Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ENG vs AUS: ಟ್ರಾವಿಸ್‌ ಹೆಡ್‌ ಅಬ್ಬರದ ಶತಕ: ರೋಹಿತ್ ಶರ್ಮಾ ದಾಖಲೆ ಅಳಿಸಿದ ಆಸೀಸ್ ಪ್ಲೇಯರ್

ನಾಟಿಂಗ್‌ಹ್ಯಾಮ್‌: ಭರ್ಜರಿ ಫಾರ್ಮ್‌ನಲ್ಲಿರುವ ಆಸ್ಟ್ರೇಲಿಯಾದ ಟ್ರಾವಿಸ್‌ ಹೆಡ್‌, ಇಂಗ್ಲೆಂಡ್‌ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಬಾರಿಸಿದ್ದಾರೆ. 316 ರನ್‌ಗಳ ಸವಾಲಿನ ಗುರಿಯನ್ನು ಇನ್ನು 36 ಎಸೆತಗಳು ಬಾಕಿ ಇರುವಂತೆ ಮುಟ್ಟಿದ ಆಸೀಸ್‌ ದಾಖಲೆ ನಿರ್ಮಿಸಿದೆ.

ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್‌ 49.4 ಓವರ್‌ಗಳಲ್ಲಿ 315 ರನ್‌ ಸೇರಿಸಿತು. ಆತಿಥೇಯ ತಂಡದ ಪರ ಬೆನ್ ಡಕೆಟ್ 95 ಹಾಗೂ ವಿಲ್‌ ಜಾಕ್ಸ್‌ 62 ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಆಸೀಸ್‌ 44 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 317 ರನ್‌ ಕಲೆ ಹಾಕಿತು. ಈ ಮೂಲಕ ಪ್ರವಾಸಿ ಆಸ್ಟ್ರೇಲಿಯಾ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

Travis Head s Century Powers Australia to Record Win in First ODI Against England

ಜವಾಬ್ದಾರಿ ಮರೆತ ಮಿಚೆಲ್‌

ಸವಾಲಿನ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡದ ಆರಂಭ ಕಳಪೆ ಆಗಿತ್ತು. ನಾಯಕ ಮಿಚೆಲ್ ಮಾರ್ಷ್ 14 ಎಸೆತಗಳಲ್ಲಿ 10 ರನ್‌ ಬಾರಿಸಿ ಔಟ್ ಆದರು. ಆಗ ತಂಡದ ಸ್ಕೋರ್‌ 20 ಆಗಿತ್ತು.

ಎರಡನೇ ವಿಕೆಟ್‌ಗೆ ಟ್ರಾವಿಸ್ ಹೆಡ್‌ ಅವರ ಜೊತೆಗೂಡಿದ ಸ್ಟೀವನ್‌ ಸ್ಮಿತ್‌ (32 ರನ್) ಜವಾಬ್ದಾರಿಯುತ ಆಟದ ಕಣಿಕೆ ನೀಡಿದರು. ಈ ಜೋಡಿ 72 ಎಸೆತಗಳಲ್ಲಿ 76 ರನ್‌ ಸಿಡಿಸಿ ತಂಡಕ್ಕೆ ನೆರವಾಯಿತು. ಮೂರನೇ ವಿಕೆಟ್‌ಗೆ ಕ್ಯಾಮರೂನ್‌ ಗ್ರೀನ್ (32) ಹಾಗೂ ಹೆಡ್‌ ಜೋತೆಗೂಡಿ 64 ಎಸೆತಗಳಲ್ಲಿ 73 ರನ್‌ ಕಾಣಿಕೆ ನೀಡಿದರು.

ಅಜೇಯ ಜೊತೆಯಾಟ

ನಾಲ್ಕನೇ ವಿಕೆಟ್‌ಗೆ ಟ್ರಾವಿಸ್‌ ಹೆಡ್‌ ಹಾಗೂ ಮಾರ್ನಸ್‌ ಲಂಬುಶೇನ್‌ ಅಮೋಘ ಆಟದ ಪ್ರದರ್ಶನ ನೀಡಿತು. ಈ ಜೋಡಿಯನ್ನು ಕಟ್ಟಿ ಹಾಕಲು ಇಂಗ್ಲೆಂಡ್ ತಂಡ ಮಾಡಿಕೊಂಡ ಪ್ಲ್ಯಾನ್ ಎಲ್ಲ ಕೈ ಕೊಟ್ಟಿತು. ಹಂತ ಹಂತವಾಗಿ ಇನಿಂಗ್ಸ್‌ ಕಟ್ಟುತ್ತಾ ಸಾಗಿದ ಜೋಡಿ ಆಸ್ಟ್ರೇಲಿಯಾ ಗೆಲುವಿನಲ್ಲಿ ಅಬ್ಬರಿಸಿತು. 4ನೇ ವಿಕೆಟ್‌ಗೆ ಈ ಜೋಡಿ 107 ಎಸೆತಗಳಲ್ಲಿ ಅಜೇಯ 148 ರನ್‌ಗಳ ಕಾಣಿಕೆ ನೀಡಿತು.

Travis Head s Century Powers Australia to Record Win in First ODI Against England

ಟ್ರಾವಿಸ್ ಹೆಡ್‌ ಶತಕ

ಭರ್ಜರಿ ಫಾರ್ಮ್‌ನಲ್ಲಿರುವ ಟ್ರಾವಿಸ್‌ ಹೆಡ್‌ ತಮ್ಮ ಅಮೋಘ ಫಾರ್ಮ್ ಮುಂದುವರೆಸಿದ್ದಾರೆ. ಇವರು ತಮ್ಮ ಏಕದಿನ ವೃತ್ತಿ ಜೀವನದ ಆರನೇ ಶತಕ ಬಾರಿಸಿದರು. 129 ಎಸೆತಗಳಲ್ಲಿ 20 ಬೌಂಡರಿ, 5 ಸಿಕ್ಸರ್‌ ಸಹಾಯದಿಂದ ಟ್ರಾವಿಸ್ ಹೆಡ್‌ ಅಜೇಯ 154 ರನ್‌ ಸಿಡಿಸಿದರು. ಮಧ್ಯಮ ಕ್ರಮಾಂಕದ ಭರವಸೆಯ ಆಟಗಾರ ಮಾರ್ನಸ್‌ ಲಂಬುಶೇನ್‌ 61 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್‌ ಸಹಾಯದಿಂದ ಅಜೇಯ 77 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು.

ರೋಹಿತ್ ದಾಖಲೆ ಅಳಿಸಿದ ಹೆಡ್

ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಗುರಿ ಬೆನ್ನತ್ತಿದ ಹೆಡ್ ಅತಿ ದೊಡ್ಡ ಇನ್ನಿಂಗ್ಸ್ ಆಡಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಭಾರತದ ನಾಯಕ ರೋಹಿತ್ ಶರ್ಮಾ ಹೆಸರಿನಲ್ಲಿ ದಾಖಲಾಗಿತ್ತು. ರೋಹಿತ್ ಜುಲೈ 2018 ರಲ್ಲಿ ಇಂಗ್ಲೆಂಡ್ ವಿರುದ್ಧ 137 ರನ್‌ಗಳ ಅಜೇಯ ಇನ್ನಿಂಗ್ಸ್ ಕಟ್ಟಿದ್ದರು.

ಟ್ರಾವಿಸ್‌ ಹೆಡ್‌ ಹಲವು ದಾಖಲೆ

ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಟ್ರಾವಿಸ್ ಹೆಡ್‌ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಏಕದಿನ ಪಂದ್ಯದಲ್ಲಿ ಗರಿಷ್ಠ ರನ್‌ ಬಾರಿಸಿದ ಎರಡನೇ ಬ್ಯಾಟರ್‌ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಮೊದಲ ಸ್ಥಾನದಲ್ಲಿದೆ ಶೇನ್ ವ್ಯಾಟ್ಸನ್‌ ಇದ್ದು, ಇವರು 2011ರಲ್ಲಿ ಅಜೇಯ 161 ರನ್ ಬಾರಿಸಿದ್ದರು.

ಏಕದಿನ ಕ್ರಿಕೆಟ್‌ನಲ್ಲಿ ಒಂದೇ ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ಮೂರನೇ ಆಸ್ಟ್ರೇಲಿಯನ್‌ ಬ್ಯಾಟರ್‌ ಎಂಬ ಹೆಗ್ಗಳಿಕೆ ಸಹ ಟ್ರಾವಿಸ್ ಹೆಡ್‌ ಪಾಲಾಗಿದೆ. ಡೇವಿಡ್ ವಾರ್ನರ್‌ 2016ರಲ್ಲಿ ಒಂದೇ ಇನಿಂಗ್ಸ್‌ನಲ್ಲಿ 24, ಗ್ಲೇನ್ ಮ್ಯಾಕ್ಸ್‌ವೆಲ್‌ 2023ರಲ್ಲಿ 21 ಬೌಂಡರಿ ಬಾರಿಸಿದ್ದು, ಹೆಡ್‌ ಗಿಂತ ಮುಂದಿದ್ದಾರೆ.

Story first published: Friday, September 20, 2024, 9:45 [IST]
Other articles published on Sep 20, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+