ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೇನಿಯಲ್-ಶೆಫಾಲಿ ಚತುರ ಆಟ, ವೆಲಾಸಿಟಿಗೆ ತಲೆ ಬಾಗಿದ ಟ್ರಯಲ್ ಬ್ಲೇಸರ್ಸ್

Trailblazers vs Velocity, 2nd Match - Live Cricket Score

ಜೈಪುರ್, ಮೇ 8: ಜೈಪುರ್‌ನ ಸವಾಯ್ ಮಾನ್‌ ಸಿಂಗ್ ಸ್ಟೇಡಿಯಂನಲ್ಲಿ ಬುಧವಾರ (ಮೇ 8) ನಡೆದ ಮಹಿಳಾ ಟಿ20 ಚಾಲೆಂಜ್ ನ ದ್ವಿತೀಯ ಪಂದ್ಯದಲ್ಲಿ ಟ್ರಯಲ್ ಬ್ಲೇಸರ್ಸ್ ವಿರುದ್ಧ ವೆಲಾಸಿಟಿ 3 ವಿಕೆಟ್ ಸುಲಭ ಜಯ ಸಾಧಿಸಿದೆ. ಶೆಫಾಲಿ ವರ್ಮಾ ಮತ್ತು ಡೇನಿಯಲ್ ವ್ಯಾಟ್ ಚತುರ ಆಟ ತಂಡಕ್ಕೆ ಗೆಲುವನ್ನು ತಂದಿತು. ಆದರೆ ಬ್ಲೇಸರ್ಸ್‌ನ ದೀಪ್ತಿ ಶರ್ಮಾ ಹ್ಯಾಟ್ರಿಕ್ ವಿಕೆಟ್ ಸಾಧನೆಯೂ ಎಲ್ಲರ ಚಿತ್ತ ಸೆಳೆಯಿತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸ್ಮೃತಿ ಮಂಧಾನ ನಾಯಕತ್ವದ ಟ್ರಯಲ್ ಬ್ಲೇಸರ್ಸ್‌ಗೆ ಮಂಧಾನ 10, ಸುಝೀ ಬೇಟ್ಸ್ 26, ಸ್ಟಫಾನಿ ಟೇಲರ್ 5, ದೀಪ್ತಿ ಶರ್ಮಾ 16, ದಯಾಲಾನ್ ಹೇಮಲತಾ 1 ರನ್ ಸೇರಿಸಲಷ್ಟೇ ಶಕ್ತರಾದರು.

ಐಪಿಎಲ್: ಎಂಎಸ್ ಧೋನಿಗೊಂದು ವಿಶೇಷ ಸಂದೇಶ ಬರೆದ ಹಾರ್ದಿಕ್ ಪಾಂಡ್ಯಐಪಿಎಲ್: ಎಂಎಸ್ ಧೋನಿಗೊಂದು ವಿಶೇಷ ಸಂದೇಶ ಬರೆದ ಹಾರ್ದಿಕ್ ಪಾಂಡ್ಯ

ತಂಡ 20 ಓವರ್‌ಗೆ 6 ವಿಕೆಟ್ ಕಳೆದು 112 ರನ್ ಬಾರಿಸಿತು. ಟ್ರಯಲ್ ಬ್ಲೇಸರ್ಸ್ ಇನ್ನಿಂಗ್ಸ್‌ ವೇಳೆ ಮಿಥಾಲಿ ರಾಜ್ ನಾಯಕತ್ವದ ವೆಲೋಸಿಟಿಯ ಎಕ್ತಾ ಬಿಷ್ತ್ ಮತ್ತು ಅಮೆಲಿಯಾ ಕೆರ್ ತಲಾ 2, ಶಿಖಾ ಪಾಂಡೆ ಮತ್ತು ಸುಶ್ರೀ ಪ್ರಧಾನ್ ತಲಾ 1 ವಿಕೆಟ್ ಪಡೆದರು.

ಸೌರಾಷ್ಟ್ರ ಸ್ಟಾರ್‌ಗೆ ಟಿ20 ಕ್ರಿಕೆಟ್‌ನಲ್ಲಿ ಭಾರಿ ಡಿಮಾಂಡ್‌!ಸೌರಾಷ್ಟ್ರ ಸ್ಟಾರ್‌ಗೆ ಟಿ20 ಕ್ರಿಕೆಟ್‌ನಲ್ಲಿ ಭಾರಿ ಡಿಮಾಂಡ್‌!

ಟ್ರಯಲ್ ಬ್ಲೇಸರ್ಸ್ ನೀಡಿದ ಸುಲಭ ರನ್ ಗುರಿ ಬೆನ್ನಟ್ಟಿದ ವೆಲಾಸಿಟಿಗೆ ಹೇಯ್ಲೆ ಮ್ಯಾಥ್ಯೂಸ್ 5, ಶೆಫಾಲಿ 34, ವ್ಯಾಟ್ 46, ಮಿಥಾಲಿ ರಾಜ್ 17 ರನ್ ಸೇರಿಸಿದ್ದರಿಂದ ವೆಲಾಸಿಟಿ 18 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 113 ರನ್‌ನೊಂದಿಗೆ ಟೂರ್ನಿಯ ಮೊದಲ ಗೆಲುವು ದಾಖಲಿಸಿತು. ವೆಲಾಸಿಟಿ ಇನ್ನಿಂಗ್ಸ್ ನಲ್ಲಿ ಟ್ರಯಲ್ ಬ್ಲೇಸರ್ಸ್‌ನ ದೀಪ್ತಿ ಶರ್ಮಾ 14 ರನ್‌ಗೆ 4 ವಿಕೆಟ್‌ ಪಡೆದು ಗಮನ ಸೆಳೆದರು.

ನನಗೀಗ 30 ವರ್ಷ ವಯಸ್ಸು ಅಂದುಕೊಳ್ಳೋಕೆ ಕಷ್ಟ ಅನ್ನಿಸ್ತಿದೆ: ರಿಷಬ್ ಪಂತ್ನನಗೀಗ 30 ವರ್ಷ ವಯಸ್ಸು ಅಂದುಕೊಳ್ಳೋಕೆ ಕಷ್ಟ ಅನ್ನಿಸ್ತಿದೆ: ರಿಷಬ್ ಪಂತ್

ಟ್ರಯಲ್ ಬ್ಲೇಸರ್ಸ್ ತಂಡ: ಸುಝೀ ಬೇಟ್ಸ್, ಸ್ಮೃತಿ ಮಂಧಾನ (ಸಿ), ಹರ್ಲೀನ್ ಡಿಯೋಲ್, ಸ್ಟಫಾನಿ ಟೇಲರ್, ದೀಪ್ತಿ ಶರ್ಮಾ, ದಯಾಲಾನ್ ಹೇಮಲತ, ರವಿ ಕಲ್ಪನಾ (W), ಸೋಫಿ ಎಕ್ಲೆಸ್ಟೋನ್, ಶಕೆರಾ ಸೆಲ್ಮನ್, ರಾಜೇಶ್ವರಿ ಗಾಯಕ್ವಾಡ್, ಭಾರತಿ ಫುಲ್ಮಾಲಿ.

ವೆಲೋಸಿಟಿ ತಂಡ: ಡೇನಿಯಲ್ ವ್ಯಾಟ್, ಹೇಯ್ಲಿ ಮ್ಯಾಥ್ಯೂಸ್, ಮಿಥಾಲಿ ರಾಜ್ (ಸಿ), ವೇದಾ ಕೃಷ್ಣಮೂರ್ತಿ, ಅಮೆಲಿಯಾ ಕೆರ್, ಸುಷ್ಮಾ ವರ್ಮಾ (ವಿಕೆ), ಎಕ್ತಾ ಬಿಶ್ತ್, ಕೋಮಲ್ ಜಂಜಾದ್, ಸುಶ್ರೀ ಪ್ರಧಾನ್, ಶೆಫಾಲಿ ವರ್ಮಾ, ಶಿಖಾ ಪಾಂಡೆ.

Story first published: Wednesday, May 8, 2019, 18:47 [IST]
Other articles published on May 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X