For Quick Alerts
ALLOW NOTIFICATIONS  
For Daily Alerts
 

Border-Gavaskar Trophy: ಭಾರತ ವಿರುದ್ಧದ ಸರಣಿಗೂ ಮುನ್ನ ಟ್ರಾವಿಸ್ ಹೆಡ್ ಮಹತ್ವದ ನಿರ್ಧಾರ!

ಭಾರತ ಮತ್ತು ಆಸ್ಟ್ರೇಲಿಯಾ ಎರಡು ತಂಡಗಳು ಬೇರೆ ಬೇರೆ ಸರಣಿಗಳಲ್ಲಿ ಬ್ಯುಸಿಯಾಗಿವೆ. ಆದರೆ ಉಭಯ ತಂಡಗಳಿಗೆ ಬಾರ್ಡರ್-ಗವಾಸ್ಕಾರ್ ಟ್ರೋಫಿ ಟೆಸ್ಟ್ ಸರಣಿ ಮೇಲೆ ಕಣ್ಣು. ಸರಣಿ ಆರಂಭಕ್ಕೂ ಮುನ್ನ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಆಟಗಾರರು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

ಆಸ್ಟ್ರೇಲಿಯಾ ಟೆಸ್ಟ್ ನಾಯಕ ಪ್ಯಾಟ್ ಕಮ್ಮಿನ್ಸ್ ಭಾರತ ವಿರುದ್ಧ ಟೆಸ್ಟ್ ಸರಣಿ ಆಡಲೆಂದೆ ವಿಶ್ರಾಂತಿ ತೆಗೆದುಕೊಂಡಿದ್ದಾರೆ. ಇದೀಗ ಕಾಂಗೂರು ಪಡೆಯ ಸ್ಪೋಟಕ ಬ್ಯಾಟರ್ ಟ್ರಾವಿಸ್ ಹೆಡ್ ಕೂಡ ಮಹತ್ವದ ನಿರ್ಧಾರವೊಂದನ್ನು ಮಾಡಿದ್ದಾರೆ. ಭಾರತ ವಿರುದ್ಧದ ಟೆಸ್ಟ್‌ಗಳ ಸರಣಿಗಾಗಿ ಪಾಕಿಸ್ತಾನ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಿಂದ ದೂರ ಸರಿದಿದ್ದಾರೆ.

Travis Head taken an important decision before Test series against India

ಟ್ರಾವಿಸ್ ಹೆಡ್ ಕಳೆದ ವರ್ಷದ 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಗೆಲುವಿನತ್ತ ಮುನ್ನಡೆಸಿದಾಗಿನಿಂದ ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿದ್ದರು. ಅನೇಕ ಟೂರ್ನಿಗಳಲ್ಲಿ ಸತತವಾಗಿ ಹೆಡ್ ಕಾಣಿಸಿಕೊಂಡಿದ್ದಾರೆ. ಬಹುತೇಕ ಎಲ್ಲಾ ಪ್ರವಾಸಗಳಲ್ಲಿ ತಂಡದೊಂದಿಗೆ ಇರುತ್ತಾರೆ. ಆದರೆ ಈಗ ಅವರು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಬಯಸಿರುವುದರಿಂದ ಭಾರತ ವಿರುದ್ಧ ಟೆಸ್ಟ್ ಸರಣಿಗೂ ಮುನ್ನ ಸಣ್ಣ ವಿರಾಮವನ್ನು ಪಡೆದಿದ್ದಾರೆ.

ತಂದೆಯಾಗಲಿರುವ ಹೆಡ್

ಟ್ರಾವಿಸ್ ಹೆಡ್ ಎರಡನೇ ಬಾರಿಗೆ ತಂದೆಯಾಗಲಿದ್ದಾರೆ. ಆದ್ದರಿಂದ ಅವರು ತಮ್ಮ ಹೆಂಡತಿ ಮತ್ತು ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯಲು ಬಯಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ
ಟ್ರಾವಿಸ್ ಹೆಡ್, 'ಭವಿಷ್ಯದಲ್ಲಿ ನನ್ನ ಕುಟುಂಬವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ. ಕ್ರಿಕೆಟ್ ಆಡಲು ನನ್ನನ್ನು ಪ್ರೇರೇಪಿಸುವ ವಿಷಯವೆಂದರೆ ಬಹುಶಃ ನನ್ನ ಕುಟುಂಬ ಮತ್ತು ಸಹ ಆಟಗಾರರು. ವೈಯಕ್ತಿಕ ವಿಷಯಗಳು ಅಥವಾ ನನ್ನ ವೃತ್ತಿಜೀವನದ ಬಗ್ಗೆ ಯೋಚಿಸಲು ನನಗೆ ಆಸಕ್ತಿಯಿಲ್ಲ. ನನ್ನ ಕುಟುಂಬವನ್ನು ಸಂತೋಷವಾಗಿಡಲು ಬಯಸುತ್ತೇನೆ. ಇದನ್ನು ಹೊರೆತುಪಡಿಸಿದರೆ, ನನ್ನ ಸಹ ಆಟಗಾರರೊಂದಿಗೆ ಆಡಲು ಇಷ್ಟಪಡುತ್ತೇನೆ ಎಂದಿದ್ದಾರೆ.

ಕುಟುಂಬ ಮುಖ್ಯ

ಕಳೆದ ಕೆಲವು ವರ್ಷಗಳಿಂದ ನಾನು ಆಟವನ್ನು ಚೆನ್ನಾಗಿ ಆಡಿದ್ದೇನೆ ಎಂದುಕೊಂಡಿದ್ದೇನೆ. ನಾನು ಈಗಲೂ ಕ್ರಿಕೆಟ್ ಆಡುವುದನ್ನು ಇಷ್ಟಪಡುತ್ತೇನೆ. ಟೆಸ್ಟ್ ಕ್ರಿಕೆಟ್ ಆಡುವುದು ನನಗೆ ತುಂಬಾ ಇಷ್ಟ. ಆದರೆ, ಆಟದ ಜೊತೆಗೆ ಕುಟುಂಬವೂ ಮುಖ್ಯ. ಮುಂದಿನ ವರ್ಷವೂ ತುಂಬಾ ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿದ್ದೇವೆ. ಆದ್ದರಿಂದ ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯುವುದು ಬಹಳ ಮುಖ್ಯ. ನಾವು ಈ ಸಮಯವನ್ನು ಮರಳಿ ಪಡೆಯುವುದಕ್ಕೆ ಸಾಧ್ಯವಿಲ್ಲ ಎಂದು ಟ್ರಾವಿಸ್ ಹೆಡ್ ಹೇಳಿದ್ದಾರೆ.

ಮುಂದಿನ ತಿಂಗಳು ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಳ್ಳಲಿದೆ. ಈ ಸಂದರ್ಭದಲ್ಲಿ ಉಭಯ ತಂಡಗಳ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ನವೆಂಬರ್ 22 ರಿಂದ ಟೆಸ್ಟ್ ಸರಣಿಯ ಮೊದಲ ಪಂದ್ಯ ಪರ್ತ್‌ನಲ್ಲಿ ನಡೆಯಲಿದೆ. ಕಳೆದ 10 ವರ್ಷಗಳಿ ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧ ಬಾರ್ಡರ್-ಗವಾಸ್ಕಾರ್ ಟ್ರೋಫಿ ಟೆಸ್ಟ್ ಸರಣಿ ಗೆದ್ದಿಲ್ಲ.

Story first published: Monday, October 21, 2024, 8:00 [IST]
Other articles published on Oct 21, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+