Travis Head IPL 2025: ಟ್ರಾವಿಸ್ ಹೆಡ್ ವೇಗದ ಸಾಧನೆ: ಇಲ್ಲಿದೆ ಮಾಹಿತಿ
ಮುಂಬೈನ ವಾಂಖೇಡೆ ಅಂಗಳದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸನ್ ತಂಡ ತಾಳ್ಮೆಯ ಬ್ಯಾಟಿಂಗ್ ನಡೆಸಿತು. ಈ ವೇಳೆ ಆರಂಭಿಕರು ತಮ್ಮ ನೈಜ್ಯ ಆಟದ ವಿರುದ್ಧವಾಗಿ ಬ್ಯಾಟ್ ಮಾಡಿದರು. ಈ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಬಿಗ್ ಇನಿಂಗ್ಸ್ ಕಟ್ಟದೇ ಇದ್ದರೂ ಸಹ ದೊಡ್ಡ ದಾಖಲೆಯನ್ನು ಬರೆದರು. ಹಾಗಿದ್ದರೆ ಅವರು ಬರೆದ ದಾಖಲೆ ಏನು ಎಂಬ ಬಗ್ಗೆ ವರದಿ ಇಲ್ಲಿದೆ.
ಗುರುವಾರ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಸನ್ ತಂಡದ ಆರಂಭಿಕ ಟ್ರಾವಿಸ್ ಹೆಡ್, ತಮ್ಮ ಬ್ಯಾಟಿಂಗ್ ಶೈಲಿಗೆ ಭಿನ್ನವಾಗಿ ಬ್ಯಾಟ್ ಮಾಡಿದರು. ಸಾಮಾನ್ಯವಾಗಿ ಇವರು ಬ್ಯಾಟಿಂಗ್ ಮಾಡಲು ಬಂದ್ರೆ ಬಿಗ್ ಹಿಟ್‌ಗಳು ಸಾಮಾನ್ಯ. ಆದರೆ ಮುಂಬೈ ಇಂಡಿನ್ಸ್ ವಿರುದ್ಧದ ಪಂದ್ಯದಲ್ಲಿ ಟ್ರಾವಿಸ್ ಹೆಡ್ 96ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ನಡೆಸಿದರು. ಈ ವೇಳೆ ಟ್ರಾವಿಸ್ ಹೆಡ್ 29 ಎಸೆತಗಳಲ್ಲಿ 28 ರನ್ ಸಿಡಿಸಿದರು. ಈ ಚಿಕ್ಕ ಇನಿಂಗ್ಸ್ ಮೂಲಕ ಟ್ರಾವಿಸ್ ಹೆಡ್ ದೊಡ್ಡ ಸಾಧನೆ ಮಾಡಿದರು. ಐಪಿಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಇವರದ್ದಾಗಿದೆ.

ಟ್ರಾವಿಸ್ ಹೆಡ್ ಸಾಧನೆ
ಐಪಿಎಲ್‌ನಲ್ಲಿ ಟ್ರಾವಿಸ್ ಹೆಡ್ 1 ಸಾವಿರ ರನ್ ಕಲೆ ಹಾಕಿದ ದಾಖಲೆ ಮಾಡಿದ್ದಾರೆ. ಈ ಲೀಗ್‌ನಲ್ಲಿ ವೇಗವಾಗಿ 1 ಸಾವಿರ ರನ್ ಕಲೆ ಹಾಕಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಇವರು ಅತಿ ಕಡಿಮೆ ಎಸೆತದಲ್ಲಿ ಈ ಸಾಧನೆ ಮಾಡಿದ ಎರಡನೇ ಬ್ಯಾಟರ್ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಐಪಿಎಲ್‌ನ ಇತಿಹಾಸದಲ್ಲಿ ಒಂದು ಸಾವಿರ ರನ್‌ಗಳನ್ನು ವೇಗವಾಗಿ ಬಾರಿಸಿದ ಕೀರ್ತಿ ಆಂಡ್ರೆ ರಸೆಲ್‌ಗೆ ಸಲ್ಲುತ್ತದೆ. ಇವರು 545 ಎಸೆತಗಳಲ್ಲಿ ಈ ಸಾಧನೆ ಮಾಡಿದರೆ, ಟ್ರಾವಿಸ್ ಹೆಡ್ 575 ಎಸೆತಗಳಲ್ಲಿ ಈ ಸಾಧನೆ ಮಾಡಿ ಬೀಗಿದ್ದಾರೆ.
ಈ ಸಾಧನೆಯ ಮೂಲಕ ಟ್ರಾವಿಸ್ ಹೆಡ್ ತಮ್ಮದೇ ತಂಡದ ಅನುಭವಿ ಆಟಗಾರ ಹೆನ್ರಿಕ್ ಕ್ಲಾಸೆನ್ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಕ್ಲಾಸೇನ್ 594 ಎಸೆತಗಳಲ್ಲಿ ಒಂದು ಸಾವಿರ ರನ್ ಸಿಡಿಸಿದ್ದರು. ವೇಗವಾಗಿ ಐಪಿಎಲ್‌ನಲ್ಲಿ ಸಾವಿರ ರನ್ ಸಿಡಿಸಿದ ದಾಖಲೆ ಭಾರತದ ವೀರೇಂದ್ರ ಸೆಹ್ವಾಗ್‌ಗೆ ಸಲ್ಲುತ್ತದೆ. ಇವರು 604 ಎಸೆತಗಳಲ್ಲಿ ಮಾಡಿ ಬೀಗಿದ್ದರು. ಈ ಮೂಲಕ ವೇಗವಾಗಿ ಸಾವಿರ ರನ್ ಸಾಧಿಸಿದ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಐದನೇ ಸ್ಥಾನದಲ್ಲಿರುವ ಗ್ಲೇನ್ ಮ್ಯಾಕ್ಸ್‌ವೆಲ್ 610 ಎಸೆತಗಳಲ್ಲಿ ಈ ದಾಖಲೆ ನಿರ್ಮಿಸಿದ್ದಾರೆ.
ಮುಂಬೈ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 162 ರನ್ ಸಿಡಿಸಿತು. ಸನ್ ಪರ ಅಭಿಷೇಕ್ ಶರ್ಮಾ 40, ಹೆನ್ರಿಕ್ ಕ್ಲಾಸೇನ್ 37 ರನ್ ಸಿಡಿಸಿ ತಂಡಕ್ಕೆ ಆಧಾರವಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications