For Quick Alerts
ALLOW NOTIFICATIONS  
For Daily Alerts
 

Ashes Test: ಟ್ರಾವಿಸ್‌ ಹೆಡ್‌ ಶತಕ: ಆಸೀಸ್‌ಗೆ 356 ರನ್ ಮುನ್ನಡೆ

ಆಡಿಲೇಡ್‌: ಭರವಸೆಯ ಬ್ಯಾಟರ್‌ ಟ್ರಾವಿಸ್ ಹೆಡ್‌ ಬಾರಿಸಿದ ಶತಕದ ನೆರವಿನಿಂದ ಆಸ್ಟ್ರೇಲಿಯಾ ಆಶಸ್‌ ಟೆಸ್ಟ್‌ ಸರಣಿಯ ಮೂರನೇ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ 356 ರನ್‌ಗಳ ಮುನ್ನಡೆ ಸಾಧಿಸಿದೆ.

ಮೂರನೇ ದಿನದಾಟವನ್ನು ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್‌ಗೆ 213 ರನ್‌ಗಳಿಂದ ಮುಂದುವರೆಸಿತು. ಈ ವೇಳೆ ಇಂಗ್ಲೆಂಡ್ ತಂಡದ ನಾಯಕ ಬೆನ್‌ ಸ್ಟೋಕ್ಸ್ ಹಾಗೂ ವೇಗಿ ಜೋಫ್ರಾ ಆರ್ಚರ್ ಅವರು ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಪರಿಣಾಮ ಇಂಗ್ಲೆಂಡ್‌ ಇನಿಂಗ್ಸ್‌ ಹಿನ್ನಡೆಯನ್ನು ತಗ್ಗಿಸಲು ಸಹಾಯವಾಯಿತು. ಈ ಜೋಡಿ 9ನೇ ವಿಕೆಟ್‌ಗೆ 181 ಎಸೆತಗಳಲ್ಲಿ 106 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ 198 ಎಸೆತಗಳಲ್ಲಿ 8 ಬೌಂಡರಿ ನೆರವಿನಿಂದ 83 ರನ್‌ ಬಾರಿಸಿದ್ದ ಬೆನ್‌ ಸ್ಟೋಕ್ಸ್‌ ಔಟ್ ಆದರು.

Travis Head s Unbeaten 142 Puts Australia in Command with 356-Run Lead Against England

30 ವರ್ಷದ ಜೋಫ್ರಾ ಆರ್ಚರ್ ತಮ್ಮ 17 ಟೆಸ್ಟ್‌ ಪಂದ್ಯಗಳಲ್ಲಿ ಮಾಡದ ಸಾಧನೆಯನ್ನು ಈ ಪಂದ್ಯದಲ್ಲಿ ಮಾಡಿದರು. ಇವರು 105 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ 51 ರನ್ ಬಾರಿಸಿ ಔಟ್ ಆದರು. ಅಂತಿಮವಾಗಿ ಇಂಗ್ಲೆಂಡ್‌ 286 ರನ್‌ಗಳಿಗೆ ಆಲೌಟ್ ಆಯಿತು. ಆಸೀಸ್‌ ಪರ ನಾಯಕ ಪ್ಯಾಟ್ ಕಮಿನ್ಸ್‌ ಹಾಗೂ ಸ್ಕಾಟ್ ಬೋಲಂಡ್‌ ತಲಾ ಮೂರು ವಿಕೆಟ್‌ ಕಬಳಿಸಿದರು.

ಹೆಡ್‌ ಶತಕ

ಎರಡನೇ ಇನಿಂಗ್ಸ್‌ 85 ರನ್‌ಗಳ ಮುನ್ನಡೆಯೊಂದಿಗೆ ಆರಂಭಿಸಿದ ಆಸ್ಟ್ರೇಲಿಯಾ ತಂಡದ ಆರಂಭ ಕಳಪೆಯಾಗಿತ್ತು. ಜಾಕ್‌ ವೆದರ್‌ಫೋಲ್ಡ್‌ (1) ರನ್ ಕಲೆ ಹಾಕುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಮರ್ನಾಸ್‌ ಲಂಬುಶೇನ್‌ (13) ಸಹ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. 3ನೇ ವಿಕೆಟ್‌ಗೆ ಆರಂಭಿಕ ಟ್ರಾವಿಸ್‌ ಹೆಡ್ ಅವರನ್ನು ಸೇರಿಕೊಂಡ ಉಸ್ಮಾನ್ ಖವಾಜ್ (40 ರನ್) ತಂಡಕ್ಕೆ 113 ಎಸೆತಗಳಲ್ಲಿ 86 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು.

ಆಲ್‌ರೌಂಡರ್ ಕ್ಯಾಮರೂನ್‌ ಗ್ರೀನ್‌ 7 ರನ್‌ಗೆ ಆಟ ಮುಗಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಅಲೆಕ್ಸ್‌ ಕ್ಯಾರಿ (ಅಜೇಯ 52) ಹಾಗೂ ಭರ್ಜರಿ ಬ್ಯಾಟಿಂಗ್‌ ನಡೆಸುತ್ತಿದ್ದ ಟ್ರಾವಿಸ್‌ ಹೆಡ್‌ 5ನೇ ವಿಕೆಟ್‌ಗೆ ಉತ್ತಮ ಜೊತೆಯಾಟದ ಕಾಣಿಕೆ ನಿಡುತ್ತಿದ್ದಾರೆ. ಈ ಜೋಡಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದು ಅಜೇಯ 122 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದೆ. ಆರಂಭಿಕ ಟ್ರಾವಿಸ್‌ ಹೆಡ್‌ 196 ಎಸೆತಗಳಲ್ಲಿ 13 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 142 ರನ್‌ ಬಾರಿಸಿದ್ದಾರೆ.

Story first published: Friday, December 19, 2025, 13:11 [IST]
Other articles published on Dec 19, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+