SL vs AUS: ಶ್ರೀಲಂಕಾ ತಂಡಕ್ಕೆ ಸಂಕಷ್ಟ; ಆಸ್ಟ್ರೇಲಿಯಾ ಪರ ಇನ್ನಿಂಗ್ಸ್ ಆರಂಭಿಸಲಿರುವ ಸ್ಪೋಟಕ ಬ್ಯಾಟರ್
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಫೈನಲಿಸ್ಟ್ ತಂಡ ಆಸ್ಟ್ರೇಲಿಯಾ ನವೆಂಬರ್ 29 ರಿಂದ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಟೆಸ್ಟ್ ಸರಣಿಗೂ ಮೊದಲು ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ತಮ್ಮ ಸ್ಪೋಟಕ ಬ್ಯಾಟರ್‌ನನ್ನು ಆರಂಭಿಕರಾಗಿ ಕಣಕ್ಕಿಳಿಸಲು ಯೋಜಿಸಿದ್ದಾರೆ. ಭಾರತ ವಿರುದ್ಧ 10 ವರ್ಷಗಳ ಬಳಿಕ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಆಸ್ಟ್ರೇಲಿಯಾ ಗೆಲ್ಲುವಲ್ಲಿ ಈ ಸ್ಫೋಟಕ ಬ್ಯಾಟರ್ ಪ್ರಮುಖ ಪಾತ್ರವಹಿಸಿದ್ದರು.
ಬುಧವಾರದಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಯಾಗಲಿದೆ ಎಂದು ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ ಖಚಿತಪಡಿಸಿದ್ದಾರೆ. ಸ್ಯಾಮ್ ಕಾನ್‌ಸ್ಟಾಸ್ ಬದಲಿಗೆ ಉಸ್ಮಾನ್ ಖವಾಜಾ ಜೊತೆಗೆ ಟ್ರಾವಿಸ್ ಹೆಡ್ ಇನ್ನಿಂಗ್ಸ್ ತೆರೆಯಲಿದ್ದಾರೆ. ಸ್ಯಾಮ್ ಕಾನ್‌ಸ್ಟಾಸ್ ಆಡುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಗಾಲೆ ಪಿಚ್‌ನಲ್ಲಿ ನಿರಂತರವಾಗಿ ಬದಲಾಗುತ್ತಿರುವ ಪರಿಸ್ಥಿತಿಯಿಂದಾಗಿ ಬ್ಯಾಟಿಂಗ್ ಲೈನ್‌ಅಪ್ ಅಂತಿಮಗೊಳಿಸಲು ವಿಳಂಬವಾಗಲಿದೆ ಎಂದು ಸ್ಮಿತ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ಮಿತ್, 'ಟ್ರಾವಿಸ್ ಉನ್ನತ ಸ್ಥಾನಕ್ಕೆ ಹೋಗುತ್ತಾರೆ. ಅವರ ಪ್ರದರ್ಶನ ಸಾಕಷ್ಟು ಸ್ಥಿರವಾಗಿರುತ್ತದೆ. ಇದರಲ್ಲಿ ಹೆಚ್ಚಿನ ಬದಲಾವಣೆ ಆಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಆಯ್ಕೆಗಾರರು ಭಾರತದಲ್ಲಿ ಕಂಡದ್ದನ್ನು ಇಷ್ಟಪಟ್ಟಿದ್ದಾರೆ. ಹೆಡ್ ಅವಕಾಶ ಪಡೆದಾಗ, ಅವರು ಹೊಸ ಚೆಂಡಿನಲ್ಲಿ ತ್ವರಿತವಾಗಿ ಸ್ಕೋರ್ ಮಾಡುವ ಮೂಲಕ ತಕ್ಷಣವೇ ಬೌಲರ್ ಮೇಲೆ ಒತ್ತಡವನ್ನು ಸೃಷ್ಟಿಸಿದ್ದಾರೆ. ಹಾಗಾಗಿ ಇಲ್ಲಿಯೂ ಅದೇ ಆಲೋಚನೆ ಇದೆ ಎಂದು ತಿಳಿಸಿದ್ದಾರೆ.
ಸ್ಯಾಮ್ ಕಾನ್‌ಸ್ಟಾಸ್ ತನ್ನ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಒಂದು ದಶಕದ ನಂತರ ಆಸ್ಟ್ರೇಲಿಯಾ ತನ್ನ ಮೊದಲ ಟೆಸ್ಟ್ ಸರಣಿಯನ್ನು ಭಾರತದ ವಿರುದ್ಧ ಗೆಲ್ಲಲು ನೆರವಾಗಿದ್ದರು. ಆದರೆ 2023 ರಲ್ಲಿ ಆಸ್ಟ್ರೇಲಿಯಾದ ಭಾರತ ಪ್ರವಾಸದ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ಗಾಯಗೊಂಡ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಬದಲಿಗೆ ಆಡಿದ ಹೆಡ್ ಅವರಿಗೆ ಆರಂಭಿಕ ಬ್ಯಾಟರ್ ಆಗಿ ಸ್ಥಾನ ತಂದುಕೊಟ್ಟಿತು.
ಆಸ್ಟ್ರೇಲಿಯಾ ತಂಡ
ಸ್ಟೀವ್ ಸ್ಮಿತ್ (ನಾಯಕ), ಸೀನ್ ಅಬಾಟ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕೂಪರ್ ಕೊನೊಲಿ, ಟ್ರಾವಿಸ್ ಹೆಡ್ (ಉಪನಾಯಕ), ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಸ್ಯಾಮ್ ಕಾನ್ಸ್ಟಾಸ್, ಮ್ಯಾಥ್ಯೂ ಕುಹ್ನೆಮನ್, ಮಾರ್ನಸ್ ಲ್ಯಾಬುಸ್ಚಾಗ್ನೆ, ನಾಥನ್ ಲಿಯಾನ್, ನಾಥನ್ ಮೆಕ್‌ಸ್ವೀನಿ, ಟೋಡ್‌ಸ್ವೀನಿ ಮಿಚೆಲ್ ಸ್ಟಾರ್ಕ್, ಬ್ಯೂ ವೆಬ್ಸ್ಟರ್.
ಟೆಸ್ಟ್ ಸರಣಿ ವೇಳಾಪಟ್ಟಿ
1 ನೇ ಟೆಸ್ಟ್ ಪಂದ್ಯ: ಜನವರಿ 29 ರಿಂದ 2 ಫೆಬ್ರವರಿ, ಬೆಳಗ್ಗೆ 10:00 ಗಂಟೆಗೆ, ಗಾಲೆ
2ನೇ ಟೆಸ್ಟ್ ಪಂದ್ಯ: ಫೆಬ್ರವರಿ 6 ರಿಂದ 10 ಫೆಬ್ರವರಿ, ಬೆಳಗ್ಗೆ 10:00 ಗಂಟೆಗೆ, ಗಾಲೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications