Travis Head: ಟ್ರಾವಿಸ್ ಹೆಡ್ ಸ್ಫೋಟಕ ಆಟಕ್ಕೆ ಬೆಚ್ಚಿದ ಸ್ಕಾಟ್ಲೆಂಡ್
ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರರು ತಮ್ಮ ಛಾಪನ್ನು ವಿಶ್ವ ಕ್ರಿಕೆಟ್‌ನಲ್ಲಿ ಮುಡಿಸಿದ್ದಾರೆ. ಬುಧವಾರ ಆಸೀಸ್ ಹಾಗೂ ಸ್ಕಾಟ್ಲೆಂಡ್ ನಡುವಣ ಟಿ20 ಪಂದ್ಯದಲ್ಲೂ ಮತ್ತೊಂದು ದಾಖಲೆಯನ್ನು ಕಾಂಗರೂ ಆಟಗಾರ ರಚಿಸಿದ್ದಾರೆ. ಟ್ರಾವಿಸ್ ಹೆಡ್ ಸ್ಫೋಟಕ ಆಟಕ್ಕೆ ಸ್ಕಾಟ್ಲೆಂಡ್ ಬೌಲರ್‌ಗಳು ಕಕ್ಕಾಬಿಕ್ಕಿಯಾದರು. ಇವರ ಅಮೋಘ ಆಟದ ನೆರವಿನಿಂದ ಆಸೀಸ್ 155 ರನ್‌ಗಳ ಗುರಿಯನ್ನು ಕೇವಲ 9.4 ಓವರ್‌ಗಳಲ್ಲಿ ಮುಟ್ಟಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ಆಸ್ಟ್ರೇಲಿಯಾ ತಂಡದ ಬಿಗುವಿನ ದಾಳಿಗೆ ಕೊಂಚ ನಲುಗಿತು. ಪರಿಣಾಮ ಸ್ಕಾಟ್ಲೆಂಡ್ ಈ ಪಂದ್ಯದಲ್ಲಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 154 ರನ್ ಸೇರಿಸಿತು. ಟಿ20 ಕ್ರಿಕೆಟ್‌ನಲ್ಲಿ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಕೇವಲ 9.4 ಓವರ್‌ಗಳಲ್ಲಿ 3 ವಿಕೆಟ್‌ಗೆ 156 ರನ್ ಸೇರಿಸಿ ಅಬ್ಬರಿಸಿತು. ಈ ಗೆಲುವಿನ ಹೀರೋ ಟ್ರಾವಿಸ್ ಹೆಡ್.

ಟ್ರಾವಿಸ್ ಸ್ಪೋಟಕ ಆಟ
ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಸ್ಕಾಟ್ಲೆಂಡ್ ವಿರುದ್ಧ ಸ್ಫೋಟಕ ಆಟವನ್ನು ಆಡಿದ್ದಾರೆ. ಇವರು ಅಬ್ಬರದ ಆಟದ ನೆರವಿನಿಂದ ಆಸೀಸ್ ಸುಲಭವಾಗಿ ಗೆಲುವು ದಾಖಲಿಸಿತು. ಟ್ರಾವಿಸ್ ಕೇವಲ 25 ಎಸೆತಗಳಲ್ಲಿ 12 ಬೌಂಡರಿ, 5 ಸಿಕ್ಸರ್ ಸಹಾಯದಿಂದ 80 ರನ್ ಸಿಡಿಸಿ ಔಟ್ ಆದರು. ಈ ವೇಳೆ ಅವರ ಸ್ಟ್ರೈಕ್ ರೇಟ್ 320 ಆಗಿದೆ. ಟ್ರಾವಿಸ್ ಹೆಡ್ ಏಳನೇ ಓವರ್‌ನಲ್ಲಿ ಔಟ್ ಆದರು. ಒಂದು ವೇಳೆ ಇವರು ಔಟ್ ಆಗದೇ ಉಳಿದಿದ್ದರೆ ಪಂದ್ಯ ಇನ್ನು ಬೇಗ ಮುಗಿಯಬಹುದಿತ್ತು.
ವೇಗದ ಅರ್ಧಶತಕ
ಆರಂಭದಿಂದಲೂ ಸ್ಫೋಟಕ ಆಟಕ್ಕೆ ಮಣೆ ಹಾಕಿದ್ದ ಟ್ರಾವಿಸ್ ಹೆಡ್ ತಮ್ಮ ನೈಜ ಆಟವನ್ನು ಮುಂದುವರೆಸಿದರು. ಕೇವಲ 17 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಟ್ರಾವಿಸ್ ಹೆಡ್ ಅಬ್ಬರಿಸಿದರು. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ವೇಗವಾಗಿ ಅರ್ಧಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜಂಟಿ ಮೊದಲ ಸ್ಥಾನ ಪಡೆದಿದ್ದಾರೆ. ಆಸೀಸ್ ಆಟಗಾರ ಮಾರ್ಕಸ್ ಸ್ಟೋಯ್ನಿಸ್ ಸಹ 17 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ.
ಇವರನ್ನು ಬಿಟ್ಟರೆ ಎರಡನೇ ಸ್ಥಾನದಲ್ಲೂ ಇಬ್ಬರು ಆಟಗಾರರು ಇದ್ದಾರೆ. ಆಸೀಸ್ ಪರ ವೇಗವಾಗಿ ಅರ್ಧಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಡೇವಿಡ್ ವಾರ್ನರ್, ಗ್ಲೇನ್ ಮ್ಯಾಕ್ಸ್‌ವೆಲ್ ಇದ್ದು, ಈ ಆಟಗಾರರು 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.
ಪವರ್ ಪ್ಲೇನಲ್ಲಿ ಪವರ್ ಫುಲ್ ಆಟ
ಟ್ರಾವಿಸ್ ಹೆಡ್ ಈ ಪಂದ್ಯದಲ್ಲಿ ಮತ್ತೊಂದು ದಾಖಲೆಯನ್ನು ಸಹ ಬರೆದಿದ್ದಾರೆ. ಪವರ್‌ಪ್ಲೇನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ಶ್ರೇಯ ಸಹ ಇವರದ್ದಾಗಿದೆ. ಈ ಮೂಲಕ ಟ್ರಾವಿಸ್ ಹೆಡ್ ಪಾಲ್ ಸ್ಟರ್ಲಿಂಗ್ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಪಾಲ್ ಸ್ಟರ್ಲಿಂಗ್ ಪವರ್ ಪ್ಲೇನಲ್ಲಿ 67 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದರು. ಈಗ ಈ ದಾಖಲೆ ಟ್ರಾವಿಸ್ ಹೆಡ್ ಪಾಲಾಗಿದೆ. ಇವರು ಪವರ್ ಪ್ಲೇನಲ್ಲಿ 73 ರನ್ ಸಿಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications