ENG vs AUS: ಟ್ರಾವಿಸ್ ಹೆಡ್‌ನ ಬಿರುಸಿನ ಬ್ಯಾಟಿಂಗ್‌ಗೆ ಬೆಚ್ಚಿದ ಇಂಗ್ಲೆಂಡ್
ಆಸ್ಟ್ರೇಲಿಯಾ ತಂಡದ ಸ್ಟಾರ್ ಬ್ಯಾಟರ್ ಟ್ರಾವಿಸ್ ಹೆಡ್ ಅವರು ತಮ್ಮ ಅಮೋಘ ಫಾರ್ಮ ಮುಂದುವರೆಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಹೆಡ್ ಬಿರುಸಿನ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾಗಿದ್ದಾರೆ. ತಮ್ಮ ನೈಜ ಶೈಲಿಯಲ್ಲಿ ಬ್ಯಾಟ್ ಮಾಡಿದ ಆಸೀಸ್ ಓಪನರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಬುಧವಾರ ಸೌತಾಂಪ್ಟನ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟ್ರಾವಿಸ್ ಹೆಡ್ ಅಬ್ಬರಿಸಿದರು. ಮೊದಲ ಬ್ಯಾಟ್ ಮಾಡಿದ ಇಂಗ್ಲೆಂಡ್ ಪರ ಆರ್ಭಟಿಸಿದ, ಹೆಡ್ ಅರ್ಧಶತಕ ಬಾರಿಸಿದರು. ಇವರ ಬಿರುಸಿನ ಆಟಕ್ಕೆ ಬ್ರೇಕ್ ಹಾಕಲು ಇಂಗ್ಲೆಂಡ್ ಬೌಲರ್‌ಗಳು ಸಹ ವಿಫಲರಾದರು. ಪವರ್ ಪ್ಲೇನಲ್ಲಿ ಪವರ್ ಫುಲ್ ಆಟವನ್ನು ಆಡಿದ ಹೆಡ್ ಆಸೀಸ್ ತಂಡಕ್ಕೆ ನೆರವಾದರು.

ಹೆಡ್ ಸ್ಪೋಟಕ ಆಟ
ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಪರಿಣಾಮ ಪ್ರವಾಸಿ ಕಾಂಗರೂ ತಂಡ ಪವರ್‌ಪ್ಲೇಯಲ್ಲಿ 86 ರನ್ ಗಳಿಸಿತು. ಪಂದ್ಯದ ಐದನೇ ಓವರ್ ಬೌಲ್ ಮಾಡಿದ ಇಂಗ್ಲೆಂಡ್ ಬೌಲರ್ ಸ್ಯಾಮ್ ಕರನ್ ಓವರ್‌ನಲ್ಲಿ ಹೆಡ್ 30 ರನ್ ಗಳಿಸಿದರು.
ಒಂದೇ ಓವರ್‌ನಲ್ಲಿ 30 ರನ್
ಹೆಡ್ ಮೊದಲ ಮತ್ತು ಎರಡನೇ ಎಸೆತಗಳಲ್ಲಿ ಬೌಂಡರಿಗಳನ್ನು ಬಾರಿಸಿದರು ಮತ್ತು ನಂತರ ಸತತ ಮೂರು ಎಸೆತಗಳಲ್ಲಿ ಸಿಕ್ಸರ್‌ಗಳನ್ನು ಬಾರಿಸಿದರು. ಲೆಫ್ಟ್ ಹ್ಯಾಂಡ್ ಬೌಲರ್‌ನ ಲೈನ್ ಹಾಗೂ ಲೆಂಥ್ ಸಂಪೂರ್ಣ ಹಾಳು ಮಾಡಿದ ಹೆಡ್ ರನ್‌ಗಳನ್ನು ಗುಡ್ಡೆ ಹಾಕಿದರು. ಹೆಡ್ 23 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್ ಸಹಾಯದಿಂದ 59 ರನ್ ಬಾರಿಸಿ ತಂಡಕ್ಕೆ ನೆರವಾದರು.
ಇಂಗ್ಲೆಂಡ್ ಸರಣಿಗೂ ಮುನ್ನ ಸ್ಕಾಟ್ಲೆಂಡ್ ವಿರುದ್ಧ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಟ್ರಾವಿಸ್ ಹೆಡ್ 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸಿದ್ದರು.
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡದ ಪರ ಮ್ಯಾಥ್ಯು ಶಾರ್ಟ್ 41, ಜೋಶ್ ಇಂಗ್ಲಿಶ್ 37 ರನ್ ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ಆಸೀಸ್ 19.3 ಓವರ್‌ಗಳಲ್ಲಿ 179 ರನ್ ಸೇರಿಸಿತು.
ಕಳಪೆ ಆರಂಭ
ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ಪವರ್ ಪ್ಲೇನಲ್ಲಿ ಆತಿಥೇಯ ತಂಡ ಮೂರು ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಂಗ್ಲೆಂಡ್ ತಂಡದ ಪರ ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಆತಿಥೇಯ ತಂಡದ ಪರ ಲಿಯಾಮ್ ಲಿವಿಂಗ್‌ಸ್ಟೋನ್ 37 ರನ್ ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ಇಂಗ್ಲೆಂಡ್ 19.2 ಓವರ್‌ಗಳಲ್ಲಿ 151 ರನ್‌ಗಳಿಗೆ ಆಲೌಟ್ ಆಯಿತು.
ವಿಜೇತ ತಂಡದ ಪರ ಸಿನ ಅಬೋಟ್ 3, ಜೋಶ್ ಹ್ಯಾಜಲ್ ವುಡ್ ಹಾಗೂ ಆಡಂ ಜಂಪಾ ತಲಾ ಎರಡು ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications