Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Travis Head: ಬಾಕ್ಸಿಂಗ್‌ ಡೇ ಟೆಸ್ಟ್‌ಗೆ ಟ್ರಾವಿಸ್‌ ಹೆಡ್ ಫಿಟ್: 19 ವರ್ಷದ ಯುವ ಆಟಗಾರ ಪದಾರ್ಪಣೆ

ಗುರುವಾರ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್‌ ಆರಂಭವಾಗಲಿದೆ. ಈ ಟೆಸ್ಟ್‌ ಬಾರ್ಡರ್ ಗವಾಸ್ಕರ್‌ ಸರಣಿಯ ಅಡಿಯಲ್ಲಿ ಆಡಲಾಗುತ್ತಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ಗೆ ಪ್ರವೇಶಿಸಲು ಈ ಸರಣಿ ಮಹತ್ವದ ಪಡೆದಿದೆ. ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯಕ್ಕೆ ಆಸ್ಟ್ರೇಲಿಯಾ ಆಡುವ ತನ್ನ ಹನ್ನೊಂದರ ಬಳಗವನ್ನು ಘೋಷಿಸಿದೆ. ಮೆಲ್ಬೋರ್ನ್‌ನಲ್ಲಿ ನಡೆಯಲಿರವ ಐತಿಹಾಸಿಕ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಸಹ ಸಿದ್ಧರಾಗಿದ್ದಾರೆ.

ಬಾಕ್ಸಿಂಗ್‌ ಡೇ ಟೆಸ್ಟ್ ಪಂದ್ಯಕ್ಕೆ ಇನ್ನೂ ಒಂದು ದಿನ ಬಾಕಿ ಇರುವಂತೆ, ಆಸ್ಟ್ರೇಲಿಯಾ ನಾಯಕ ಪತ್ರಿಕಾಗೋಷ್ಠಿಯಲ್ಲಿ ಆಡುವ ಬಳಗವನ್ನು ಘೋಷಿಸಿದೆ. ಇನ್ನು ಬಹು ಚರ್ಚೆಗೆ ಗ್ರಾಸ್‌ ವಾಗಿದ್ದ ಟ್ರಾವಿಸ್‌ ಹೆಡ್‌ ಫಿಟ್ನೆಸ್‌ ಬಗ್ಗೆಯೂ ಪ್ಯಾಟ್‌ ಕಮಿನ್ಸ್‌ ಇದೇ ವೇಳೆ ಸ್ಪಷ್ಟನೇ ನೀಡಿದ್ದಾರೆ. ಘೋಷಿತ ತಡದಲ್ಲಿ ಟ್ರಾವಿಸ್‌ ಹೆಡ್‌ ಅವರಿಗೂ ಸ್ಥಾನ ಲಭಿಸಿದೆ. ಇವರು ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿ ಟೀಮ್ ಇಂಡಿಯಾದ ಬೌಲರ್‌ಗಳನ್ನು ಬೆಂಡೆತ್ತಿದ್ದಾರೆ.

Travis Head Fit for Boxing Day Test Teenager Sam Konstas to Debut

ಟ್ರಾವಿಸ್ ಹೆಡ್‌ ಫಾರ್ಮ್‌

ಟ್ರಾವಿಸ್‌ ಹೆಡ್‌ ಯಾವುದೇ ಫಾರ್ಮೆಟ್‌ನಲ್ಲಿ ಟೀಮ್ ಇಂಡಿಯಾವನ್ನು ಕಾಡಬಲ್ಲ ಪ್ಲೇಯರ್. ಇವರು ಸರಣಿಯಲ್ಲಿ ಅಮೋಘ ಫಾರ್ಮ್‌ನಲ್ಲಿದ್ದಾರೆ. ಇವರು ಪರ್ತ್‌ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಶತಕ ಬಾರಿಸುವಲ್ಲಿ ವಿಫಲರಾದರು. ಆದರೆ ಆಡಿಲೇಡ್ ಹಾಗೂ ಬ್ರಿಸ್ಬೇನ್‌ನಲ್ಲಿ ಮೂರಂಕಿ ಮುಟ್ಟಿ ಸಂಭ್ರಮಿಸಿದ್ದಾರೆ. ಈ ಮೂಲಕ ಸರಣಿಯಲ್ಲಿ ಗರಿಷ್ಠ ರನ್ ಬಾರಿಸಿದ ಹಿರಿಮೆ ಇವರದ್ದಾಗಿದೆ. ಟ್ರಾವಿಸ್ ಹೆಡ್ 5 ಇನ್ನಿಂಗ್ಸ್‌ಗಳಲ್ಲಿ 81.80 ಸರಾಸರಿಯಲ್ಲಿ 409 ರನ್ ಗಳಿಸಿದ್ದಾರೆ.

ಮೂರನೇ ಟೆಸ್ಟ್‌ ಬಳಿಕ ಟ್ರಾವಿಸ್ ಹೆಡ್‌ ಫಿಟ್ನೆಸ್‌ ಬಗ್ಗೆ ಹಲವು ಪ್ರಶ್ನೆಗಳು ಇದ್ದವು. ಆದರೆ ಮೆಲ್ಬೋರ್ನ್‌ ಟೆಸ್ಟ್‌ಗೂ ಮುನ್ನ ತಮ್ಮನ್ನು ತಾವು ಟ್ರಾವಿಸ್ ಹೆಡ್‌ ಫಿಟ್ ಎಂದು ಸಾಬೀತು ಪಡಿಸಿದ್ದು, ಆತಿಥೇಯ ತಂಡಕ್ಕೆ ಬೂಸ್ಟ್ ನೀಡಿದ್ದಾರೆ.

ಕಾನ್ಸ್ಟಾಸ್ ಪದಾರ್ಪಣೆ

ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಸ್ಯಾಮ್ ಕಾನ್ಸ್ಟಾನ್ಸ್ ಆಸೀಸ್‌ ಪರ ಪದಾರ್ಪಣೆ ಮಾಡಲಿದ್ದಾರೆ. ಇವರನ್ನು ಆಡುವ ಹನ್ನೊಂದರ ಬಳಗದಲ್ಲಿ ಸೇರಿಸಿಕೊಳ್ಳಲಾಗಿದೆ. ಆಸ್ಟ್ರೇಲಿಯಾ ಆಡುವ ಪ್ಲೇಯಿಂಗ್ ಇಲೆವೆನ್‌ನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಮೊದಲ ಮೂರು ಟೆಸ್ಟ್‌ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ನಾಥನ್ ಮೆಕ್‌ಸ್ವೀನಿ ಬದಲಿಗೆ 19 ವರ್ಷದ ಆಟಗಾರ ಸ್ಯಾಮ್ ಕಾನ್‌ಸ್ಟಾಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ.

ಇನ್ನು ಮೂರನೇ ಟೆಸ್ಟ್ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದ ಸ್ಟಾರ್ ವೇಗದ ಬೌಲರ್‌ ಜೋಶ್ ಹ್ಯಾಜಲ್‌ವುಡ್‌ ಬದಲಿಗೆ ಸ್ಕಾಟ್ ಬೋಲ್ಯಾಂಡ್ ತಂಡಕ್ಕೆ ಮರಳಿದ್ದಾರೆ.

ನಾಲ್ಕನೇ ಟೆಸ್ಟ್‌ಗೆ ಆಸ್ಟ್ರೇಲಿಯಾ ತಂಡ: ಉಸ್ಮಾನ್ ಖವಾಜಾ, ಸ್ಯಾಮ್ ಕಾನ್ಸ್ಟಾನ್ಸ್, ಮಾರ್ನಸ್ ಲಂಬುಶೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್‌ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.

Story first published: Wednesday, December 25, 2024, 9:36 [IST]
Other articles published on Dec 25, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+