Travis Head: ಟ್ರಾವಿಸ್ ಹೆಡ್ ಆಟಕ್ಕೆ ಬ್ರೇಕ್ ಹಾಕುವುದು ಹೇಗೆ? ಮಾಜಿ ಆಟಗಾರರು ಹೇಳಿದ್ದೇನು?
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಸರಣಿ ನಡೆಯುತ್ತಿದೆ. ಈ ಸರಣಿಯ ಎರಡು ಪಂದ್ಯಗಳು ಮುಗಿದಿದ್ದು, ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದು ಬೀಗಿವೆ. ಈ ವೇಳೆ ಟೀಮ್ ಇಂಡಿಯಾ ಆಟಗಾರರ ಟೆನ್ಷನ್ ದುಪ್ಪಟ್ಟು ಮಾಡಿದ ಆಟಗಾರ ಒಬ್ಬನೇ. ಆಸ್ಟ್ರೇಲಿಯಾ ಮಿಡ್ಲ್ ಆರ್ಡರ್ ಬ್ಯಾಟರ್ ಟ್ರಾವಿಸ್ ಹೆಡ್. ಈ ಸ್ಟಾರ್ ಆಟಗಾರ ತಂಡಕ್ಕೆ ಅಗತ್ಯ ಇದ್ದಾಗಲೇಲ್ಲಾ ಬಿಗ್ ಇನಿಂಗ್ಸ್ ಕಟ್ಟಿ ತಂಡವನ್ನು ಅಪಾಯದಿಂದ ಪಾರು ಮಾಡಿದ್ದಾರೆ.
ಭಾರತ ತಂಡಕ್ಕೆ ಟ್ರಾವಿಸ್ ಹೆಡ್ ತಲೆ ನೋವಾಗಿದ್ದು, ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಹಲವು ಮಹತ್ವದ ಪಂದ್ಯಗಳಲ್ಲಿ ಟೀಮ್ ಇಂಡಿಯಾ ತಲೆ ನೋವು ಹೆಚ್ಚಿಸಿದ ಆಟಗಾರ ಟ್ರಾವಿಸ್ ಹೆಡ್. ಇಷ್ಟೇ ಏಕೆ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಬ್ಯಾಟರ್‌ಗಳು ಎರಡನೇ ಇನಿಂಗ್ಸ್‌ನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾದಾಗ, ಏಕಾಂಗಿಯಾಗಿ 89 ರನ್ ಸೇರಿಸಿ ಟೀಮ್ ಇಂಡಿಯಾಕ್ಕೆ ಕಾಟ ನೀಡಿದ್ದರು. ಇನ್ನು ಆಡಿಲೇಡ್‌ನಲ್ಲಂತೂ ಇವರ ಆರ್ಭಟಕ್ಕೆ ಬ್ರೇಕ್ ಹಾಕಲು ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ವಿಫಲಾರದರು. ಮೊದಲ ಇನಿಂಗ್ಸ್‌ನಲ್ಲಿ ಅಮೋಘ ಶತಕ ಬಾರಿಸಿದ ಪರಿಣಾಮವೇ ಆಸೀಸ್ ದೊಡ್ಡ ಮೊತ್ತ ಕಲೆ ಹಾಕಲು ಸಾಧ್ಯವಾಯಿತು.

ಟೀಮ್ ಇಂಡಿಯಾ ಬೌಲರ್‌ಗಳಿಗೆ ತಲೆ ನೋವಾಗಿರುವ ಸ್ಟಾರ್ ಆಟಗಾರರನ್ನು ಕಟ್ಟಿ ಹಾಕುವುದು ಹೇಗೆ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ. ಇದಕ್ಕೆ ಮಾಜಿ ಆಟಗಾರರು ಟೀಮ್ ಇಂಡಿಯಾಕ್ಕೆ ಕೆಲವು ಟಿಪ್ಸ್ ನೀಡಿದ್ದಾರೆ. ಮಾಜಿ ಆಟಗಾರರು ನೀಡಿರುವ ಸಲಹೇ ಏನು?
ಟ್ರಾವಿಸ್ ಹೆಡ್ ಕಟ್ಟಿ ಹಾಕುವುದು ಹೇಗೆ?
ಟ್ರಾವಿಸ್ ಹೆಡ್ ಅವರ ಆಟವನ್ನು ಗಮನಿಸಿದ ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಆಟಗಾರ ಚೇತೇಶ್ವರ್ ಪೂಜಾರ ಸಲಹೆಯನ್ನು ನೀಡಿದ್ದಾರೆ. ಆಸೀಸ್ ಪ್ಲೇಯರ್‌ನ ಆಫ್ ಸೈಡ್ ಸ್ಟ್ರಾಂಗ್ ಇದೆ. ಹೀಗಾಗಿ ಬೌಲರ್‌ಗಳು ಲೆಗ್ ಸ್ಟಂಪ್ ಟಾರ್ಗೆಟ್ ಮಾಡಿ ಬೌಲ್ ಮಾಡಬೇಕು. ಅಲ್ಲದೆ ಶಾರ್ಟ್ ಪಿಚ್ ಎಸೆತಗಳನ್ನು ಮಾಡಬೇಕು. ಆಫ್ ಸ್ಟಂಪ್ ಆಚೆಗೆ ಎಸೆತವನ್ನು ಹಾಕಿದರೆ, ದಂಡಿಸುತ್ತಾರೆ. ಹೀಗಾಗಿ ಬ್ರಿಸ್ಬೇನ್‌ನಲ್ಲಿನ ಬೌನ್ಸ್ ಸಹಾಯ ಪಡೆದು ಲೆಗ್ ಸ್ಟಂಪ್ ಮೇಲೆ ಆಡಿಬೇಕು ಎಂದು ಸಲಹೆ ನೀಡಿದ್ದಾರೆ.
ಆಸ್ಟ್ರೇಲಿಯಾದ ಖ್ಯಾತ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಸಹ ಟ್ರಾವಿಸ್ ಹೆಡ್ ಅವರ ವೀಕ್ನೆಸ್ ತಿಳಿಸಿದ್ದಾರೆ. ಶಾರ್ಟ್ ಪಿಚ್ ಎಸೆತಗಳನ್ನು ಹೆಚ್ಚಾಗಿ ಪ್ರಯೋಗಿಸುವಂತೆ ಪ್ರವಾಸಿ ಬೌಲರ್‌ಗಳಿಗೆ ಸಲಹೆ ನೀಡಿದ್ದಾರೆ.

ಹರ್ಭಜನ್ ನೀಡಿದ ಸಲಹೆ
ಟ್ರಾವಿಸ್ ಹೆಡ್ ಅವರು ಆಫ್ ಸೈಡ್ ಬಲಿಷ್ಠವಾಗಿದೆ. ಹೀಗಾಗಿ ಆಫ್ ಸ್ಟಂಪ್ ಆಚೆ ಎಸೆತಗಳನ್ನು ಮಾಡಲೇ ಬಾರದು. ಶಾರ್ಟ್ ಪಿಚ್ ಎಸೆತಗಳು ಪರಿಣಾಮಕಾರಿ. ಇನ್ನು ಮಿಡ್ಲ್ ಹಾಗೂ ಲೆಗ್ ಸ್ಟಂಪ್ ಪಿಚ್‌ನಲ್ಲಿ ಬೌಲಿಂಗ್ ನಡೆಸಬೇಕು. ಅಲ್ಲದೆ ಪಿಚ್‌ನಲ್ಲಿ ದೊರೆಯುವ ಬೌನ್ಸ್ ಲಾಭ ಪಡೆದು ದಾಳಿ ನಡೆಸಬೇಕು ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications