ, ಅಷ್ಟೇ ಅವರ ಫ್ಯಾನ್ಸ್ ಸಹ ಕಾರಣ. ಇವರ ಆಟವನ್ನು ತಲೆಯ ಮೇಲೆ ಇರಿಸಿಕೊಂಡ ಮೆರೆಸಿದ ಅಭಿಮಾನಿಗಳಿಗೆ ವಿರಾಟ್‌ ನೀಡಿದ್ದು ಏನು? ಎಂದು ಅಭಿಮಾನಿಗಳು ಪ್ರಶ್ನೆ ಕೇಳ್ತಾ ಇದ್ದಾರೆ.

ಎಲ್ಲವೂ ತಮ್ಮ ಕಣ್ಣಂಚಲ್ಲೇ ನಡೆದ್ರೂ ವಿರಾಟ್‌ ಈ ಘಟನೆಯ ಬಗ್ಗೆ ತೂರುತ್ತಿರುವ ವರ್ತನೆ ಜನರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಸಂಭ್ರಮಾಚರಣೆ ಮುಗಿದ ಬಳಿಕ ವಿರಾಟ್‌ ಈ ಘಟನೆಯ ಬಗ್ಗೆ ಎರಡು ಮಾತುಗಳನ್ನು ಆಡ ಬೇಕಿತ್ತು ಎಂದು ಅಭಿಮಾನಿಗಳ ನಿರೀಕ್ಷೆಯಾಗಿತ್ತು. ಆದರೆ ವಿರಾಟ್‌ಗೆ ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವಷ್ಟು ಟೈಮ್‌ ಇಲ್ಲ. ಅವರು ಮುಂಬೈ ಫ್ಲೈಟ್ ಏರಿದ್ದಾರೆ.

Story first published: Friday, June 6, 2025, 16:21 [IST]
Other articles published on Jun 6, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+