Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಯೋಸೆಕ್ಯೂರ್ ಬಬಲ್‌ನಲ್ಲಿರುವುದು 'ದೊಡ್ಡ ತ್ಯಾಗ': ಟ್ರೆಂಟ್ ಬೋಲ್ಟ್

Trent Boult explains living inside bio-secure bubble is a sacrifice for a player

ಕೊರೊನಾ ವೈರಸ್‌ನಿಮದಾಗಿ ಆಟಗಾರರ ರಕ್ಷಣೆಗೆ ಬಯೋಸೆಕ್ಯೂರ್ ಬಬಲ್ ನಿರ್ಮಿಸಲಾಗುತ್ತಿದೆ. ಈ ಮೂಲಕ ಕ್ರಕೆಟ್‌ಗೆ ಸೇರಿದಂತೆ ಎಲ್ಲಾ ಕ್ರೀಡೆಗಳಿಗೆ ಚಾಲನೆ ನೀಡಲಾಗಿದೆ. ಆದರೆ ಈ ಬಯೋ ಸೆಕ್ಯೂರ್ ಬಬಲ್‌ನಲ್ಲಿದ್ದು ಟೂರ್ನಿಗಳಲ್ಲಿ ಪಾಲ್ಗೊಳ್ಳುವುದು ಎಷ್ಟು ಕಠಿಣ ಸವಾಲು ಎಂಬುದನ್ನು ಕ್ರಿಕೆಟಿಗರು ವಿವರಿಸುತ್ತಿದ್ದಾರೆ. ಈಗ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಕೂಡ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೀವಿಸ್ ವೇಗಿ ಟ್ರೆಂಟ್ ಬೋಲ್ಟ್ ಬಯೋ ಸೆಕ್ಯೂರ್‌ನಲ್ಲಿದ್ದು ಕ್ರಿಕೆಟ್ ಸರಣಿಗಳಲ್ಲಿ ಪಾಲ್ಗೊಳ್ಳುವುದು ಆಟಗಾರರ ಪಾಲಿಗೆ ಅತ್ಯಂತ ದೊಡ್ಡ ತ್ಯಾಗ ಎಂದು ವಿವರಿಸಿದ್ದಾರೆ. ತಮ್ಮ ಸ್ವಾತಂತ್ರ್ಯವನ್ನು ತ್ಯಾಗ ಮಾಡಿಕೊಮಡು ಆಟಗಾರರು ಈ ಬಯೋ ಸೆಕ್ಯೂರ್ ಬಬಲ್‌ನಲ್ಲಿ ಇರುತ್ತಾರೆ ಎಂದು ಹೇಳಿದ್ದಾರೆ.

"ನನಗೆ ಪ್ರತಿಯೊಬ್ಬರ ವಿಚಾರದಲ್ಲೂ ಇದನ್ನು ಹೇಳಲು ಸಾಧ್ಯವಿಲ್ಲ. ಆದರೆ ಆಟದಲ್ಲಿ ಇದು ಖಂಡಿತವಾಗಿಯೂ ದೊಡ್ಡ ಪಾತ್ರವನ್ನು ವಹಿಸುತ್ತದೆ. ನ್ಯೂಜಿಲೆಂಡ್‌ಗೆ ಮರಳಿದ ಬಳಿಕವೂ ನೀವು ಹೊರಗೆ ಹೋಗುವ ಮುನ್ನ ಎರಡು ವಾರಗಳನ್ನು ಹೋಟೆಲ್‌ನಲ್ಲೇ ಕಳೆಯಬೇಕು" ಎಂದು ಟ್ರೆಂಟ್ ಬೋಲ್ಟ್ ಹೇಳಿದ್ದಾರೆ.

"ವಿಶ್ವ ಈ ಪರಿಸ್ಥಿತಿಯ್ನು ಎದುರಿಸುತ್ತಿರುವುದು ದುರಂತ. ಆದರೆ ಇದು ಅತಿ ವಾಸ್ತವಿಕವಾಗಿದೆ. ಇದರಿಂದಾಗಿ ಜನರು ಯಾವ ರೀತಿಯ ಭಾವನೆಯನ್ನು ಹೊಂದಿದ್ದಾರೆ, ಅವರು ಏನನ್ನು ಮಾಡಲು ಸಾಧ್ಯವಿದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ" ಎಂದು ಟ್ರೆಂಟ್ ಬೋಲ್ಟ್ ಇಎಸ್‌ಪಿಎನ್ ಕ್ರಿಕ್‌ಇನ್ಫೋಗ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ವೇಗಿ ಕಗಿಸೋ ರಬಡಾ ಕೂಡ ಬಯೋ ಸೆಕ್ಯುರ್ ಬಬಲ್ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಬಯೋಸೆಕ್ಯೂರ್ ಬಬಲ್ ಎನ್ನುವುದು ಐಶಾರಾಮಿ ಸೆರೆಮನೆಯಿದ್ದಂತೆ ಎಂದು ರಬಡಾ ಬಣ್ಣಿಸಿದ್ದಾರೆ.

Story first published: Tuesday, November 24, 2020, 14:19 [IST]
Other articles published on Nov 24, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+