For Quick Alerts
ALLOW NOTIFICATIONS  
For Daily Alerts
 

Travis Head: ಗಬ್ಬಾದಲ್ಲಿ ಘರ್ಜಿಸಿದ ಟ್ರಾವಿಸ್‌ ಹೆಡ್‌

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್‌ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯುತ್ತಿದೆ. ಈ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಲಿಗೆ ಆಸ್ಟ್ರೇಲಿಯಾದ, ಟ್ರಾವಿಸ್‌ ಹೆಡ್‌ ಬಿಡಿಸಲಾಗದ ಕಗ್ಗಂಟಾಗಿದ್ದಾರೆ. ಇವರು ತಮ್ಮ ಭರ್ಜರಿ ಫಾರ್ಮ್‌ನ್ನು ಗಬ್ಬಾದಲ್ಲೂ ಮುಂದುವರೆಸಿದ್ದಾರೆ. ಹೆಡ್‌ ತಮ್ಮ ಮನಮೋಹಕ ಬ್ಯಾಟಿಂಗ್‌ನಿಂದ ಆಸೀಸ್‌ ತಂಡಕ್ಕೆ ಆಧಾರವಾದರು. ಇವರು ತಮ್ಮ ಕ್ಲಾಸಿಕ್ ಆಟದ ಫಲವಾಗಿ, ಆತಿಥೇಯ ತಂಡ ಬೃಹತ್ ಮೊತ್ತದತ್ತ ದಾಪುಗಾಲು ಇಟ್ಟಿದೆ. ಗಬ್ಬಾದಲ್ಲಿ ಟ್ರಾವಿಸ್‌ ಹೆಡ್‌ ಘರ್ಜಿಸಿದ್ದಾರೆ.

ಬ್ರಿಸ್ಬೇನ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ ಪಂದ್ಯದ ಮೊದಲ ದಿನ ಕೇವಲ 13 ದಿನಗಳ ಆಟ ನಡೆಯಿತು. ಈ ವೇಳೆ ಮಳೆ ಬಂದು ಆಟಕ್ಕೆ ಅಡ್ಡಿ ಪಡಿಸಿತು. ಆದರೆ ಎರಡನೇ ದಿನದಾಟದಲ್ಲಿ ಆಸೀಸ್‌ ಮನಮೋಹಕ ಆಟವನ್ನು ಮುಂದುವರಿಸಿತು. ಆದರೆ ಮೊದಲಾವಧಿಯ ಆಟವನ್ನು ಭಾರತ ತನ್ನ ಹೆಸರಿಗೆ ಮಾಡಿಕೊಂಡಿತು. ಈ ವೇಳೆ ಟೀಮ್ ಇಂಡಿಯಾ ಬೌಲರ್ಸ್‌ ಮೂರು ವಿಕೆಟ್‌ ಪಡೆದು ತಂಡಕ್ಕೆ ಆಸೀಸ್‌ ಪಡೆಗೆ ಪೆಟ್ಟು ನೀಡಿದರು. ಆದರೆ ಆಸೀಸ್‌ ತಂಡದ ಬ್ಯಾಟಿಂಗ್ ವಿಭಾಗವನ್ನು ಸಂಕಷ್ಟದಿಂದ ಪಾರು ಮಾಡಲು ಮತ್ತೆ ಟ್ರಾವಿಸ್‌ ಹೆಡ್‌ ಬಂದು ನೆಲಕಚ್ಚಿ ಬ್ಯಾಟಿಂಗ್ ನಡೆಸಿದರು.

Travis Head Shines at Gabba Keeps Australia Ahead in Rain-Affected Brisbane Test

ಹೆಡ್‌ ಅಬ್ಬರ

ಆಡಿಲೇಡ್‌ನಲ್ಲಿ ನಡೆದಿದ್ದ ಡೇ ಆಂಡ್‌ ನೈಟ್‌ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕ್ಲಾಸಿಕ್ ಆಟವನ್ನು ಆಡಿದ್ದ ಟ್ರಾವಿಸ್ ಹೆಡ್‌ ಅದೇ ಫಾರ್ಮ್‌ನ್ನು ಮುಂದುವರೆಸಿದ್ದಾರೆ. ಬ್ರಿಸ್ಬೇನ್‌ ಅಂಗಳದಲ್ಲಿ ಅಭಿಮಾನಿಗಳಿಗೆ ತಮ್ಮ ಬ್ಯಾಟಿಂಗ್ ಕಲೆಯನ್ನು ಅನಾವರಣಗೊಳಿಸಿದ ಹೆಡ್‌ ತಂಡಕ್ಕೆ ಆಧಾರವಾದರು. ಟೀಮ್ ಇಂಡಿಯಾ ಬೌಲರ್‌ಗಳಿಗೆ ಕಾಟ ನೀಡಿದ ಹೆಡ್‌ ಮನಮೋಹಕ ಬ್ಯಾಟಿಂಗ್ ನಡೆಸಿದರು. ಇದೇ ವೇಳೆ ಭಾರತದ ಬೌಲರ್‌ಗಳು ಯೋಜನಾ ಬದ್ಧ ಆಟವನ್ನು ಆಡುವಲ್ಲಿ ಎಡವಿದರು.

Travis Head Shines at Gabba Keeps Australia Ahead in Rain-Affected Brisbane Test

ಟ್ರಾವಿಸ್‌ ಹೆಡ್ ತಮ್ಮ ವೃತ್ತಿಜೀವನದ 9ನೇ ಶತಕ ಬಾರಿಸಿದರೆ, ಭಾರತದ ವಿರುದ್ಧ ಮೂರನೇ ಶತಕ ಬಾರಿಸಿದರು. ಈ ಮೂಲಕ ಹೆಡ್‌ ಭಾರತೀಯ ಬೌಲರ್‌ಗಳಿಗೆ ಬಿಡಿಸಲಾಗದ ಪ್ರಶ್ನೆ ಆಗಿಯೇ ಉಳಿದರು. ಪತ್ನ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಶತಕದತ್ತ ಸಾಗುತ್ತಿದ್ದಾಗ ಔಟ್ ಆಗಿದ್ದ, ಹೆಡ್‌ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಸ್ಫೊಟಕ ಬ್ಯಾಟಿಂಗ್ ನಡೆಸಿದರು. ಇವರು ಮೂರನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 115 ಎಸೆತಗಳಲ್ಲಿ 13 ಬೌಂಡರಿ ನೆರವಿನಿಂದ ಶತಕ ಬಾರಿಸಿ ಮಿಂಚಿದರು.

ಸ್ಮಿತ್ ಶತಕ

ಇಷ್ಟು ದಿನ ರನ್‌ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದ ಸ್ಟೀವನ್ ಸ್ಮಿತ್ ಅಬ್ಬರಿಸಿದರು. ಇವರು ಭಾರತದ ವಿರುದ್ಧವೇ 10ನೇ ಶತಕ ಬಾರಿಸಿದರು. ಇವರು 185 ಎಸೆತಗಳಲ್ಲಿ 12 ಬೌಂಡರಿ ನೆರವಿನಿಂದ ಶತಕ ಬಾರಿಸಿ ಅಬ್ಬರಿಸಿದರು. ಈ ಮೂಲಕ 500ಕ್ಕೂ ಹೆಚ್ಚು ದಿನಗಳ ಬಳಿಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಶತಕ ಬಾರಿಸಿ ಮಿಂಚಿದರು. ನಾಲ್ಕನೇ ವಿಕೆಟ್‌ಗೆ ಟ್ರಾವಿಸ್ ಹೆಡ್‌ ಜೊತೆಗೂಡಿದ ಸ್ಮಿತ್‌ ಉತ್ತಮ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಧಾರವಾದರು.

Story first published: Sunday, December 15, 2024, 11:30 [IST]
Other articles published on Dec 15, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+