ದಕ್ಷಿಣ ಆಫ್ರಿಕಾ ಪರ ಮಂದೀಪ್ ಫೀಲ್ಡಿಂಗ್, ಟ್ವೀಟ್ಸ್ ಪ್ರತಿಕ್ರಿಯೆ
ಚೆನ್ನೈ, ಆಗಸ್ಟ್ 10: ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ ಭಾರತ ಎ ತಂಡ ಭರ್ಜರಿ ಜಯ ದಾಖಲಿಸಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತೇ ಇರುತ್ತದೆ. ಈ ನಡುವೆ ದಕ್ಷಿಣ ಆಫ್ರಿಕಾ ತಂಡದ ಆಟಗಾರರು ಕಲುಷಿತ ಆಹಾರ ಸೇವಿಸಿ ಆಸ್ಪತ್ರೆ ಸೇರಿದ ಕಹಿ ಘಟನೆಯೂ ನಡೆಯಿತು. ತ್ರಿಕೋನ ಸರಣಿಯ ಪಂದ್ಯದಲ್ಲಿ ಭಾರತ ತಂಡ ಆಟಗಾರರ ಪ್ರವಾಸಿ ದಕ್ಷಿಣ ಆಫ್ರಿಕಾ ಪರ ಫೀಲ್ಡಿಂಗ್ ಮಾಡಿದ್ದು ವಿಶೇಷ.
ದಕ್ಷಿಣ ಆಫ್ರಿಕಾ ತಂಡದ 10 ಆಟಗಾರರು ಅಸ್ವಸ್ಥರಾಗಿದ್ದರು. ಹೀಗಾಗಿ ತಂಡದ ಪರ ಫೀಲ್ಡಿಂಗ್ ಮಾಡಲು ಆಟಗಾರರ ಕೊರತೆ ಎದುರಾಗಿತ್ತು. ಹೀಗಾಗಿ ಭಾರತದ ಇನಿಂಗ್ಸ್ನ 32ನೇ ಓವರ್ನಲ್ಲಿ ಮಂದೀಪ್ ಸಿಂಗ್ ಅವರು ಎಡ್ಡಿ ಲೀ ಹೆಸರಿನ ದಕ್ಷಿಣ ಆಫ್ರಿಕಾ ಆಟಗಾರನ ಜೆರ್ಸಿ ಧರಿಸಿ ಕಣಕ್ಕಿಳಿದರು. ಪಂದ್ಯ ಮುಗಿಯುವ ತನಕ ಮಂದೀಪ್ ಕ್ಷೇತ್ರರಕ್ಷಣೆ ಮಾಡಿದರು.
ದಕ್ಷಿಣ ಆಫ್ರಿಕಾ ತಂಡದ ವಿಡಿಯೋ ವಿಶ್ಲೇಷಕ ಹೆಂಡ್ರಿಕ್ಸ್ ಕೋಯ್ಜನ್ ಅವರು ಕೂಡಾ ಕಣಕ್ಕಿಳಿದು ಫೀಲ್ಡಿಂಗ್ ಮಾಡಿದರು. ದಕ್ಷಿಣ ಆಫ್ರಿಕಾ ತಂಡ ಒಡ್ಡಿದ್ದ 245 ರನ್ ಮೊತ್ತವನ್ನು ಭಾರತ ಎ ತಂಡ 37.4 ಓವರ್ ಗಳಲ್ಲೇ ಚೇಸ್ ಮಾಡಿ ಬೋನಸ್ ಅಂಕ ಪಡೆದುಕೊಂಡಿತು.
ಆಟಗಾರರ ಅಸ್ವಸ್ಥತೆಯಿಂದ ಆಫ್ರಿಕಾ ತಂಡದ ವೇಳಾಪಟ್ಟಿಯನ್ನೂ ಬದಲಾಯಿಸಲಾಗಿದ್ದು, ಸೋಮವಾರ ಆಫ್ರಿಕಾ ಎ ತಂಡದ ಬದಲು ಭಾರತ ಎ ತಂಡ ಆಸ್ಟ್ರೇಲಿಯ ಎ ತಂಡವನ್ನು ಎದುರಿಸಲಿದೆ.

ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ ಭಾರತಕ್ಕೆ ಜಯ
ಭಾರತ ಎ ತಂಡ ಏಕದಿನ ತ್ರಿಕೋನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ. ಇದರಿಂದ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದ ತಂಡ ಬೋನಸ್ ಅಂಕ ಸಹಿತ ಟೂರ್ನಿಯ ಮೊದಲ ಗೆಲುವಿನ ನಗೆ ಬೀರಿದೆ.
ಡಿಕಾಕ್ ಶತಕ ನಂತರ ಆಸ್ಪತ್ರೆಗೆ
92ರನ್ ಗಳಿಸುವಷ್ಟರಲ್ಲಿ ಅಗ್ರ 4 ವಿಕೆಟ್ ಕಳೆದುಕೊಂಡು ದುಃಸ್ಥಿತಿಯಲ್ಲಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಕ್ವಿಂಟಾನ್ ಡಿಕಾಕ್ ನೆರವಿಗೆ ಬಂದರು. ಡಿಕಾಕ್ 108 ರನ್ ಗಳಿಸಿದರೆ, ಡೇನ್ ವಿಲಾಸ್ 50ರನ್ ಗಳಿಸಿ ತಂಡದ ಮೊತ್ತವನ್ನು 244ಕ್ಕೇರಿಸಿದರು. ಅದರೆ, ಭೋಜನ ವಿರಾಮದ ಬಳಿಕ ಶತಕವೀರ ಡಿಕಾಕ್ ಆಸ್ಪತ್ರೆ ಸೇರಬೇಕಾಯಿತು.
ಮಯಾಂಕ್-ಉನ್ಮುಕ್ತ್ ಜೊತೆಯಾಟ
ಆಸೀಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಉತ್ತಮ ಫಾರ್ಮ್ ನಲ್ಲಿರುವ ಉನ್ಮುಕ್ತ್ ಚಂದ್ ಹಾಗೂ ಕರ್ನಾಟಕದ ಮಯಾಂಕ್ ಅಗರ್ ವಾಲ್ ಅವರು 34.4 ಓವರ್ಗಳಲ್ಲಿ 219ರನ್ಗಳ ಭರ್ಜರಿ ಜತೆಯಾಟ ಕಂಡರು. ಮಯಾಂಕ್ 130, ಉನ್ಮುಕ್ತ್ 90 ರನ್ ಗಳಿಸಿ ಔಟಾದರು.
ಸಚಿನ್ ಕೂಡಾ ಫೀಲ್ಡ್ ಮಾಡಿದ್ರು
ಈ ಹಿಂದೆ ಸಚಿನ್ ಕೂಡಾ ಈ ರೀತಿ ಪ್ರವಾಸಿ ತಂಡದ ಪರ ಫೀಲ್ಡ್ ಮಾಡಿದ್ರು ಎಂದು ಟ್ವೀಟ್.
ದಕ್ಷಿಣ ಆಫ್ರಿಕಾ ಪರ ಮಂದೀಪ್ ಫೀಲ್ಡಿಂಗಾ?
ದಕ್ಷಿಣ ಆಫ್ರಿಕಾ ಪರ ಮಂದೀಪ್ ಫೀಲ್ಡಿಂಗಾ? ಇದು ಹೇಗೆ ಸಾಧ್ಯ ಎಂದು ಅಚ್ಚರಿ ವ್ಯಕ್ತಪಡಿಸಿದ ಅಭಿಮಾನಿಗಳು.
ಆರ್ ಸಿಬಿ ಆಟಗಾರನ ಸಾಧನೆ ಎಂದು ಟ್ವೀಟ್
ಆರ್ ಸಿಬಿ ಆಟಗಾರ ಮಂದೀಪ್ ಸಿಂಗ್ ಸಾಧನೆ ಎಂದು ಟ್ವೀಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications