For Quick Alerts
ALLOW NOTIFICATIONS  
For Daily Alerts
 

ಸ್ಟೀವನ್‌ ಸ್ಮಿತ್‌ ದಾಖಲೆಯ ಮೇಲೆ ಟ್ರಾವಿಸ್ ಹೆಡ್ ಕಣ್ಣು

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ. ಈ ಸರಣಿಯಲ್ಲಿ ಆಡಿರುವ 2 ಪಂದ್ಯಗಳನ್ನು ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿರುವ ಆಸ್ಟ್ರೇಲಿಯಾ, ಕ್ಲೀನ್‌ ಸ್ವೀಪ್‌ ಕನಸು ಕಾಣುತ್ತಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಕಣಕ್ಕೆ ಇಳಿಯುತ್ತಿದ್ದಂತೆ ಎಲ್ಲರ ಕಣ್ಣುಗಳು ಆಸೀಸ್‌ ಪ್ಲೇಯರ್ ಟ್ರಾವಿಸ್ ಹೆಡ್ ಅವರ ಮೇಲೆ ನೆಟ್ಟಿರಲಿವೆ. ಆಸ್ಟ್ರೇಲಿಯಾದ ಸ್ಟಾರ್ ಸ್ಫೋಟಕ ಬ್ಯಾಟರ್‌ ಟ್ರಾವಿಸ್‌ ಹೆಡ್‌ ಮೂರನೇ ಏಕದಿನ ಪಂದ್ಯದಲ್ಲಿ ದೊಡ್ಡ ದಾಖಲೆಯನ್ನು ಬರೆಯುವ ಕನಸಿನಲ್ಲಿದ್ದಾರೆ. ಈ ಮೂಲಕ ಸೂಪರ್ ಸ್ಟಾರ್ ಆಟಗಾರ ಸ್ಟೀವನ್ ಸ್ಮಿತ್ ದಾಖಲೆಯನ್ನು ಅಳಿಸಿ ಹಾಕುವ ಕನಸಿನಲ್ಲಿದ್ದಾರೆ.

ಪ್ರಸಕ್ತ ಸರಣಿಯಲ್ಲಿ ಟ್ರಾವಿಸ್‌ ಹೆಡ್‌ ಹೇಳಿಕೊಳ್ಳುವ ಪ್ರದರ್ಶನವನ್ನು ಏನು ನೀಡಿಲ್ಲ. ಆದರೂ ಅವರ ಕ್ಷಮತೆಯ ಬಗ್ಗೆ ಯಾರಿಗೂ ಪ್ರಶ್ನೆ ಇಲ್ಲ. ಚಿಕ್ಕ ಚಿಕ್ಕ ಇನಿಂಗ್ಸ್‌ ಕಟ್ಟಿದರೂ ಅವುಗಳನ್ನು ಬಿಗ್‌ ಇನಿಂಗ್ಸ್ ಆಗಿ ಕನ್ವರ್ಟ್‌ ಮಾಡುವಲ್ಲಿ ಹೆಡ್‌ ವಿಫಲರಾಗಿದ್ದಾರೆ. ಮೂರನೇ ಏಕದಿನ ಪಂದ್ಯದಲ್ಲಿ ಟ್ರಾವಿಡ್ ಹೆಡ್‌ 22 ರನ್‌ ಬಾರಿಸುವಲ್ಲಿ ಸಫಲರಾದಂತೆ ದೊಡ್ಡ ದಾಖಲೆಯನ್ನು ಬರೆಯಲಿದ್ದಾರೆ. ಇವರು ಬರೆಯಲಿರುವ ಆ ದಾಖಲೆ ಯಾವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Travis Head Aims to Break Steven Smith s Record in 3rd India vs Australia ODI

2016ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಟ್ರಾವಿಸ್‌ ಹೆಡ್‌ ಒಬ್ಬ ನುರಿತ ಬ್ಯಾಟರ್‌. ಇವರು ಬಿಗ್‌ ಮ್ಯಾಚ್‌ ಪ್ಲೇಯರ್‌ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈಗಾಗಲೇ ಇವರು ಆಸೀಸ್‌ ಪರ 78 ಏಕದಿನ ಪಂದ್ಯಗಳನ್ನು ಆಡಿದ್ದು 43.16ರ ಸರಾಸರಿಯಲ್ಲಿ 2978 ರನ್ ಗಳಿಸಿದ್ದಾರೆ. ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ 22 ರನ್‌ ಬಾರಿಸುವಲ್ಲಿ ಯಶಸ್ವಿಯಾದರೆ, ಏಕದಿನ ಕ್ರಿಕೆಟ್‌ನಲ್ಲಿ 3 ಸಾವಿರ ರನ್ ಪೂರ್ಣಗೊಳಿಸಿದ ದಾಖಲೆಯನ್ನು ಟ್ರಾವಿಸ್ ಹೆಡ್‌ ಬರೆಯಲಿದ್ದಾರೆ.

ಹೆಡ್‌ ನಿರ್ಮಿಸಲಿರುವ ದಾಖಲೆ ಯಾವದು?

ಟ್ರಾವಿಸ್‌ ಹೆಡ್‌ 22 ರನ್‌ ಬಾರಿಸುತ್ತಲೇ ಏಕದಿನ ಕ್ರಿಕೆಟ್‌ನಲ್ಲಿ 3 ಸಾವಿರ ರನ್ ಪೂರ್ಣಗೊಳಿಸಿದ ಹಿರಿಮೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ 25ನೇ ಆಟಗಾರ ಎಂಬ ಹೆಗ್ಗಳಿಕೆ ಟ್ರಾವಿಸ್‌ ಹೆಡ್‌ ಪಾಲಾಗಲಿದೆ. ಅಲ್ಲದೆ ಅತಿ ಕಡಿಮೆ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ ಆಸೀಸ್ ಆಟಗಾರ ಎಂಬ ಹಿರಿಮೆ ಸಹ ಇವರು ತಮ್ಮದಾಗಿಸಿಕೊಳ್ಳಲಿದ್ದಾರೆ. ಈ ಮೂಲಕ ಟ್ರಾವಿಸ್ ಹೆಡ್‌ ಸ್ಟೀವನ್‌ ಸ್ಮಿತ್ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ. ಸ್ಮಿತ್‌ 79 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಇನ್ನು ಆಸೀಸ್‌ ತಂಡದ ಮೈಕೆಲ್ ಬೆವನ್ ಮತ್ತು ಜಾರ್ಜ್ ಬೈಲಿ 80 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.

ಸಿಡ್ನಿಯಲ್ಲಿ ಹೇಗಿದೆ ಹೆಡ್ ಪ್ರದರ್ಶನ?

ಸಿಡ್ನಿ ಮೈದಾನ ಟ್ರಾವಿಸ್ ಹೆಡ್‌ ಅವರಿಗೆ ನೆಚ್ಚಿನ ಅಂಗಳಗಳಲ್ಲಿ ಒಂದು. ಈ ಮೈದಾನದಲ್ಲಿ ಇವರು ಆಡಿರುವ 3 ಪಂದ್ಯಗಳಲ್ಲಿ 40ರ ಸರಾಸರಿಯಲ್ಲಿ 122 ರನ್‌ ಸಿಡಿಸಿದ್ದಾರೆ. ಶನಿವಾರ ನಡೆಯಲಿರುವ ಪಂದ್ಯದಲ್ಲಿ ಹೆಡ್‌ ಬ್ಯಾಟಿಂಗ್ ಪರಾಕ್ರಮ ಹೇಗಿರಲಿದೆ ಎಂಬ ಬಗ್ಗೆ ಅಭಿಮಾನಿಗಳ ಚಿತ್ತ ನೆಟ್ಟಿದೆ.

Story first published: Saturday, October 25, 2025, 7:21 [IST]
Other articles published on Oct 25, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+