Travis Head: ಬುಮ್ರಾ ಬಗ್ಗೆ ನನ್ನ ಮೊಮ್ಮಕ್ಕಳಿಗೆ ಹೆಮ್ಮೆಯಿಂದ ಹೇಳುವೆ; ಟ್ರಾವಿಸ್ ಹೆಡ್ ಗುಣಗಾನ
ಕಳೆದ ವರ್ಷ ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟರ್ ಟ್ರಾವಿಸ್ ಹೆಡ್ ಭಾರತದಿಂದ ಏಕದಿನ ವಿಶ್ವಕಪ್ ಟ್ರೋಫಿಯನ್ನು ಕಸಿದುಕೊಂಡು ಕೋಟ್ಯಾಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದರು. ಇದೀಗ ಟ್ರಾವಿಸ್ ಹೆಡ್ ಭಾರತೀಯರಿಗೆ ಹತ್ತಿರವಾಗಲು ಮುಂದಾಗಿದ್ದಾರೆ. ಟೀಮ್ ಇಂಡಿಯಾ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಟ್ರಾವಿಸ್ ಹೆಡ್ ಹೊಗಳಿದ್ದಾರೆ. ಜಸ್ಪ್ರೀತ್ ಬುಮ್ರಾ ಬೌಲಿಂಗ್ ಎದುರಿಸಿರುವ ಬಗ್ಗೆ ತಮ್ಮ ಮೊಮ್ಮಕ್ಕಳಿಗೆ ಹೆಮ್ಮೆಯಿಂದ ಹೇಳುವುದಾಗಿ ಟ್ರಾವಿಸ್ ಹೆಡ್ ತಿಳಿಸಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಟ್ರಾವಿಸ್ ಹೆಡ್ ಮುಖಿಮುಖಾಯಾಗಿದ್ದಾರೆ. ಆದರೆ, ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮುಂದೆ ಟ್ರಾವಿಸ್ ಹೆಡ್ ಆಟ ನಡೆದಿಲ್ಲ. ಪರ್ತ್ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅದ್ಭುತ ಪ್ರದರ್ಶನ ನೀಡಿದರು. ಪರಿಣಾಮ ಭಾರತ 295 ರನ್‌ಗಳಿಂದ ಗೆಲುವು ಸಾಧಿಸಿದೆ. ಇದೀಗ ಅಡಿಲೇಡ್‌ನಲ್ಲಿ ನಡೆಯಲಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೂ ಮುನ್ನ ಟ್ರಾವಿಸ್ ಹೆಡ್ ಅವರು ಜಸ್ಪ್ರೀತ್ ಬುಮ್ರಾ ಬಗ್ಗೆ ಗುಣಗಾನ ಮಾಡಿದ್ದಾರೆ.

ಟ್ರಾವಿಸ್ ಹೆಡ್ ಹೇಳಿದ್ದೇನು?
'ಜಸ್ಪ್ರೀತ್ ಬುಮ್ರಾ ದಿಗ್ಗಜ ವೇಗದ ಬೌಲರ್‌ಗಳಲ್ಲಿ ಒಬ್ಬರು. ಅವರ ಬೌಲಿಂಗ್‌ನಲ್ಲಿ ಚೆಂಡನ್ನು ಎದುರಿಸುವುದು ಸವಾಲಾಗಿದೆ. ಅವರ ವಿರುದ್ಧ ಆಡುವುದು ರೋಮಾಂಚನಕಾರಿಯಾಗಿದೆ. ಭವಿಷ್ಯದಲ್ಲಿ ವೃತ್ತಿಜೀವನವನ್ನು ಹಿಂತಿರುಗಿ ನೋಡಿದಾಗ, ಜಸ್ಪ್ರೀತ್ ಬುಮ್ರಾ ಬೌಲಿಂಗ್ ಅನ್ನು ಎದುರಿಸಿದ ಬಗ್ಗೆ ನನ್ನ ಮೊಮ್ಮಕ್ಕಳಿಗೆ ಹೆಮ್ಮೆಯಿಂದ ಹೇಳುತ್ತೇನೆ. ಭವಿಷ್ಯದಲ್ಲಿ ಅವರ ವಿರುದ್ಧವೂ ಆಡುವ ಅವಕಾಶ ನನಗೆ ಸಿಗಲಿದೆ ಅಂದುಕೊಂಡಿದ್ದೇನೆ' ಎಂದು ಟ್ರಾವಿಸ್ ಹೆಡ್ ಹೇಳಿದ್ದಾರೆ.
ಆಸ್ಟ್ರೇಲಿಯಾ ತಂಡದಲ್ಲಿ ಭಿನ್ನಾಭಿಪ್ರಾಯ?
ಇದೇ ವೇಳೆ ಪರ್ತ್ ಟೆಸ್ಟ್ ಪಂದ್ಯದ ಸೋಲಿನ ಬಗ್ಗೆ ಮಾತನಾಡಿರುವ ಟ್ರಾವಿಸ್ ಹೆಡ್, 'ಆ ಪಂದ್ಯವು ಬೇಗನೆ ಮುಗಿದಿದೆ ಎಂದು ನೆನಪಿದೆ. ಆ ಪಂದ್ಯವನ್ನು ನಾವು ತುಂಬಾ ಆನಂದಿಸಿದ್ದೇವೆ. ಆದರೆ, ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಲಿದೆ. ಆಸ್ಟ್ರೇಲಿಯಾದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೆಡ್ ಸಷ್ಟಪಡಿಸಿದ್ದಾರೆ.
ಗೆಲುವು ಖಂಡಿತ
ನಮ್ಮ ತಂಡವು ಪ್ರತಿ ಸಂದರ್ಭಗಳನ್ನು ಉತ್ತಮವಾಗಿ ನಿಭಾಯಿಸಿದೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ನಾವು ಎಲ್ಲ ಸವಾಲುಗಳನ್ನು ಉತ್ತಮವಾಗಿ ಎದುರಿಸಿದ್ದೇವೆ. ಕಳೆದ ಕೆಲವು ವರ್ಷಗಳಲ್ಲಿ, ಮೊದಲ ಟೆಸ್ಟ್ ಪಂದ್ಯವನ್ನು ಸೋತ ನಂತರ ಅನೇಕ ತಂಡಗಳು ಉತ್ತಮ ಪುನರಾಗಮನವನ್ನು ಮಾಡುವ ಮೂಲಕ ಉತ್ತಮ ಪ್ರದರ್ಶನ ನೀಡಿವೆ ಎಂದು ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲ್ಲಲಿದೆ ಎಂದು ಟ್ರಾವಿಸ್ ಹೆಡ್ ಭವಿಷ್ಯ ನುಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications