ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಿದೆ. 18ನೇ ಆವೃತ್ತಿಯಲ್ಲಿ ಎಲ್ಲ ಪಂದ್ಯಗಳು ತಲಾ ಒಂದೊಂದು ಪಂದ್ಯವನ್ನು ಆಡಿದ್ದು, ಎರಡನೇ ಪಂದ್ಯದತ್ತ ಮುಖ ಮಾಡಿವೆ. ಈ ವೇಳೆ ಈ ಆವೃತ್ತಿಯ ಆರಂಭದಲ್ಲಿ ಬಿಗ್ ಸಿಕ್ಸರ್ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಈಗಾಗಲೇ ಹಲವು ಆಟಗಾರರು ಮುಗಿಲೆತ್ತರದ ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಎಲ್ಲರ ಚಿತ್ತವನ್ನು ಕದಿದ್ದಾರೆ.
ಐಪಿಎಲ್‌ನಲ್ಲಿ ಸ್ಟಾರ್ ಆಟಗಾರರು ಅಮೋಘ ಪ್ರದರ್ಶನ ನೀಡಿದ್ದಾರೆ. ಈ ವೇಳೆ ತಾವು ಪ್ರತಿನಿಧಿಸಿದ ತಂಡಗಳನ್ನು ಗೆಲುವಿನ ನಗೆ ಬೀರುವಲ್ಲಿ ಸಫಲರಾಗಿದ್ದಾರೆ. ಈ ಆವೃತ್ತಿಯ ಆರಂಭದಲ್ಲಿ ವಿದೇಶಿ ಆಟಗಾರರು ಆರ್ಭಟ ನಡೆಸಿದ್ದಾರೆ. ಈ ವೇಳೆ ಭರವಸೆಯ ಆಟಗಾರರ ವೇಗದ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾಗಿದ್ದಾರೆ. ಈ ಬಾರಿಯ ಆವೃತ್ತಿಯಲ್ಲಿ ಅತಿ ದೊಡ್ಡ ಸಿಕ್ಸರ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಟ್ರಾವಿಸ್ ಹೆಡ್‌ಗೆ ಅಗ್ರ ಸ್ಥಾನ.

ರಾಜಸ್ಥಾನ ರಾಯಲ್ಸ್ ವಿರುದ್ಧ ಮಾರ್ಚ್ 3 ರಂದ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಅಮೋಘ ಬ್ಯಾಟಿಂಗ್ ನಡೆಸಿ ಮಿಂಚಿದ್ದಾರೆ. ಇವರು ಈ ಪಂದ್ಯದಲ್ಲಿ 105 ಮೀಟರ್ ದೂರ ಸಿಕ್ಸರ್ ಸಿಡಿಸಿದ್ದಾರೆ. ಪ್ರಸಕ್ತ ಐಪಿಎಲ್‌ನಲ್ಲಿ ಇದು ಸದ್ಯ ಅತಿ ದೊಡ್ಡ ಸಿಕ್ಸರ್. ಈ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಜಸ್ಟ್ 31 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 9 ಬೌಂಡರಿ ನೆರವಿನಿಂದ 67 ರನ್ ಸಿಡಿಸಿ ತಂಡದಲ್ಲಿ ಮಿಂಚಿದ್ದರು.
ಈ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಟ್ರಿಸ್ಟಾನ್ ಸ್ಟಬ್ಸ್ ಎರಡನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಇವರು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಅವರು 98 ಮೀಟರ್ ಸಿಕ್ಸ್ ಬಾರಿಸಿದರು. ಈ ಪಂದ್ಯವನ್ನು ದೆಹಲಿ 1 ವಿಕೆಟ್‌ನಿಂದ ಜಯ ಸಾಧಿಸಿತ್ತು.
1. ಟ್ರಾವಿಸ್ ಹೆಡ್ (ಎಸ್‌ಆರ್‌ಎಚ್), ರಾಜಸ್ಥಾನ್ ವಿರುದ್ಧ 105ಮೀ.
2. ಟ್ರಿಸ್ಟಾನ್ ಸ್ಟಬ್ಸ್ (ಡಿಸಿ)- ಎಲ್‌ಎಸ್‌ಜಿ ವಿರುದ್ಧ 98ಮೀ.
3. ಶೆರ್ಫೇನ್ ರುದರ್ಫೋರ್ಡ್ (ಜಿಟಿ)- ಪಂಜಾಬ್ ವಿರುದ್ಧ 97ಮೀ.
4. ನಿಕೋಲಸ್ ಪೂರನ್ (ಎಲ್‌ಎಸ್‌ಜಿ)- ಹೈದರಾಬಾದ್ ವಿರುದ್ಧ 97ಮೀ.
5. ನಿಕೋಲಸ್ ಪೂರನ್ (ಎಲ್‌ಎಸ್‌ಜಿ)- ಹೈದರಾಬಾದ್ ವಿರುದ್ಧ 96ಮೀ.
ಪ್ರಸಕ್ತ ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ನಿಕೋಲಸ್ ಪೂರನ್ ಅವರಿಗೆ ಅಗ್ರ ಸ್ಥಾನ. ಇವರು ಆಡಿದ 2 ಪಂದ್ಯಗಳಲ್ಲಿ 13 ಸಿಕ್ಸರ್ ಸಿಡಿಸಿದ ಹಿರಿಮೆಯನ್ನು ಹೊಂದಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಶ್ರೇಯಸ್ ಅಯ್ಯರ್‌ಗೆ 2ನೇ ಸ್ಥಾನ ಇವರು ಆಡಿದ ಒಂದು ಪಂದ್ಯದಲ್ಲಿ 9 ಸಿಕ್ಸರ್ ಬಾರಿಸಿದ ದಾಖಲೆ ಹೊಂದಿದ್ದಾರೆ.