ಟೀಮ್ ಇಂಡಿಯಾ ಟೆನ್ಷನ್ ಹೆಚ್ಚಿಸಿದ ಆಸೀಸ್ ಸ್ಫೋಟಕ ಬ್ಯಾಟರ್
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಕ್ಷಣಗಣನೆ ಆರಂಭವಾಗಿದೆ. ಈ ಸರಣಿಯಲ್ಲಿ ಅಬ್ಬರದ ಪ್ರದರ್ಶನ ನೀಡಿ ಗೆಲುವು ಸಾಧಿಸುವ ಗುರಿಯನ್ನು ಟೀಮ್ ಇಂಡಿಯಾ ಹಾಕಿಕೊಂಡಿದೆ. ಆದರೆ ಪ್ರವಾಸಿ ತಂಡದ ಮುಂದೆ ಕಠಿಣ ಸವಾಲು ಇರಲಿದೆ. ಈ ವೇಳೆ ಉಭಯ ತಂಡಗಳು ಪಂದ್ಯಕ್ಕೂ ಮುನ್ನ ಭರದ ಸಿದ್ಧತೆ ನಡೆಸಿವೆ. ಟೀಮ್ ಇಂಡಿಯಾದ ಆಟಗಾರರು ಸಹ ಮೈದಾನದಲ್ಲಿ ಭರ್ಜರಿ ಅಭ್ಯಾಸ ಆರಂಭಿಸಿದ್ದಾರೆ. ಆಸ್ಟ್ರೇಲಿಯಾ ಆಟಗಾರರು ಬಿರುಸಿನ ಅಭ್ಯಾಸ ಆರಂಭಿಸಿದ್ದಾರೆ.
ಆಸ್ಟ್ರೇಲಿಯಾ ಕ್ಯಾಂಪ್‌ನಿಂದ ಒಂದು ಸುದ್ದಿ ಬರುತ್ತಿದೆ. ಈ ಸುದ್ದಿ ನಿಜಕ್ಕೂ ಟೀಮ್ ಇಂಡಿಯಾ ಆಟಗಾರರ ಚಿಂತೆಯನ್ನು ಹೆಚ್ಚಿಸಿದೆ. ಅಭ್ಯಾಸದ ವೇಳೆ ಆಸ್ಟ್ರೇಲಿಯಾದ ಅನುಭವಿ ಆಟಗಾರ ಬಿಗ್ ಹಿಟ್ ಬಾರಿಸುವ ಮೂಲಕ ಭಾರತಕ್ಕೆ ಎಚ್ಚರಿಕೆಯ ಗಂಟೆಯನ್ನು ಬಾರಿಸಿದ್ದಾರೆ. ಭಾರತ ವಿರುದ್ಧದ ಟೆಸ್ಟ್ ಸರಣಿಗೆ ತಾವು ಸಿದ್ಧರಿರುವುದಾಗಿ ಸಾರಿ ಹೇಳಿದ್ದಾರೆ.

ಡಬಲ್ ಟೆನ್ಷನ್
ಲಯಕ್ಕೆ ಮರಳಿರುವ ಆಟಗಾರ ಒಬ್ಬ ಬಿಗ್ ಮ್ಯಾಚ್ ಪ್ಲೇಯರ್. ಇವರು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಹಾಗೂ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದ್ದರು. ಈಗ ಬಾರ್ಡರ್ ಗವಾಸ್ಕರ್ ಟ್ರೋಫಿಗೂ ಭರ್ಜರಿ ಅಭ್ಯಾಸ ಆರಂಭಿಸಿದ್ದು, ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಟ್ರಾವಿಸ್ ಹೆಡ್. ಇವರ ಬ್ಯಾಟಿಂಗ್ ಅಭ್ಯಾಸವನ್ನು ನೋಡಿದ ಭಾರತೀಯ ಅಭ್ಯಾಸ ಆರಂಭಿಸಿದ್ದನ್ನು ಕಂಡು ಟೀಮ್ ಇಂಡಿಯಾ ಅಭಿಮಾನಿಗಳ ಟೆನ್ಷನ್ ಹೆಚ್ಚಾಗಿದೆ.
ಅಭ್ಯಾಸದ ಸಮಯದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ಬಿರುಸಿನ ಬ್ಯಾಟಿಂಗ್ ನಡೆಸಿದ್ದು ಕಂಡು ಬಂದಿತು. ಹೆಡ್‌ನ ಆಕ್ರಮಣಕಾರಿ ಆಟ ಕಂಡು ಭಾರತೀಯ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಟಿ20 ಅಲ್ಲ ಟೆಸ್ಟ್ ಆಡಬೇಕು ಎಂದು ಕಮೆಂಟ್ ಮಾಡಿದ್ದಾರೆ.

ಟ್ರಾವಿಸ್ ಹೆಡ್ ತಮ್ಮ ಬಿರುಸಿನ ಬ್ಯಾಟಿಂಗ್‌ಗೆ ಹೆಸರು ವಾಸಿ. ಇವರು ಯಾವುದೇ ಫಾರ್ಮೆಟ್ ಆಡಿದರೂ ಸಹ ಇವರ ಬ್ಯಾಟಿಂಗ್ ಧಾಟಿ ಒಂದೇ ಆಗಿರುತ್ತದೆ. ಭಾರತದ ವಿರುದ್ಧ ಇವರು ಅಮೋಘ ಪ್ರದರ್ಶನ ನೀಡ ಬಲ್ಲ ಪ್ಲೇಯರ್. ಇದಲ್ಲದೇ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಹೆಡ್ ಶತಕ ಸಿಡಿಸಿದ್ದರು.
ಬಾರ್ಡರ್-ಗವಾಸ್ಕರ್ ಟ್ರೋಫಿ ನವೆಂಬರ್ 22 ರಿಂದ ಪ್ರಾರಂಭವಾಗಲಿದೆ. ಸರಣಿಯ ಮೊದಲ ಟೆಸ್ಟ್ ಪಂದ್ಯ ಪರ್ತ್ ನಲ್ಲಿ ನಡೆಯಲಿದೆ. ಈ ಸರಣಿಯಲ್ಲಿ ಗೆಲುವು ಸಾಧಿಸುವ ತಂಡ, ಸುಲಭವಾಗಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪ್ರವೇಶಿಸುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications