Trent Boult: ಸನ್ ಬ್ಯಾಟಿಂಗ್ ವಿಭಾಗಕ್ಕೆ ಕಾಡಿದ ಟ್ರೆಂಟ್ ಬೌಲ್ಟ್
ಅನುಭವಿ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅಬ್ಬರದ ಪ್ರದರ್ಶನ ನೀಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ 18ನೇ ಆವೃತ್ತಿಯಲ್ಲಿ ಸತತ ನಾಲ್ಕನೇ ಗೆಲುವು ಸಾಧಿಸುವಲ್ಲಿ ಟ್ರೆಂಟ್ ತಮ್ಮದೇ ಕಾಣಿಕೆ ನೀಡಿದ್ದಾರೆ. ಇವರು ಲೀಗ್ ಹಂತದ ಒಂಬತ್ತನೇ ಪಂದ್ಯದಲ್ಲಿ ಮುಂಬೈ ಗೆಲುವಿನಲ್ಲಿ ಮಿಂಚಿದರು. ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟರ್‌ಗಳನ್ನು ಕಾಡಿದ ಟ್ರೆಂಟ್ ಬೌಲ್ಟ್ ಅಬ್ಬರಿಸಿದರು.
ಬುಧವಾರ ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಟ್ರೆಂಟ್ ಬೌಲ್ಟ್ ತಮ್ಮ ಅನುಭವ ಬಳಸಿಕೊಂಡು ಬೌಲಿಂಗ್ ನಡೆಸಿದರು. ಇಷ್ಟು ದಿನ ಕಾಣುತ್ತಿದ್ದಂ ಬೌಲ್ಟ್ ಬೌಲಿಂಗ್ ದಾಳಿಗಿಂತ ಭಿನ್ನವಾಗಿ ಕಂಡ ಬೌಲ್ಟ್ ಆಕ್ರಮಕ ರೂಪ ತಾಳಿದರು. ತಮ್ಮ ಮೇಲೆ ಮುಂಬೈ ಇಂಡಿಯನ್ಸ್ ಇಟ್ಟ ನಂಬಿಕೆಗೆ ಪೂರಕವಾಗಿ ಬೌಲಿಂಗ್ ಮಾಡಿದ ಟ್ರೆಂಟ್ ಬೌಲ್ಟ್ ಹೈದರಾಬಾದ್ ಬ್ಯಾಟರ್‌ಗಳಿಗೆ ಕಾಡಿದರು. ಪವರ್ ಪ್ಲೇನಲ್ಲಿ ಹಾಗೂ ಡೆತ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಲು ಹೆಸರುವಾಸಿಯಾಗಿರುವ ಟ್ರೆಂಟ್ ಬೌಲ್ಟ್ ಕ್ಲಾಸಿಕ್ ಬೌಲಿಂಗ್ ಪ್ರದರ್ಶನ ನೀಡಿದರು.

ಆರಂಭದಲ್ಲಿ ಸನ್‌ರೈಸರ್ಸ್ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಪೆಟ್ಟು ನೀಡಿದರ ಟ್ರೆಂಟ್ ಬೌಲ್ಟ್ ಆರ್ಭಟಿಸಿದರು. ಟಿ20 ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ಟ್ರಾವಿಸ್ ಹೆಡ್, ರನ್ ವೇಗಕ್ಕೆ ಚುರುಕು ಮುಟ್ಟಿಸುವ ಭರದಲ್ಲಿ ನಮನ್ ಧಿರ್ ಹಿಡಿದ ಉತ್ತಮ ಕ್ಯಾಚ್‌ಗೆ ಬಲಿಯಾದರು. ಈ ವಿಕೆಟ್‌ನ್ನು ತಮ್ಮ ಕೋಟಾದ ಮೊದಲ ಓವರ್‌ನಲ್ಲಿ ಪಡೆದು ಬೌಲ್ಟ್ ಅಬ್ಬರಿಸಿದರು. ಇದಾದ ಬಳಿಕ ತಮ್ಮ ಎರಡನೇ ಓವರ್‌ನಲ್ಲಿ ಟಿ20 ಕ್ರಿಕೆಟ್ ಲ್ಲಿ ಭಾರತವನ್ನು ಪ್ರತಿನಿಧಿಸಿಧಿಸಿರುವ ಅಭಿಷೇಕ್ ಶರ್ಮಾಗೆ ಖೆಡ್ಡಾ ತೋಡಿದರು.
ಡಬಲ್ ಶಾಕ್
ಪವರ್ ಪ್ಲೇನ್‌ನಲ್ಲಿ ಎರಡು ವಿಕೆಟ್ ಪಡೆದು ಅಬ್ಬರಿಸಿದ್ದ ಟ್ರೆಂಟ್ ಬೌಲ್ಟ್ ಕೊನೆಯಲ್ಲಿ ಅಮೋಘ ಬೌಲಿಂಗ್ ದಾಳಿ ನಡೆಸಿದರು. ಇವರು ಕೊನೆಯ ಓವರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಡಬಲ್ ಶಾಕ್ ನೀಡಿದರು. ಅದಾಗಲೆ ಮೈದಾನದಲ್ಲಿ ತಳವೂರಿ ರನ್ ಕಲೆ ಹಾಕಿದ್ದ ಕನ್ನಡಿಗ ಅಭಿನವ್ ಮನೋಹರ್ ಅವರು ಹಿಟ್ ವಿಕೆಟ್ ಆದರೆ, ಪ್ಯಾಟ್ ಕಮಿನ್ಸ್ ಅವರಿಗೆ ತಮ್ಮ ನೈಜ್ಯ ಬೌಲಿಂಗ್ ಎಸೆದು ಕಾಡಿದರು. ಇವರ ಅಮೋಘ ಬೌಲಿಂಗ್ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಹ ಲಭಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications