Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Trent Boult: ಮುಂಬೈ ಪ್ಲೇಯರ್‌ ಹಿಡಿದ ಕ್ಯಾಚ್‌ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್

ಟ್ರೆಂಟ್ ಬೌಲ್ಟ್ ತನ್ನ ಸ್ವಿಂಗ್ ಬೌಲಿಂಗ್‌ಗೆ ಹೆಸರುವಾಸಿ. ಆದರೆ ಫೀಲ್ಡಿಂಗ್‌ನಲ್ಲಿ ಅವರು ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರು ಎಂದು ಸಾಬೀತು ಪಡಿಸಿದ್ದಾರೆ. ಇಂಟರ್‌ನ್ಯಾಷನಲ್‌ ಲೀಗ್‌ ಟಿ20ಯಲ್ಲಿ ಬೋಲ್ಟ್ ಒಂದೇ ಕೈಯಿಂದ ಅದ್ಭುತವಾದ ಕ್ಯಾಚ್ ಹಿಡಿದಿದ್ದು, ಅದರ ವರ್ಣನೆಯನ್ನು ಪದಗಳಲ್ಲಿ ಮಾಡಲು ಸಾಧ್ಯವಿಲ್ಲ. ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ತಂಡದ ಪರ ಕಣಕ್ಕೆ ಇಳಿದಿದ್ದ ಬೋಲ್ಟ್‌ ಹಿಡಿದ ಕ್ಯಾಚ್‌ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಬೌಲ್ಟ್ ಅವರ ಕ್ಯಾಚ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ತನ್ನತ್ತ ಬಂದ ಚೆಂಡನ್ನು ನೋಡಿದ ಬೋಲ್ಟ್ ಸ್ವಲ್ಪ ದೂರ ಹಿಂದಕ್ಕೆ ಓಡಿ ನಂತರ ಜಿಗಿದು ಒಂದು ಕೈಯಿಂದ ಕ್ಯಾಚ್ ಹಿಡಿಯುವುದನ್ನು ವಿಡಿಯೋದಲ್ಲಿ ಕಾಣಬಹುದು.

Trent Boult: The Mumbai players catch has gone viral on social media

ಒಂದು ಕೈಯಿಂದ ಬೌಲ್ಟ್ ಹಿಡಿದ ಕ್ಯಾಚ್ ನೋಡುಗರ ಕಣ್ಮನ ಸೆಳೆಯುತ್ತದೆ. ಕ್ಯಾಚ್ ತೆಗೆದುಕೊಂಡ ನಂತರ, ಅವರು ನೆಲಕ್ಕೆ ಬಿದ್ದರು. ಅವರು ಧರಿಸಿದ್ದ ಟೋಪಿ ಮತ್ತು ಕನ್ನಡಕವೂ ಬೀಳುತ್ತದೆ. ಬೌಲ್ಟ್ ಕ್ಯಾಚ್ ನೋಡಿದ ಕಾಮೆಂಟೇಟರ್ ಕೂಡ "ಓ... ಹೋ... ವಾವ್! ಸೂಪರ್ ಮ್ಯಾನ್ ಮೈದಾನದಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ತಿಳಿಸಿದರು.

ನಂತರ ವೀಡಿಯೊದಲ್ಲಿ, ಟ್ರೆಂಟ್ ಬೌಲ್ಟ್ ಅವರ ಪಡೆದ ಕ್ಯಾಚ್ ಅನ್ನು ಸ್ಲೋ ಮೋಷನ್‌ನಲ್ಲಿ ತೋರಿಸಲಾಗಿದೆ. ಇದರಲ್ಲಿ ಬೌಲ್ಟ್ ಎಷ್ಟು ಸುಂದರವಾಗಿ ಕ್ಯಾಚ್ ಹಿಡಿದಿದ್ದಾರೆ ಎಂಬುದನ್ನು ಕಾಣಬಹುದು. ಬೋಲ್ಟ್ ಹಿಡಿದ ಕ್ಯಾಚ್ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪ.

ನ್ಯೂಜಿಲೆಂಡ್‌ನ ಸ್ಟಾರ್ ವೇಗಿ ಟೂರ್ನಿಯಲ್ಲಿ ಎಂಐ ಎಮಿರೇಟ್ಸ್ ಪರ ಎಸ್‌ಎ20 ಆಡುತ್ತಿದ್ದಾರೆ. ಅಬುಧಾಬಿ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಬೋಲ್ಟ್ ಪಡೆ 8 ವಿಕೆಟ್ ಗಳ ಜಯ ಸಾಧಿಸಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಬುಧಾಬಿ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು 188 ರನ್ ಸೇರಿಸಿತು. ತಂಡದ ಪರ ಆಂಡ್ರೆ ರಸೆಲ್ 17 ಎಸೆತಗಳಲ್ಲಿ 6 ಸಿಕ್ಸರ್‌ಗಳ ನೆರವಿನಿಂದ 46 ರನ್‌ಗಳ ದೊಡ್ಡ ಇನ್ನಿಂಗ್ಸ್ ಆಡಿದರು.

ಗುರಿ ಬೆನ್ನಟ್ಟಿದ ಎಂಐ ಎಮಿರೇಟ್ಸ್ 19 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ತಂಡದ ಪರ ಮುಹಮ್ಮದ್ ವಾಸಿಂ 61 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 87 ರನ್ ಗಳಿಸಿದರು. ಇದಲ್ಲದೇ ಕುಸಾಲ್ ಪೆರೆರಾ 27 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡ 56 ರನ್ ಗಳಿಸಿದರು.

Story first published: Monday, January 29, 2024, 15:08 [IST]
Other articles published on Jan 29, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+